AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Longest Highway : ಇದು ವಿಶ್ವದ ಅತಿ ಉದ್ದದ ರಸ್ತೆಯಂತೆ, ಇದು ಎಲ್ಲಿರುವುದು ಗೊತ್ತಾ?

ಉತ್ತಮ ರಸ್ತೆಗಳು ಆ ದೇಶದ ಅಭಿವೃದ್ಧಿಯ ಕೈಗನ್ನಡಿಯಾಗಿದೆ. ರಸ್ತೆ ಸಾರಿಗೆ ವ್ಯವಸ್ಥೆಯನ್ನು ಆಧರಿಸಿ ಆ ದೇಶವು ಅಭಿವೃದ್ಧಿ ಕಂಡಿದೆಯೇ, ಇಲ್ಲವೇ ಎಂದು ನಿರ್ಣಯಿಸುತ್ತೇವೆ. ಆದರೆ ವಿಶ್ವದ ಅತಿ ಉದ್ದದ ರಸ್ತೆಯೊಂದಿದ್ದು ಈ ರಸ್ತೆಯಲ್ಲಿ ನೀವು ಯಾವುದೇ ತಿರುವನ್ನು ಕಾಣಲು ಸಾಧ್ಯವಿಲ್ಲವಂತೆ. ಈ ಹೆದ್ದಾರಿಯೂ ಸರಿಸುಮಾರು 14 ದೇಶಗಳನ್ನು ವ್ಯಾಪಿಸಿದೆ ಎನ್ನಲಾಗಿದೆ. ಅತಿ ಉದ್ದದ ಈ ಹೆದ್ದಾರಿಯೂ ಇರುವುದು ಎಲ್ಲಿ? ಸೇರಿದಂತೆ ಇನ್ನಿತ್ತರ ಮಾಹಿತಿ ಇಲ್ಲಿದೆ.

ಸಾಯಿನಂದಾ
|

Updated on: Jun 18, 2025 | 7:41 PM

ರಸ್ತೆಗಳು ಉತ್ತಮವಾಗಿದ್ದರೆ ವಾಹನ ಓಡಿಸಲು ಯಾರಿಗಾದರೂ ಖುಷಿಯಾಗುತ್ತದೆ. ರಸ್ತೆಗಳು ಎಂದ ಮೇಲೆ ಅಲ್ಲಲ್ಲಿ ತಿರುವುಗಳು ಇರುವುದು ಸರ್ವೇ ಸಾಮಾನ್ಯ. ಈ ತಿರುವಿನಲ್ಲಿ ವಾಹನ ಚಲಾಯಿಸುವಾಗ ಎಷ್ಟು ಜಾಗರೂಕರಾಗಿದ್ದರೂ ಸಾಲದು.

1 / 6
ಇನ್ನು ನಮ್ಮ ಬಳಿ ಯಾರಾದ್ರೂ ಬಂದು ಭಾರತದ ಅತಿ ಉದ್ದದ ರಸ್ತೆಯ ಬಗ್ಗೆ ಕೇಳಿದ್ರೆ ನಾವು ಮೊದಲು ಹೇಳುವುದೇ ರಾಷ್ಟ್ರೀಯ ಹೆದ್ದಾರಿ 44. ಇದರ ಉದ್ದ ಸುಮಾರು 4,112 ಕಿಲೋಮೀಟರ್‌ಗಳಷ್ಟು, ಆದರೆ ವಿಶ್ವದ ಅತಿ ಉದ್ದದ ರಸ್ತೆಯ ನಿಮಗೆ ಏನಾದ್ರು ತಿಳಿದಿದೆಯೇ.

2 / 6
ವಿಶ್ವದ ಅತಿ ಉದ್ದದ ಹೆದ್ದಾರಿಯಲ್ಲಿ ಯಾವುದೇ ತಿರುವುಗಳಿಲ್ಲವಂತೆ. ದಿನಕ್ಕೆ  500 ಕಿಲೋಮೀಟರ್ ವೇಗದಲ್ಲಿ ಪ್ರಯಾಣಿಸಿದ್ರೂ ಈ ರಸ್ತೆಯನ್ನು ಪೂರ್ಣಗೊಳಿಸಲು ಸರಿಸುಮಾರು 60 ದಿನಗಳು ಬೇಕಾಗುತ್ತದೆಯಂತೆ.

3 / 6
1920 ರ ದಶಕದ ಆರಂಭದಲ್ಲಿ ಪ್ಯಾನ್-ಅಮೇರಿಕನ್ ಹೆದ್ದಾರಿಯನ್ನು ನಿರ್ಮಾಣ ಮಾಡಲಾಯಿತಂತೆ. 1937 ರಲ್ಲಿ, 14 ದೇಶಗಳು ಈ ಸ್ಮಾರಕ ರಸ್ತೆಯನ್ನು ನಿರ್ಮಿಸಲು ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಸರಿಸುಮಾರು 20 ವರ್ಷದ ಬಳಿಕ ಅಂದರೆ  1960 ರಲ್ಲಿ ಸಾರ್ವಜನಿಕ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತಂತೆ.

4 / 6
ವಿಶ್ವದ ಅತಿ ಉದ್ದದ ಹೆದ್ದಾರಿಯಾಗಿರುವ ಪ್ಯಾನ್-ಅಮೆರಿಕನ್ ಹೆದ್ದಾರಿಯು ಅಮೆರಿಕ, ಮೆಕ್ಸಿಕೊ, ಗ್ವಾಟೆಮಾಲಾ, ಎಲ್ ಸಾಲ್ವಡಾರ್, ಹೊಂಡುರಾಸ್, ನಿಕರಾಗುವಾ, ಕೋಸ್ಟರಿಕಾ, ಪನಾಮ  ಸೇರಿದಂತೆ ದಕ್ಷಿಣ ಅಮೆರಿಕಾದ ಮೂಲಕ ಕೊಲಂಬಿಯಾ, ಈಕ್ವೆಡಾರ್, ಪೆರು, ಚಿಲಿ ಮತ್ತು ಅರ್ಜೆಂಟೀನಾ ಹೀಗೆ ಸರಿಸುಮಾರು 14 ದೇಶಗಳ ಮೂಲಕ ಹಾದು ಹೋಗುತ್ತದೆ ಎನ್ನಲಾಗಿದೆ.

5 / 6
ಯಾವುದೇ ಹಂಪ್ ಇಲ್ಲದ ಈ ರಸ್ತೆಯೂ ಉತ್ತರ ಅಮೇರಿಕದ ಅಲಾಸ್ಕಾದ ಪುಧೋ ಬೇನಲ್ಲಿ ಪ್ರಾರಂಭವಾಗಿ, ಅರ್ಜೆಂಟೀನಾದ ಉಶುವಾಯಾ ನಗರದಲ್ಲಿ ಕೊನೆಗೊಳ್ಳುತ್ತದೆಯಂತೆ. ಈ ರಸ್ತೆಯ ಉದ್ದ ಬರೋಬ್ಬರಿ 30,600 ಕಿಲೋಮೀಟರ್ ಗಳಷ್ಟು ಎನ್ನಬಹುದು. ಈ ರಸ್ತೆಯಲ್ಲಿ ಆರಾಮದಾಯಕವಾಗಿ ಪ್ರಯಾಣಿಸುವುದಲ್ಲದೇ ಪ್ರಕೃತಿ ಸೌಂದರ್ಯವನ್ನು ಸವಿಯಬಹುದು.

6 / 6
Follow us