AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಳೆಗಾಲದಲ್ಲಿ ಈ ರೀತಿಯ ಬಟ್ಟೆ ಧರಿಸುವುದು ಬೆಸ್ಟ್‌

ಋತುಮಾನ ಬದಲಾದಂತೆ ನಮ್ಮ ಜೀವನಶೈಲಿಯಲ್ಲೂ ನಾವು ಒಂದಷ್ಟು ಬದಲಾವಣೆಗಳನ್ನು ಮಾಡಿಕೊಳ್ಳುತ್ತೇವೆ. ಹೌದು ಬೇಸಿಗೆಗಾಲದಲ್ಲಿ ದೇಹವನ್ನು ತಂಪಾಗಿರಿಸುವ ಆಹಾರವನ್ನು ಸೇವಿಸುವುದರ ಜೊತೆಗೆ ಸೂರ್ಯನ ಶಾಖದಿಂದ ರಕ್ಷಣೆ ಪಡೆಯಲು ಸೂಕ್ತವಾದ ಬಟ್ಟೆಗಳನ್ನು ಸಹ ಧರಿಸುತ್ತೇವೆ. ಅದೇ ರೀತಿ ಮಳೆಗಾಲದಲ್ಲಿಯೂ ಈ ಋತುಮಾನಕ್ಕೆ ಸೂಕ್ತವಾದ ಬಟ್ಟೆಗಳನ್ನು ಧರಿಸಬೇಕು. ಕೆಲವೊಂದು ಬಟ್ಟೆಗಳು ಒದ್ದೆಯಾದ್ರೆ, ಅದು ಒಣಗಲು ಸಾಕಷ್ಟು ಸಮಯವನ್ನು ತೆಗೆದುಕೊಳ್ಳುತ್ತದೆ. ಇದರಿಂದ ಕಿರಿಕಿರಿ ಭಾವನೆ ಉಂಟಾಗುತ್ತದೆ. ಹಾಗಾಗಿ ಈ ಋತುವಿಗೆ ಸೂಕ್ತವಾದ, ಆರಾಮದಾಯಕವಾದ ಫ್ಯಾಬ್ರಿಕ್‌ ಬಟ್ಟೆಗಳನ್ನು ಧರಿಸಬೇಕು. ಹಾಗಿದ್ರೆ ಮಳೆಗಾಲಕ್ಕೆ ಯಾವ ಬಟ್ಟೆ ಸೂಕ್ತ ಎಂಬುದನ್ನು ನೋಡೋಣ.

ಮಾಲಾಶ್ರೀ ಅಂಚನ್​
|

Updated on: Jun 18, 2025 | 9:12 PM

Share
ರೇಯಾನ್: ಭಾರೀ ಮಳೆಯ ಸಂದರ್ಭದಲ್ಲಿ ನೀವು ರೇಯನ್‌ ಫ್ಯಾಬ್ರಿಕ್‌ ಬಟ್ಟೆಗಳನ್ನು ಧರಿಸುವುದು ಸೂಕ್ತ. ಅರೆ-ಸಂಶ್ಲೇಷಿತ ಬಟ್ಟೆಯಾದ ಇದು ತುಂಬಾನೇ ಹಗುರವಾಗಿರುತ್ತದೆ, ಜೊತೆಗೆ ಮಳೆ ನೀರು ತಾಕಿದರೆ ಬೇಗನೆ ಒಣಗುತ್ತದೆ. ಅಲ್ಲದೆ ಈ ಬಟ್ಟೆಗಳು ಚರ್ಮಕ್ಕೆ ಅಂಟಿ ಹಿಡಿದುಕೊಳ್ಳದ ಕಾರಣ, ಇದು ಚರ್ಮಕ್ಕೆ ಅಗತ್ಯವಾದ ಆಮ್ಲಜನಕವನ್ನು ಒದಗಿಸುವಲ್ಲಿ ಸಹಾಯ ಮಾಡಿ, ಚರ್ಮವನ್ನು ಆರೋಗ್ಯಕರವಾಗಿಡುತ್ತದೆ.

1 / 7
ಮಸ್ಲಿನ್: ಮಸ್ಲಿನ್ ಹತ್ತಿಗಿಂತಲೂ ಮೃದುವಾದ, ಸಡಿಲವಾದ ನೇಯ್ಗೆ ಬಟ್ಟೆಯಾಗಿದೆ. ಇದು ತನ್ನ ಹಗುರ ಮತ್ತು ಮೃದುವಾದ ವಿನ್ಯಾಸಕ್ಕೆ ಹೆಸರುವಾಸಿಯಾಗಿದೆ. ಮಸ್ಲಿನ್ ಬಟ್ಟೆಗಳು ಉಸಿರಾಡುವಂತಿದ್ದು, ಮಳೆಗಾಲದಲ್ಲಿ ತೇವಾಂಶದಿಂದ ರಕ್ಷಿಸುತ್ತದೆ. ಅವು ಬೇಗನೆ ಒಣಗುತ್ತವೆ, ಆದ್ದರಿಂದ ಇದು ಮಳೆಗಾಲಕ್ಕೆ ಸೂಕ್ತವಾಗಿವೆ. ಅಲ್ಲದೆ ಮಸ್ಲಿನ್ ತುಂಬಾ ಹಗುರವಾದ ಬಟ್ಟೆಯಾಗಿದ್ದು, ಇದು ತುಂಬಾ ಆರಾಮದಾಯಕವಾಗಿದೆ.

2 / 7
ಕ್ರೇಪ್ ಬಟ್ಟೆ: ಕ್ರೇಪ್‌ ಫ್ಯಾಬ್ರಿಕ್‌ ಬಟ್ಟೆಗಳು ಕೂಡಾ ಮಳೆಗಾಲದಲ್ಲಿ ಧರಿಸಲು ಸೂಕ್ತವಾಗಿದೆ. ರೇಯಾನ್‌ನಂತೆ ಇದು ಕೂಡಾ ತುಂಬಾನೇ ಹಗುರವಾದ ಹಾಗೂ ಬಹು ಬೇಗನೆ ಒಣಗುವ ಬಟ್ಟೆಯಾಗಿದೆ. ಅಲ್ಲದೆ ಈ ಫ್ಯಾಬ್ರಿಕ್‌ ಬಟ್ಟೆ ಧರಿಸುವುದರಿಂದ ದೇಹ ಬೆಚ್ಚಗಾಗಿರುತ್ತದೆ.

3 / 7
ಪಾಲಿಯೆಸ್ಟರ್‌: ಪಾಲಿಯೆಸ್ಟರ್‌ ಒಂದು ಸಿಂಥೆಟಿಕ್‌ ಬಟ್ಟೆಯಾಗಿದ್ದು, ಇದು ತೇವಾಂಶವನ್ನು ಹಿಡಿದಿಟ್ಟುಕೊಳ್ಳುವುದಿಲ್ಲ. ಹಾಗಾಗಿ ಈ ಫ್ಯಾಬ್ರಿಕ್ ಮಳೆಗಾಲದಲ್ಲಿ ಧರಿಸಲು ತುಂಬಾನೇ ಸೂಕ್ತವಾಗಿದೆ. ತುಂಬಾನೇ ಹಗುರವಾದ ಈ ಬಟ್ಟೆಗಳು ಒದ್ದೆಯಾದರೆ ಬಹು ಬೇಗನೆ ಒಣಗುತ್ತವೆ.

4 / 7
ಲಿನಿನ್:‌ ಲಿನಿನ್‌ ಫ್ಯಾಬ್ರಿಕ್‌ ಬಟ್ಟೆಗಳು ಮಳೆಗಾಲದಲ್ಲಿ ಧರಿಸಲು ಸೂಕ್ತವಾಗಿದೆ. ಈ ಬಟ್ಟೆ ತುಂಬಾನೇ ಹಗುರವಾಗಿದ್ದು, ಒದ್ದೆಯಾದರೆ ಇದು ಬಹು ಬೇಗನೆ ಒಣಗುತ್ತದೆ. ಅಲ್ಲದೆ ಈ ಬಟ್ಟೆ ದೇಹದ ಮೇಲೆ ಬೆವರು ಸಂಗ್ರಹವಾಗುವುದನ್ನು ತಡೆಯುತ್ತದೆ. ಆದ್ದರಿಂದ ಈ ಬಟ್ಟೆ ಮಳೆಗಾಲದಲ್ಲಿ ಧರಿಸಲು ತುಂಬಾನೇ ಸೂಕ್ತವಾಗಿದೆ.

5 / 7
ನೈಲಾನ್:‌ ಮಳೆಗಾಲದಲ್ಲಿ ನೈಲಾನ್‌ ಫ್ಯಾಬ್ರಿಕ್‌ ಬಟ್ಟೆಗಳನ್ನು ಸಹ ಧರಿಸಬಹುದು. ಈ ಬಟ್ಟೆಗಳು ಹಗುರ ಮಾತ್ರವಲ್ಲದೆ, ಒದ್ದೆಯಾದರೆ ಬಹುಬೇಗನೆ ಒಣಗುತ್ತವೆ. ಹಾಗಾಗಿ ಈ ಫ್ಯಾಬ್ರಿಕ್‌ ಮಳೆಗಾಲದಲ್ಲಿ ಧರಿಸಲು ಸೂಕ್ತವಾಗಿದೆ. ಪಾಲಿಯೆಸ್ಟರ್‌ಗಿಂತಲೂ ಹೆಚ್ಚು ಬಾಳಿಕೆ ಬರುವ ಈ ಬಟ್ಟೆ ತುಂಬಾನೇ ಮೃದುವಾಗಿದೆ.

6 / 7
ಹತ್ತಿ ಬಟ್ಟೆ: ಹತ್ತಿ ಬಟ್ಟೆಯು ಸಹ ಮಳೆಗಾಲಕ್ಕೆ ಧರಿಸಲು ಅತ್ಯಂತ ಸೂಕ್ತವಾದ ಬಟ್ಟೆಯಾಗಿದೆ. ಈ ಫ್ಯಾಬ್ರಿಕ್‌ ಹಗುರವಾಗಿ ತುಂಬಾನೇ ಆರಾಮದಾಯಕವಾಗಿರುತ್ತವೆ. ಈ ಫ್ಯಾಬ್ರಿಕ್‌ ತೇವಾಂಶವನ್ನು ಚೆನ್ನಾಗಿ ಹೀರಿಕೊಳ್ಳುವ ಕಾರಣ, ಇದು ಒದ್ದೆಯಾದರೆ ಬಹು ಬೇಗನೆ ಒಣಗುತ್ತದೆ. ಆದ್ದರಿಂದ ಈ ಮಳೆಗಾಲದಲ್ಲಿ ಹತ್ತಿ ಫ್ಯಾಬ್ರಿಕ್‌ ಬಟ್ಟೆಗಳನ್ನು ಧರಿಸುವುದು ಸೂಕ್ತ.

7 / 7