AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೂಬಿಕ್ಸ್‌ ಕ್ಯೂಬ್‌ನಲ್ಲಿ ಪ್ರಧಾನಿ ಮೋದಿ ಚಿತ್ರ ಬಿಡಿಸಿದ 6 ರ ಪೋರ

ಪ್ರತಿಭೆ ಅನ್ನೋದು ಯಾರ ಸ್ವತ್ತೂ ಅಲ್ಲ. ಈ ಪ್ರತಿಭೆಯ ಮೂಲಕವೇ ತಮ್ಮನ್ನು ತಾವು ಗುರುತಿಸಿಕೊಂಡವರು ಹಲವರಿದ್ದಾರೆ. ಇದೀಗ ಇಲ್ಲೊಬ್ಬ ಬಾಲಕ ಕೂಡಾ ತನ್ನ ಅಸಾಧಾರಣ ಪ್ರತಿಭೆಯಿಂದಲೇ ಎಲ್ಲರ ಗಮನ ಸೆಳೆದಿದ್ದಾನೆ. ಹೌದು ಆರು ವರ್ಷ ವಯಸ್ಸಿನ ಈ ಪೋರ ಕೇವಲ 20 ನಿಮಿಷಗಳಲ್ಲಿ 99 ರೂಬಿಕ್ಸ್‌ ಕ್ಯೂಬ್‌ ಬಳಸಿ ಪ್ರಧಾನಿ ಮೋದಿಯವರ ಚಿತ್ರ ಬಿಡಿಸಿದ್ದಾನೆ.

ರೂಬಿಕ್ಸ್‌ ಕ್ಯೂಬ್‌ನಲ್ಲಿ ಪ್ರಧಾನಿ ಮೋದಿ ಚಿತ್ರ ಬಿಡಿಸಿದ 6 ರ ಪೋರ
ರೂಬಿಕ್ಸ್‌ ಕ್ಯೂಬ್‌ನಲ್ಲಿ ಪ್ರಧಾನಿ ಮೋದಿ ಚಿತ್ರ ಬಿಡಿಸಿದ ವಿಧತ್ Image Credit source: News 18
ಮಾಲಾಶ್ರೀ ಅಂಚನ್​
|

Updated on: Jun 28, 2025 | 12:19 PM

Share

ಪ್ರತಿಭೆ, ಕಲೆ ಅನ್ನೋದು ಯಾರ ಸ್ವತ್ತೂ ಅಲ್ಲ. ಏನಿಲ್ಲದಿದ್ದರೂ ಬರೀ ತಮ್ಮ ಅಗಾಧ ಪ್ರತಿಭೆಯ ಮೂಲಕವೇ ಎತ್ತರಕ್ಕೆ ಬೆಳೆದ ಅದೆಷ್ಟೋ ಜನರಿದ್ದಾರೆ. ಹೀಗೆ ಪ್ರತಿಭೆ ಎನ್ನುವಂತಹದ್ದು ಎಂತಹವರನ್ನೂ ಉತ್ತುಂಗಕ್ಕೆ ತೆಗೆದುಕೊಂಡು ಹೋಗುತ್ತದೆ. ತಮ್ಮ ಟ್ಯಾಲೆಂಟ್‌ ಮೂಲಕವೇ ಸಾಧನೆಗೈದ ಹಲವಾರು ಮಂದಿಯನ್ನು ನೀವು ನೋಡಿರುತ್ತೀರಿ ಅಲ್ವಾ. ಅದೇ ರೀತಿ ಇಲ್ಲೊಬ್ಬ ಪುಟ್ಟ ಪೋರ ಕೂಡ ತನ್ನ ಅಗಾಧ ಪ್ರತಿಭೆಯ ಮೂಲಕವೇ ಎಲ್ಲರ ಗಮನ ಸೆಳೆದಿದ್ದಾನೆ. ತೆಲಂಗಾಣದ ವಿಧತ್‌ (Vidhat) ಎಂಬ 6 ವರ್ಷ ವಯಸ್ಸಿನ ಬಾಲಕ ಕೇವಲ 22 ನಿಮಿಷಗಳಲ್ಲಿ 99 ರೂಬಿಕ್ಸ್‌ ಕ್ಯೂಬ್‌ ಬಳಸಿ ಪ್ರಧಾನಿ ಮೋದಿಯವರ ಚಿತ್ರವನ್ನು (Portrait of PM Modi with  Rubik’s Cube) ಬಿಡಿಸಿದ್ದು, ಈ ಬಾಲಕನ ಅಸಾಧಾರಣ ಪ್ರತಿಭೆಗೆ ಎಲ್ಲರೂ ಫಿದಾ ಆಗಿದ್ದಾರೆ.

ತೆಲಂಗಾಣದ ಕರೀಂನಗರದ ಬಾಲಕನಾದ  ವಿಧತ್‌ ಇದೀಗ ತನ್ನ ಕಲೆ, ಕೌಶಲ್ಯ, ಪ್ರತಿಭೆಯ ಮೂಲಕವೇ ಸುದ್ದಿಯಲ್ಲಿದ್ದಾನೆ. ಹೌದು ಈತ ರೂಬಿಕ್ಸ್‌ ಕ್ಯೂಬ್‌ನಲ್ಲಿ ಪ್ರಧಾನಿ ಮೋದಿಯವರ ಚಿತ್ರ ಬಿಡಿಸಿ ಗಮನ ಸೆಳೆದಿದ್ದಾನೆ. ರೂಬಿಕ್ಸ್‌ ಕ್ಯೂಬ್‌ಗಳನ್ನು ಸರಿಯಾಗಿ ಜೋಡಿಸುವುದೇ ದೊಡ್ಡ ಸವಾಲು. ಅಂತದ್ರಲ್ಲಿ ಈ ಬಾಲಕ ಈ ರೂಬಿಕ್ಸ್‌ ಕ್ಯೂಬ್‌ನಲ್ಲಿಯೇ ಚಿತ್ರ ಬಿಡಿಸಿದ್ದಾನೆ.

ಇದನ್ನೂ ಓದಿ: ಕಾರಿನ ಸೈರನ್‌ಗೆ ಸಖತ್ ಸ್ಟೆಪ್ ಹಾಕಿದ ಪುಟಾಣಿ

ಇದನ್ನೂ ಓದಿ
Image
79 ವರ್ಷ ವಯಸ್ಸಲ್ಲೂ ಸ್ವಾವಲಂಬಿ ಜೀವನ ನಡೆಸುತ್ತಿರುವ ಅಜ್ಜಿ
Image
ತಳ್ಳುಗಾಡಿಯಲ್ಲಿದ್ದ ಹಣ್ಣನ್ನು ಕದ್ದು ತಿಂದ ಮರಿ ಆನೆ
Image
ಕಾರಿನ ಸೈರನ್‌ಗೆ ಸಖತ್ ಸ್ಟೆಪ್ ಹಾಕಿದ ಪುಟಾಣಿ
Image
ಮೋದಿಜಿ ನೀವು ಬೆಸ್ಟ್, ನಾನು ನಿಮ್ಮಂತಾಗಲು ಬಯಸುತ್ತೇನೆ ಎಂದ ಇಟಲಿ ಪ್ರಧಾನಿ

ಸುಜಾತ ಮತ್ತು ನಿತಿನ್‌ ರೆಡ್ಡಿ ದಂಪತಿಯ ಪುತ್ರನಾದ ವಿಧತ್‌ ತನ್ನ ಮೂರು ವರ್ಷ ವಯಸ್ಸಿನಲ್ಲಿಯೇ ಈ ಕಲೆಯನ್ನು ಕಲಿಯಲು ಪ್ರಾರಂಭಿಸಿದನು. ನಿಯಮಿತ ಅಭ್ಯಾಸ ಮತ್ತು ಆನ್‌ಲೈನ್‌ ತರಬೇತಿಯಿಂದ ರೂಬಿಕ್ಸ್‌ ಕ್ಯೂಬ್‌ ಸರಿಯಾಗಿ ಜೋಡಿಸುವುದು ಮಾತ್ರವಲ್ಲದೆ, ಇದರಲ್ಲಿ ಭಾವಚಿತ್ರಗಳನ್ನು ಬಿಡಿಸುವ ಕಲೆಯನ್ನು ಕೂಡಾ ಕರಗತ ಮಾಡಿಕೊಂಡನು. ಆರಂಭದಲ್ಲಿ ವಿಧತ್‌ ತನ್ನ ಹಾಗೂ ತನ್ನ ಪೋಷಕರ ಚಿತ್ರವನ್ನು ಬಿಡಿಸುತ್ತಿದ್ದನು. ಇದೀಗ ಈ ಪೋರ 99 ರೂಬಿಕ್ಸ್‌ ಕ್ಯೂಬ್‌ಗಳನ್ನು ಬಳಸಿ, ಕೇವಲ 22 ನಿಮಿಷಗಳಲ್ಲಿ ಪ್ರಧಾನಿ ಮೋದಿಯವರ ಚಿತ್ರವನ್ನು ಬಿಡಿಸಿದ್ದಾನೆ. ಹೀಗೆ ತನ್ನ ಪ್ರತಿಭೆ ಮತ್ತು ಕಲೆಯ ಮೂಲಕವೇ ವಿಧತ್‌ ಎಲ್ಲರ ಗಮನ ಸೆಳೆದಿದ್ದಾನೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ