Viral : ವರನ ಕೆಲಸ, ಕುಟುಂಬದ ಹಿನ್ನಲೆ ಮಾತ್ರ ನೋಡ್ಬೇಡಿ, ಡಿಜಿಟಲ್ ಹಿನ್ನಲೆ ಮುಖ್ಯ ಎಂದ ಯುವತಿ
ಈಗಿನ ಕಾಲದಲ್ಲಿ ಯುವತಿಯರು ಮದುವೆ ವಿಷಯದಲ್ಲಿ ಎಷ್ಟು ಜಾಗರೂಕರಾಗಿದ್ದರೂ ಸಾಲದು. ಸುಳ್ಳು ಹೇಳಿ ಮದುವೆ ಮಾಡಿಕೊಂಡು ಮೋಸ ಮಾಡುವ ಸುದ್ದಿಗಳನ್ನು ನೀವು ಆಗಾಗ ಕೇಳಿರುತ್ತೀರಿ. ಆದರೆ ಇಲ್ಲೊಬ್ಬ ಯುವತಿಯೂ ತನ್ನ ಬುದ್ಧಿವಂತಿಕೆಯಿಂದ ಅಪಾಯಕಾರಿ ಪುರುಷನಿಂದ ಹೇಗೆ ತಪ್ಪಿಸಿಕೊಂಡೆ ಹಾಗೂ ವೈವಾಹಿಕ ಜೀವನಕ್ಕೆ ಕಾಲಿಡುವ ಮುನ್ನ ವರನ ಡಿಜಿಟಲ್ ಹಿನ್ನಲೆಯ ಬಗ್ಗೆ ತಿಳಿದುಕೊಳ್ಳುವುದು ಎಷ್ಟು ಮುಖ್ಯ ಎನ್ನುವುದನ್ನು ಒತ್ತಿ ಹೇಳಿದ್ದಾರೆ. ಯುವತಿಯ ಪೋಸ್ಟ್‌ವೊಂದು ವೈರಲ್ ಆಗುತ್ತಿದ್ದಂತೆ ಬಳಕೆದಾರರು ಈಕೆ ನೀಡಿದ ಸಲಹೆಯನ್ನು ಸ್ವೀಕರಿಸಿದ್ದಾರೆ.

ಈಗಿನ ಕಾಲದಲ್ಲಿ ಯಾರು ಹೇಗೆ ಇರುತ್ತಾರೆ ಎಂದು ಹೇಳುವುದೇ ಕಷ್ಟ. ಎದುರುಗಡೆಯಿಂದ ನೋಡಲು ಒಳ್ಳೆಯವರಂತೆ ಕಂಡರೂ ಕೆಟ್ಟ ಗುಣನಡತೆಯನ್ನು ಹೊಂದಿರಬಹುದು. ಅದರಲ್ಲಿಯೂ ಮದುವೆ (marriage) ಯಾಗುವ ಮುನ್ನ ಹುಡುಗನೇ ಆಗಿರಲಿ, ಹುಡುಗಿಯೇ ಇರಲಿ, ಜೀವನ ಸಂಗಾತಿಯಾಗಿ ಆಯ್ಕೆ ಮಾಡಿಕೊಳ್ಳುವ ವ್ಯಕ್ತಿಯ ಕುಟುಂಬ ಹಾಗೂ ಉದ್ಯೋಗದ ಹಿನ್ನಲೆ (job background) ಯನ್ನು ಪರಿಶೀಲಿಸುವುದು ಮಾತ್ರವಲ್ಲ, ಡಿಜಿಟಲ್ ಹಿನ್ನಲೆಯನ್ನು ಗಮನಿಸಬೇಕಂತೆ. ಇಲ್ಲದಿದ್ದರೆ ಗೊತ್ತಿಲ್ಲದೇ ಯಾಮಾರುವುದು ಗ್ಯಾರಂಟಿಯಂತೆ. ಈ ಬಗ್ಗೆ 22 ವರ್ಷದ ಯುವತಿಯೊಬ್ಬಳು ಮಾಡಿದ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾಳೆ. ತಾನು ಹೇಗೆ ಅಪಾಯಕಾರಿ ಮದುವೆಯಿಂದ ಪಾರಾದೆ ಎನ್ನುವ ಬಗ್ಗೆ ವಿವರಿಸಿದ್ದು ಈ ಪೋಸ್ಟ್‌ವೊಂದು ಸೋಶಿಯಲ್ ಮೀಡಿಯಾ (social media) ದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ವೈರಲ್ ಪೋಸ್ಟ್‌ನಲ್ಲಿ ಏನಿದೆ?
ರೆಡ್ಡಿಟ್ ಖಾತೆಯಲ್ಲಿ ಯುವತಿಯೂ ಶೇರ್ ಮಾಡಿದ ಪೋಸ್ಟ್‌ನಲ್ಲಿ, 2025ರಲ್ಲಿ ಅರೇಂಜ್ಡ್ ಮ್ಯಾರೇಜ್: ಹುಡುಗಿಯರು ಡಿಜಿಟಲ್ ಹಿನ್ನೆಲೆ ಪರಿಶೀಲನೆ ಮಾಡಬೇಕಾದ ಅಗತ್ಯ’ ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾಳೆ. ಈ ಪೋಸ್ಟ್‌ನಲ್ಲಿ, ನಾನು ಎಲ್ಲವನ್ನೂ ಪರಿಶೀಲಿಸಿದೆ. ಕೆಲವು ಉತ್ತಮ ಸ್ಥಾನದಲ್ಲಿರುವ ಪುರುಷರು ಎಷ್ಟು ಅಪಾಯಕಾರಿ ಎಂಬುದು ನನಗೆ ಚೆನ್ನಾಗಿ ಅರಿವಾಯಿತು. ಸಾಮಾನ್ಯವಾಗಿ ಹೆಚ್ಚಿನ ಹುಡುಗಿಯರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಕಲಿಯುವುದಕ್ಕಾಗಿ ನಾನು ಈ ವಿಚಾರವನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.
ಆತನಿಗೆ ವೃತ್ತಿಪರ ಕೆಲಸವಿತ್ತು. ಕೈ ತುಂಬಾ ಸಂಬಳ ವಿತ್ತು. ಹೊರಗೆ ಗೌರವಾನ್ವಿತ ವ್ಯಕ್ತಿಯಂತೆಯೂ ಕಾಣುತ್ತಿದ್ದನು. ಆದರೆ, ವೈಯಕ್ತಿವಾಗಿ ಆತ ಬೇರೆಯೇ ಇದ್ದ. ಆತನಲ್ಲಿ ಒಬ್ಬ ಕೆಟ್ಟ ಮನಸ್ಥಿತಿಯ ವ್ಯಕ್ತಿಯಿದ್ದ. ಭಾವನಾತ್ಮಕವಾಗಿ ಆ ವ್ಯಕ್ತಿಯೂ ಅಸ್ಥಿರನಾಗಿದ್ದ, ಹೇಳದೇ ಕೇಳದೆ ಅಶ್ಲೀಲ ಫೋಟೋಗಳನ್ನು ಕಳುಹಿಸುತ್ತಿದ್ದ, ಸ್ವಯಂ-ಹಾನಿಯನ್ನು ವೈಭವೀಕರಿಸುತ್ತಿದ್ದ, ಒಪ್ಪಿಗೆಯನ್ನು ನಿರಾಕರಿಸುತ್ತಿದ್ದ ಹಾಗೂ ಸಂಭಾಷಣೆಗಳನ್ನು ನಿಯಂತ್ರಿಸುತ್ತಿದ್ದ. ಹೀಗಿರುವಾಗ ನಾನು ನನ್ನ ಸ್ನೇಹಿತೆಯ ಐಡಿ ಬಳಸಿ ಆತನೊಂದಿಗೆ ಮಾತನಾಡಿದೆ. ಅವನು ಗ್ರಾಫಿಕ್ ಫೋಟೋಗಳನ್ನು ಕಳುಹಿಸುವ ಮತ್ತು ಅಶ್ಲೀಲ ವಿಡಿಯೋಗಳನ್ನು ನೋಡುವ ಅತಿಯಾದ ಗೀಳು ಹೊಂದಿದ್ದ. ಈ ವಿಚಾರವನ್ನು ಬಹಳ ಹೆಮ್ಮೆಯಿಂದ ಹೇಳುತ್ತಿದ್ದ. ಅದೊಂದು ದೊಡ್ಡ ವಿಷಯವೇ ಅಲ್ಲ ಎನ್ನುತ್ತ ಕೂಡ ಇದ್ದ.
ಇದನ್ನೂ ಓದಿ : ವರದಕ್ಷಿಣೆಯಾಗಿ ಸೊಸೆಯ ಕಿಡ್ನಿಯನ್ನೇ ಕೇಳಿದ ಮಾವ!
ಹೀಗಾಗಿ ಯಾರೇ ಆಗಿರಲಿ ಇತ್ತೀಚಿನ ದಿನಗಳಲ್ಲಿ ಕೇವಲ ಒಂದು ಕೆಲಸ, ಅವರ ಸ್ಟೇಟಸ್ ಹಾಗೂ ಕುಟುಂಬದ ಹಿನ್ನೆಲೆಯನ್ನು ಯಾವುದೇ ಕಾರಣಕ್ಕೂ ನಂಬಬೇಡಿ. ಸೋಶಿಯಲ್ ಮೀಡಿಯಾದಲ್ಲಿ ಅವರ ಖಾತೆಗಳತ್ತ ಗಮನಕೊಡಿ ಕಾಮೆಂಟ್‌ಗಳನ್ನು ಒಮ್ಮೆ ಪರಿಶೀಲಿಸಿ. ಈಗಿನವರು ಎಲ್ಲರೂ ಬುದ್ಧಿವಂತರಾಗಿದ್ದಾರೆ. ವಿಷಯವನ್ನು ಕೂಲಂಕುಷವಾಗಿ ಗಮನಿಸಿ ಹಾಗೂ ತಪ್ಪು ಕಂಡರೆ ಅದನ್ನು ಒಪ್ಪಿಕೊಳ್ಳಿ ಎಂದು ಬರೆದುಕೊಂಡಿದ್ದಾಳೆ.
ವೈರಲ್ ಪೋಸ್ಟ್ ಇಲ್ಲಿದೆ

ಈ ಪೋಸ್ಟ್‌ವೊಂದು ವೈರಲ್ ಆಗುತ್ತಿದ್ದಂತೆ ಬಳಕೆದಾರರು ಯುವತಿಯ ಮಾತನ್ನು ಒಪ್ಪಿಕೊಂಡಿದ್ದಾರೆ. ಬಳಕೆದಾರರೊಬ್ಬರು, ನೀವು ಸ್ವತಂತ್ರ ಭದ್ರತಾ ತಜ್ಞರನ್ನು ನೇಮಿಸಿಕೊಳ್ಳಬಹುದು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಈ ಯುವತಿಯ ಮಾತನ್ನು ಒಪ್ಪುತ್ತೇನೆ, ಸೋಶಿಯಲ್ ಮೀಡಿಯಾ ಪ್ರೊಫೈಲ್‌ಗಳು ನಿಮಗೆ ಹೆಚ್ಚಿನದನ್ನು ನೀಡುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು, ಇದು ಹುಡುಗಿಯರಿಗೆ ಮಾತ್ರ ಸೀಮಿತವಾಗಬೇಕಿಲ್ಲ, ಪ್ರತಿಯೊಬ್ಬರು ಹಿನ್ನಲೆಯನ್ನು ಗಮನಿಸುವುದು ಬಹಳ ಮುಖ್ಯ ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








