‘ಉತ್ತರಕಾಂಡ’ ಸಿನಿಮಾ ಶೂಟಿಂಗ್ ನಿಂತಿದ್ದು ಯಾಕೆ? ಕಾರಣ ನೀಡಿದ ಚಿತ್ರತಂಡ
ಜನರು ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದ ‘ಉತ್ತರಕಾಂಡ’ ಚಿತ್ರದ ಶೂಟಿಂಗ್ ಸದ್ಯಕ್ಕೆ ನಿಂತಿವೆ. ಅದಕ್ಕೆ ಕಾರಣವೇನು ಎಂಬುದನ್ನು ನಿರ್ದೇಶಕ ರೋಹಿತ್ ಪದಕಿ ಹಾಗೂ ನಿರ್ಮಾಪಕ ಕಾರ್ತಿಕ್ ಗೌಡ ಅವರು ವಿವರಿಸಿದ್ದಾರೆ. ಈ ಚಿತ್ರದ ಪಾತ್ರವರ್ಗದಲ್ಲಿ ಡಾಲಿ ಧನಂಜಯ, ಶಿವರಾಜ್ಕುಮಾರ್ ಮುಂತಾದವರಿಗೆ ಪ್ರಮುಖ ಪಾತ್ರವಿದೆ.
ಪ್ರೇಕ್ಷಕರು ಸಖತ್ ನಿರೀಕ್ಷೆ ಇಟ್ಟುಕೊಂಡಿದ್ದ ‘ಉತ್ತರಕಾಂಡ’ (Uttarakaanda) ಸಿನಿಮಾದ ಕೆಲಸಗಳು ಸದ್ಯಕ್ಕೆ ನಿಂತಿವೆ. ಅದಕ್ಕೆ ಕಾರಣ ಏನು ಎಂಬುದನ್ನು ನಿರ್ದೇಶಕ ರೋಹಿತ್ ಪದಕಿ (Rohith Padaki) ಮತ್ತು ನಿರ್ಮಾಪಕ ಕಾರ್ತಿಕ್ ಗೌಡ ವಿವರಿಸಿದ್ದಾರೆ. ಈ ಸಿನಿಮಾದ ಪಾತ್ರವರ್ಗದಲ್ಲಿ ಶಿವರಾಜ್ಕುಮಾರ್ (Shivarajkumar), ಡಾಲಿ ಧನಂಜಯ ಮುಂತಾದವರಿಗೆ ಪ್ರಮುಖ ಪಾತ್ರವಿದೆ. ಶಿವರಾಜ್ಕುಮಾರ್ ಅವರಿಗೆ ಆರೋಗ್ಯ ಸಮಸ್ಯೆ ಎದುರಾಗಿದ್ದರಿಂದ ಶೂಟಿಂಗ್ಗೆ ಬ್ರೇಕ್ ನೀಡಲಾಯಿತು ಎಂದು ರೋಹಿತ್ ಪದಕಿ ಮತ್ತು ಕಾರ್ತಿಕ್ ಗೌಡ ಹೇಳಿದ್ದಾರೆ. ‘ಶಿವಣ್ಣ ಅವರ ಆ್ಯಕ್ಷನ್ ಸನ್ನಿವೇಶಗಳು ಈ ಸಿನಿಮಾದಲ್ಲಿ ಜಾಸ್ತಿ ಇವೆ. ಹಾಗಾಗಿ ಅವರಿಗೆ ಸಮಯ ನೀಡಬೇಕು. ಅವರ ಜೊತೆ ಮಾತುಕತೆ ಮಾಡಿ ಮುಂದಿನ ಶೂಟಿಂಗ್ ಬಗ್ಗೆ ನಿರ್ಧಾರ ಮಾಡಬೇಕು’ ಎಂದು ರೋಹಿತ್ ಪದಕಿ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

