ಪ್ರಧಾನ ಮಂತ್ರಿ ನರೇಂದ್ರ ಮೋದಿ ಯಾವುದೇ ಯೋಜನೆಯನ್ನು ಜಾತಿ ಆಧಾರದ ಮೇಲೆ ರೂಪಿಸಿಲ್ಲ: ಸಿಟಿ ರವಿ
ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಕೇಂದ್ರದ ಗೃಹ ಸಚಿವಾಲಯ ಅಮೆರಿಕ ತೆರಳಲು ವೀಸಾ ನಿರಾಕರಿಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ ರವಿ, ಕೆಲವು ಸಲ ಕೇಂದ್ರದ ಮಂತ್ರಿಗಳಿಗೂ ವೀಸಾ ನಿರಾಕರಿಸಲಾಗುತ್ತದೆ, ಅದಕ್ಕೆ ಬೇರೆ ಬೇರೆ ಕಾರಣಗಳಿರಬಹುದು, ಆದರೆ ಪ್ರಿಯಾಂಕ್ ಖರ್ಗೆಗೆ ಎಲ್ಲಾದರಲ್ಲೂ ರಾಜಕೀಯ ಮಾಡುವ ಚಟ ಹೇಳಿದರು.
ಬೆಂಗಳೂರು, ಜೂನ್ 19: ರಾಜ್ಯ ಸರ್ಕಾರ ವಸತಿ ಯೋಜನೆಯಲ್ಲಿ ಮುಸಲ್ಮಾನರಿಗೆ ಮೀಸಲಾತಿ (reservation for Muslims) ಕಲ್ಪಿಸಿರುವುದನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತಿದೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸಿಟಿ ರವಿ, ಕೇವಲ ತಾತ್ಕಾಲಿಕ ಲಾಭಕ್ಕಾಗಿ ಕಾಂಗ್ರೆಸ್ ಸಂವಿಧಾನದ ಆಶಯಗಳಿಗೆ ಅಪಚಾರ ಮಾಡುತ್ತಿದೆ, ಬೆಂಗಳೂರಲ್ಲಿರುವ ಬಾಂಗ್ಲಾದೇಶದ ವಲಸೆಕೋರರನ್ನು ಓಲೈಸಲು ಅವರಿಗೆ ಮನೆಗಳನ್ನು ನೀಡುವ ಷಡ್ಯಂತ್ರ ರೂಪಿಸಿದೆ ಎಂದರು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜನ್ ಧನ್ ಯೋಜನೆ ಅಡಿ ಬ್ಯಾಂಕ್ ಖಾತೆ ಮಾಡಿಸಿದರು, ಉಚಿತ ಗ್ಯಾಸ್ ಸಿಲಿಂಡರ್ಗಳನ್ನು ಹಂಚಿದರು, ಆಯುಷ್ಮಾನ್ ಭಾರತ್ ಯೋಜನೆ ಅಡಿ ಆರೋಗ್ಯ ವಿಮೆಗಳನ್ನು ಜನರಿಗೆ ನೀಡಿದರು, ಅದರೆ ಯಾರನ್ನೂ ಅವರು ಯಾವ ಸಮುದಾಯದವರೆಂದು ಕೇಳಲಿಲ್ಲ, ಎಲ್ಲ ಸಮುದಾಯಗಳ ಜನ ಫಲಾನುಭವಿಗಳು ಎಂದು ರವಿ ಹೇಳಿದರು.
ಇದನ್ನೂ ಓದಿ: ಸಿಎಂಗೆ ಕಪ್ಪು ಬಟ್ಟೆ ತೋರಿಸಿದವರು ಅರೆಸ್ಟ್: ಸಿಟಿ ರವಿ ರೀತಿ ಠಾಣೆಯಿಂದ ಠಾಣೆಗೆ ಅಲೆದಾಡಿಸುತ್ತಿರುವ ಪೊಲೀಸ್ರು
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

ಕೇಸ್ ವಾಪಸ್ ತೆಗೆದುಕೊಂಡರೆ ಮನು ವಿರುದ್ಧ ಸಾಕ್ಷಿ ಬಿಡ್ತೀನಿ: ಸಂತ್ರಸ್ತೆ

ಸಿನಿಮಾ ಆರಿಸಿಕೊಂಡಿದ್ದೇಕೆ? ಜನಾರ್ಧನ ರೆಡ್ಡಿ ಪುತ್ರನ ಉತ್ತರ

ಪಕ್ಷದ ಕಾರ್ಯದರ್ಶಿ ಮತ್ತು ಅಧಿಕಾರಿಗಳ ಸಭೆ ರಾಮನಗರದಲ್ಲಿ ನಡೆಯಲಿದೆ: ಶಾಸಕ

ಮನೆಯಲ್ಲಿ ಯಾರೂ ಇಲ್ಲದಿದ್ದಾಗ 3ನೇ ಮಹಡಿಯ ಕಿಟಕಿಯಿಂದ ಹೊರಗೆ ನೇತಾಡಿದ ಮಗು
