AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರ ಪ್ರದೇಶದಲ್ಲಿ 2 ತಲೆ, 3 ಕಣ್ಣುಗಳೊಂದಿಗೆ ಜನಿಸಿದ ಕರು; ಜನರಿಂದ ಪೂಜೆ, ಆರಾಧನೆ!

ಉತ್ತರ ಪ್ರದೇಶದಲ್ಲಿ 2 ತಲೆ, 3 ಕಣ್ಣುಗಳೊಂದಿಗೆ ಜನಿಸಿದ ಕರು; ಜನರಿಂದ ಪೂಜೆ, ಆರಾಧನೆ!

ಸುಷ್ಮಾ ಚಕ್ರೆ
|

Updated on:Jun 19, 2025 | 10:41 PM

Share

ಅಪರೂಪದ ಘಟನೆಯೊಂದರಲ್ಲಿ, ಉತ್ತರ ಪ್ರದೇಶದ ಭಾಗ್‌ಪತ್‌ನ ಟಿಕ್ರಿ ಗ್ರಾಮದಲ್ಲಿ ಎರಡು ತಲೆಗಳನ್ನು ಹೊಂದಿರುವ ಕರು ಜನಿಸಿದೆ. ಆ ಕರುವಿಗೆ 2 ತಲೆಗಳು ಮತ್ತು 3 ಕಣ್ಣುಗಳಿವೆ. ಆ ಕರು ಆರೋಗ್ಯವಾಗಿದೆ. ಆ ಅದ್ಭುತ ದೃಶ್ಯವನ್ನು ವೀಕ್ಷಿಸಲು ಸ್ಥಳೀಯರು ಮತ್ತು ಬಾಗ್‌ಪತ್ ಸುತ್ತಮುತ್ತಲಿನ ಜನರು ಸೇರಲು ಪ್ರಾರಂಭಿಸಿದ್ದಾರೆ. ಎರಡು ತಲೆಯ ಕರು ಈಗ ಪಟ್ಟಣದ ಚರ್ಚೆಯಾಗಿದೆ. ಕರು ನೆಲದ ಮೇಲೆ ಬಿದ್ದಿರುವುದನ್ನು ಮತ್ತು ಅದರ ಸುತ್ತಲೂ ಅನೇಕ ಜನರು ಇರುವುದನ್ನು ಕಾಣುವ ಚಿತ್ರಗಳು ಮತ್ತು ವೀಡಿಯೊಗಳು ಅಂತರ್ಜಾಲದಲ್ಲಿ ಹರಿದಾಡುತ್ತಿವೆ. ಕರು ಸ್ವಂತವಾಗಿ ನಿಲ್ಲಲು ಕಷ್ಟಪಡುತ್ತಿರುವುದನ್ನು ಕಾಣಬಹುದು.

ಬಾಗ್‌ಪತ್, ಜೂನ್ 19: ಅಪರೂಪದ ಘಟನೆಯೊಂದರಲ್ಲಿ, ಉತ್ತರ ಪ್ರದೇಶದ (Uttar Pradesh) ಭಾಗ್‌ಪತ್‌ನ ಟಿಕ್ರಿ ಗ್ರಾಮದಲ್ಲಿ ಎರಡು ತಲೆಗಳನ್ನು ಹೊಂದಿರುವ ಕರು ಜನಿಸಿದೆ. ಆ ಕರುವಿಗೆ 2 ತಲೆಗಳು ಮತ್ತು 3 ಕಣ್ಣುಗಳಿವೆ. ಕರು ಆರೋಗ್ಯವಾಗಿದ್ದು, ಈ ಅದ್ಭುತ ದೃಶ್ಯವನ್ನು ವೀಕ್ಷಿಸಲು ಸ್ಥಳೀಯರು ಮತ್ತು ಬಾಗ್‌ಪತ್ ಸುತ್ತಮುತ್ತಲಿನ ಜನರು ಸೇರಲು ಪ್ರಾರಂಭಿಸಿದ್ದಾರೆ. ಜೂನ್ 18ರಂದು ಈ ಕರು ಜನಿಸಿದೆ. ಗ್ರಾಮದ ಸುತ್ತಮುತ್ತಲಿನ ಜನರು ಇದನ್ನು ಪವಾಡದ ಘಟನೆ ಎಂದು ಕರೆದಿದ್ದಾರೆ. ಈ ಕರುವನ್ನು ದೇವರ ಆಶೀರ್ವಾದ ಎಂದು ಪೂಜಿಸಲು ಪ್ರಾರಂಭಿಸಿದ್ದಾರೆ. ಕೆಲವರು ಕರುವಿಗೆ ಹಣವನ್ನು ಕೂಡ ನೀಡುತ್ತಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published on: Jun 19, 2025 10:39 PM