AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕಿಸ್ತಾನದ ಬೀದಿಗಳಲ್ಲಿ ಭಾರತೀಯ ಕ್ರಿಕೆಟ್ ತಂಡದ ಜೆರ್ಸಿ ಹಾಕಿಕೊಂಡು ಅಡ್ಡಾಡಿದ ಬ್ರಿಟಿಷ್ ಪ್ರಜೆ

ಪಾಕಿಸ್ತಾನದ ಬೀದಿಗಳಲ್ಲಿ ಭಾರತ ಕ್ರಿಕೆಟ್​​ ತಂಡ ಜರ್ಸಿ ಹಾಕಿಕೊಂಡು ಬ್ರಿಟಿಷ್ ಕಂಟೆಂಟ್ ಕ್ರಿಯೆಟರ್​ ಓಡಾಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. ಅಲೆಕ್ಸ್ ವಾಂಡರ್ಸ್ ಎಂಬ ಬ್ರಿಟಿಷ್ ಕಂಟೆಂಟ್ ಕ್ರಿಯೆಟರ್​ ಈ ಬಗ್ಗೆ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.

ಪಾಕಿಸ್ತಾನದ ಬೀದಿಗಳಲ್ಲಿ ಭಾರತೀಯ ಕ್ರಿಕೆಟ್ ತಂಡದ ಜೆರ್ಸಿ ಹಾಕಿಕೊಂಡು ಅಡ್ಡಾಡಿದ ಬ್ರಿಟಿಷ್ ಪ್ರಜೆ
ವೈರಲ್​​ ವಿಡಿಯೋ
ಸಾಯಿನಂದಾ
| Edited By: |

Updated on:Jun 28, 2025 | 1:53 PM

Share

ಆಪರೇಷನ್​​​ ಸಿಂದೂರ್​ದ ನಂತರ ಭಾರತ ಹಾಗೂ ಪಾಕಿಸ್ತಾನ ಸಂಬಂಧ ಅಷ್ಟೊಂದು ಒಳ್ಳೆಯದಿಲ್ಲ. ಭಾರತದ ಮೇಲೆ ದಾಳಿ ಮಾಡಿ 26 ಮಂದಿ ಭಾರತೀಯ ಸಾವಿಗೆ ಕಾರಣರಾಗಿದ್ದ ಪಾಕಿಸ್ತಾನಕ್ಕೆ ಆಪರೇಷನ್​​ ಸಿಂದೂರ್​​ದ ಮೂಲಕ ಉತ್ತರ ನೀಡಿತ್ತು. ಈ ಕಾರಣದಿಂದ ಭಾರತವನ್ನು ಕಂಡರೆ ಪಾಕಿಸ್ತಾನ ನಿಗಿನಿಗಿ ಎನ್ನುತ್ತದೆ. ಇದರ ಮಧ್ಯೆ  ವಿಡಿಯೋವೊಂದು ವೈರಲ್​​​ ಆಗುತ್ತಿದ್ದು, ಒಂದು ರೀತಿಯಲ್ಲಿ ಧಗಧಗ ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಪಾಕಿಸ್ತಾನ ಲಾಹೋರ್‌ನ ಬೀದಿಗಳಲ್ಲಿ ಭಾರತೀಯ ಕ್ರಿಕೆಟ್ ತಂಡದ ಜೆರ್ಸಿಯನ್ನು (Indian cricket shirt) ಧರಿಸಿ ಬ್ರಿಟಿಷ್ ಕಂಟೆಂಟ್ ಕ್ರಿಯೆಟರ್​ ಓಡಾಡಿದ್ದಾರೆ. ಇದೀಗ ಈ ವಿಡಿಯೋ ಎಲ್ಲ ಕಡೆ ವೈರಲ್​ ಆಗಿದೆ. ಅಲೆಕ್ಸ್ ವಾಂಡರ್ಸ್ ಎಂಬ ಬ್ರಿಟಿಷ್ ಕಂಟೆಂಟ್ ಕ್ರಿಯೆಟರ್​ ಈ ಬಗ್ಗೆ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇವರು ಟೀಮ್ ಇಂಡಿಯಾದ ನೀಲಿ ಡ್ರೀಮ್11 ಜೆರ್ಸಿಯನ್ನು ಧರಿಸಿ ಲಾಹೋರ್‌ನ ಸ್ಥಳೀಯರೊಂದಿಗೆ ಓಡಾಡಿದ್ದಾರೆ.

ಈ ವಿಡಿಯೋ 2.5 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಯನ್ನು ಪಡೆದುಕೊಂಡಿದೆ. ಈ ವೀಡಿಯೊದಲ್ಲಿ, ವಾಂಡರ್ಸ್ ಲಾಹೋರ್‌ನ ವಿವಿಧ ಪ್ರದೇಶಗಳಲ್ಲಿ ಅಡ್ಡಾಡುತ್ತಾ ಸ್ಥಳೀಯರಲ್ಲಿ ನಗುತ್ತಾ, ಕೈಕುಲುಕುತ್ತಾ ಮಾತನಾಡಿಸಿಕೊಂಡು ಹೋಗಿದ್ದಾರೆ. ಆದರೆ ಇಂಡಿಯಾದ ಜರ್ಸಿ ಹಾಕಿರುವ ಕಾರಣ ಅಲೆಕ್ಸ್ ವಾಂಡರ್ಸ್ ಅವರನ್ನು ವಿಚಿತ್ರವಾಗಿ ನೋಡಿದ್ದಾರೆ. ಆದರೆ ಇಲ್ಲಿ ಎಲ್ಲೂ ಯಾರು ಕೂಡ ಅವರ ಮೇಲೆ ದಾಳಿ ಮಾಡುವುದು ಅಥವಾ ಹಿಂಸೆ ಮಾಡಿದ ಘಟನೆಗಳು ನಡೆದಿಲ್ಲ. ವೀಡಿಯೊದಲ್ಲಿ, ಪಾಕಿಸ್ತಾನದಲ್ಲಿ ವಾಂಡರ್ಸ್ ಅವರಿಗೆ ಸಿಕ್ಕ ಸ್ವಾಗತದ ಬಗ್ಗೆ ಹೇಳಿಕೊಂಡಿದ್ದಾರೆ. ಇಲ್ಲಿಯವರೆಗೆ ನೀವು ಪಾಕಿಸ್ತಾನದಲ್ಲಿ ಭಾರತೀಯ ಶರ್ಟ್ ಧರಿಸಿದರೆ, ಜನರು ನಿಜವಾಗಿಯೂ ಒಳ್ಳೆಯವರು ಎಂಬ ಕಾರಣದಿಂದಾಗಿ ಏನೂ ಆಗುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ
Image
79 ವರ್ಷ ವಯಸ್ಸಲ್ಲೂ ಸ್ವಾವಲಂಬಿ ಜೀವನ ನಡೆಸುತ್ತಿರುವ ಅಜ್ಜಿ
Image
ತಳ್ಳುಗಾಡಿಯಲ್ಲಿದ್ದ ಹಣ್ಣನ್ನು ಕದ್ದು ತಿಂದ ಮರಿ ಆನೆ
Image
ಕಾರಿನ ಸೈರನ್‌ಗೆ ಸಖತ್ ಸ್ಟೆಪ್ ಹಾಕಿದ ಪುಟಾಣಿ
Image
ಮೋದಿಜಿ ನೀವು ಬೆಸ್ಟ್, ನಾನು ನಿಮ್ಮಂತಾಗಲು ಬಯಸುತ್ತೇನೆ ಎಂದ ಇಟಲಿ ಪ್ರಧಾನಿ

ಇದನ್ನೂ ಓದಿ: ರೂಬಿಕ್ಸ್‌ ಕ್ಯೂಬ್‌ನಲ್ಲಿ ಪ್ರಧಾನಿ ಮೋದಿ ಚಿತ್ರ ಬಿಡಿಸಿದ 6 ರ ಪೋರ

ವೈರಲ್​​ ವೀಡಿಯೋ ಇಲ್ಲಿದೆ ನೋಡಿ:

ಅವರು ಹಂಚಿಕೊಂಡಿರುವ ವಿಡಿಯೋದ ಜತೆಗೆ ಶೀರ್ಷಿಕೆ ಹೀಗಿದೆ ನೋಡಿ, ಪಾಕಿಸ್ತಾನದಲ್ಲಿ ಭಾರತೀಯ ಕ್ರಿಕೆಟ್ ಶರ್ಟ್ ಧರಿಸುವುದು ಸುರಕ್ಷಿತವೇ? ಈ ಪ್ರಶ್ನೆಗೆ ಭಾರತೀಯ ಮತ್ತು ಪಾಕಿಸ್ತಾನಿ ಸೋಶಿಯಲ್​​ ಮೀಡಿಯಾ ಬಳಕೆದಾರರೂ ವ್ಯಾಪಕವಾಗಿ ಕಮೆಂಟ್ ಮಾಡಿದ್ದಾರೆ. ಈ ವೈರಲ್ ಕ್ಲಿಪ್ ಹಾಸ್ಯಮಯವಾಗಿದೆ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ಇನ್ನು ಸಾರ್ವಜನಿಕರಲ್ಲಿ ಅರ್ಧದಷ್ಟು ಜನರಿಗೆ ಟಿ-ಶರ್ಟ್‌ನಲ್ಲಿ ಏನು ಬರೆಯಲಾಗಿದೆ ಎಂದು ತಿಳಿದಿರಲಿಲ್ಲ lol ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರ ನೀವು ಪಾಕಿಸ್ತಾನದಲ್ಲಿ ನಮಸ್ತೆ ಮಾಡುವುದು ಉತ್ತಮ ಕೆಲಸ ಎಂದು ಕಮೆಂಟ್ ಮಾಡಿದ್ದಾರೆ. ಈ ವ್ಯಕ್ತಿ ಪಾಕಿಸ್ತಾನದಲ್ಲಿ ಬದುಕಿರುವುದು ಇಂಗ್ಲಿಷ್​​ನಿಂದ ಹೇಗೆಂದರೆ ಈ ಟೀ ಶರ್ಟ್​​​ನಲ್ಲಿ ಇಂಡಿಯಾ ಎನ್ನುವುದನ್ನು ಇಂಗ್ಲಿಷ್​​​ನಲ್ಲಿ ಬರೆದಿದ್ದಾರೆ. ಪಾಕಿಸ್ತಾನದಲ್ಲಿ ಇಂಗ್ಲಿಷ್​​​ ಓದಲು ಬರುವುದಿಲ್ಲ ಎಂದು ತಮಾಷೆಯಾಗಿ ಕಮೆಂಟ್​​​ ಮಾಡಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:52 pm, Sat, 28 June 25

ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್