Video : ಮೋದಿ – ಮೆಲೋನಿ ಭೇಟಿಯ ಕ್ಷಣ : ಮೋದಿಜಿ ನೀವು ಬೆಸ್ಟ್, ನಾನು ನಿಮ್ಮಂತಾಗಲು ಬಯಸುತ್ತೇನೆ ಎಂದ ಇಟಲಿ ಪ್ರಧಾನಿ
ಕೆನಡಾದಲ್ಲಿ ನಡೆದ ಜಿ -7 ಶೃಂಗಸಭೆಯಲ್ಲಿ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗಿನ ಸಂಭಾಷಣೆಯ ವಿಡಿಯೋವೊಂದು ಎಲ್ಲರ ಗಮನ ಸೆಳೆದಿದೆ. ಈ ಭೇಟಿಯ ವೇಳೆಯಲ್ಲಿ ಇಟಲಿ ಪ್ರಧಾನಿ ಮೆಲೋನಿ ನಗು ಮೊಗದಿಂದ ಪ್ರಧಾನಿ ಮೋದಿಯವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದ್ದು, ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಹಾಗಾದ್ರೆ ಮೋದಿ ಬಗ್ಗೆ ಇಟಲಿ ಪ್ರಧಾನಿ ಆಡಿದ ಮಾತುಗಳೇನು ಗೊತ್ತಾ? ಇಲ್ಲಿದೆ ಮಾಹಿತಿ
ಕೆನಡಾ, ಜೂನ್ 19 : ಕೆನಡಾ (Canada)ದಲ್ಲಿ ನಡೆದ ಜಿ -7 ಶೃಂಗಸಭೆ (G7- Summit) ಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi)ಯವರು ಭಾಗಿಯಾಗಿದ್ದಾರೆ. ಈ ಸಮ್ಮೇಳನದಲ್ಲಿ ಇಟಲಿ ಪ್ರಧಾನಿ ಜಾರ್ಜಿಯಾ (Giorgia Meloni) ಮೆಲೋನಿ ಅವರನ್ನು ಪ್ರಧಾನಿ ಮೋದಿ ಭೇಟಿಯಾಗಿದ್ದು ಇವರಿಬ್ಬರ ನಡುವಿನ ಸಂಭಾಷಣೆಯ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವೇಳೆಯಲ್ಲಿ ಮೋದಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ನಾನು ನಿಮ್ಮಂತಾಗಲು ಬಯಸುತ್ತೇನೆ ಎಂದು ಮೆಲೋನಿ ಹೇಳಿದ್ದು, ಈ ವಿಡಿಯೋ ತುಣುಕು ಎಲ್ಲೆಡೆ ಹರಿದಾಡುತ್ತಿದೆ.
@meghUpdates ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಪರಸ್ಪರ ಕೈಕುಲುಕಿಕೊಂಡು ಸಂಭಾಷಣೆ ಶುರು ಮಾಡಿದ್ದಾರೆ. ಇದೇ ವೇಳೆಯಲ್ಲಿ ಇಟಲಿ ಪ್ರಧಾನಿ ಮೆಲೋನಿ, ನೀವು ಅತ್ಯುತ್ತಮರು, ನಾನು ನಿಮ್ಮಂತೆಯೇ ಇರಲು ಪ್ರಯತ್ನಿಸುತ್ತಿದ್ದೇನೆ ಎಂದು ಮೋದಿಯವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿರುವುದನ್ನು ನೋಡಬಹುದು. ಇದಕ್ಕೆ ಮೋದಿಯವರು ಥಂಬ್ಸ್ ಅಪ್ ನೀಡಿ, ಜೋರಾಗಿ ನಕ್ಕಿರುವುದನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ
🚨 G7 Summit | Giorgia Meloni to PM Modi: “You are the BEST, I am trying to be as you.” 🥰 pic.twitter.com/INHY2SuAQj
— Megh Updates 🚨™ (@MeghUpdates) June 18, 2025
ಅದಲ್ಲದೆ, ಇಟಲಿಯ ಪ್ರಧಾನಿ ಮೆಲೋನಿ ಇಬ್ಬರು ನಾಯಕರುಗಳ ಭೇಟಿಯ ಕ್ಷಣದ ಫೋಟೋವನ್ನು ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಇಟಲಿ ಮತ್ತು ಭಾರತ ಉತ್ತಮ ಸ್ನೇಹ ಸಂಬಂಧ ಹೊಂದಿವೆ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮೋದಿ, ಜಾರ್ಜಿಯಾ ಮೆಲೋನಿ, ನಿಮ್ಮ ಮಾತುಗಳನ್ನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ. ಇಟಲಿಯೊಂದಿಗಿನ ಭಾರತದ ಸ್ನೇಹವು ಗಟ್ಟಿಯಾಗುತ್ತಲೇ ಇರುತ್ತದೆ, ನಮ್ಮ ಜನರಿಗೆ ಹೆಚ್ಚು ಪ್ರಯೋಜನಗಳನ್ನು ನೀಡುತ್ತದೆ ಎಂದಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ
Fully agree with you, PM Giorgia Meloni. India’s friendship with Italy will continue to get stronger, greatly benefitting our people!@GiorgiaMeloni https://t.co/LaYIIZn8Ry
— Narendra Modi (@narendramodi) June 17, 2025
ಮೋದಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಮೆಲೋನಿಯವರ ವಿಡಿಯೋವವನ್ನು ಜೂನ್ 18 ರಂದು ಶೇರ್ ಮಾಡಿಕೊಳ್ಳಲಾಗಿದ್ದು, ಬಳಕೆದಾರರು ಇದನ್ನು ಮೆಚ್ಚಿಕೊಂಡಿದ್ದಾರೆ. ಇದಕ್ಕೆ ಬಳಕೆದಾರರೊಬ್ಬರು, ಕಳೆದ 11 ವರ್ಷಗಳಲ್ಲಿ ಮೋದಿ ಮಾಡಿದ್ದನ್ನು ಯಾವುದೇ ವಿಶ್ವ ನಾಯಕರು ಮಾಡಿಲ್ಲ ಎಂದಿದ್ದಾರೆ. ಮತ್ತೊಬ್ಬರು, ಇದುವೇ ನಿಜವಾದ ಮೋದಿಯ ಗೆಲುವು, ಇದಕ್ಕಿಂತ ಖುಷಿಯ ವಿಚಾರ ಬೇರೇನಿದೆ ಎಂದು ಕಾಮೆಂಟ್‌ನಲ್ಲಿ ಬರೆದಿದ್ದಾರೆ. ಇನ್ನೊಬ್ಬರು ಭಾರತ ಹಾಗೂ ಇಟಲಿಗೆ ಅದ್ಭುತ ಕ್ಷಣ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:05 pm, Thu, 19 June 25








