- Kannada News Photo gallery Naa Ninna bidalare serial Actress Neetha Ashok looks so cute in her New Photoshoot
ಧಾರಾವಾಹಿಯಲ್ಲಿ ದೆವ್ವ, ನಿಜ ಜೀವನದಲ್ಲಿ ಎಷ್ಟು ಕ್ಯೂಟ್ ನೋಡಿ ನೀತಾ ಅಶೋಕ್
ನೀತಾ ಅಶೋಕ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ವಿವಿಧ ರೀತಿಯ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಈಗ ಅವರ ಹೊಸ ಫೋಟೋಗಳು ಅಭಿಮಾನಿಗಳಿಂದ ಮೆಚ್ಚುಗೆ ಪಡೆದಿವೆ. ತೆರೆಮೇಲೆ ಅವರು ದೆವ್ವ. ಆದರೆ, ನಿಜ ಜೀವನದಲ್ಲಿ ಅವರು ಸಖತ್ ಕ್ಯೂಟ್.
Updated on: Jun 19, 2025 | 8:38 AM

ನೀತಾ ಅಶೋಕ್ ಅವರು ಬಣ್ಣದ ಲೋಕದಲ್ಲಿ ಬ್ಯುಸಿ ಇದ್ದಾರೆ. ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದು, ಸಾಕಷ್ಟು ಗಮನ ಸೆಳೆಯುತ್ತಿದ್ದಾರೆ. ಈಗ ಹೊಸ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅವರು ಹಂಚಿಕೊಂಡಿದ್ದಾರೆ.

ನೀತಾ ಅಶೋಕ್ ಅವರು ‘ನಾನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ದೆವ್ವದ ಪಾತ್ರ ಮಾಡುತ್ತಿದ್ದಾರೆ! ಹೌದು, ಅವರ ಪಾತ್ರ ನಿಧನ ಹೊಂದಿದ್ದು, ಆತ್ಮದ ರೂಪದಲ್ಲಿ ಓಡಾಡುತ್ತಿದೆ. ಅವರು ಅಲ್ಲಿ ಬೇರೆಯದೇ ರೀತಿ ಕಾಣಿಸುತ್ತಾರೆ. ಆತ್ಮ ಎನ್ನುವ ಕಾರಣಕ್ಕೆ ವಿಶೇಷ ಎಫೆಕ್ಟ್ಗಳನ್ನು ಬಳಸಲಾಗುತ್ತದೆ.

ನಿಜ ಜೀವನದಲ್ಲಿ ನೀತಾ ಅವರು ಸಖತ್ ಕ್ಯೂಟ್ ಆಗಿದ್ದಾರೆ. ಇತ್ತೀಚೆಗೆ ಅವರು ಹಂಚಿಕೊಂಡಿರೋ ಫೋಟೋಗಳೇ ಇದಕ್ಕೆ ಸಾಕ್ಷಿ. ನೀತಾ ಅವರ ಫೋಟೋಗಳಿಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಅವರ ಅಂದವನ್ನು ಹೊಗಳಿದ್ದಾರೆ.

ಇತ್ತೀಚೆಗೆ ‘ನಾನಿನ್ನ ಬಿಡಲಾರೆ’ ಧಾರಾವಾಹಿ 100 ಸಂಚಿಕೆಗಳನ್ನು ಪೂರ್ಣಗೊಳಿಸಿದೆ. ಬಹುತೇಕ ಎಲ್ಲಾ ವಾರಗಳಲ್ಲೂ ಈ ಧಾರಾವಾಹಿ ಟಿಆರ್ಪಿಯಲ್ಲಿ ಟಾಪ್ ಐದರಲ್ಲಿ ಸ್ಥಾನ ಪಡೆದಿದೆ. ಕೆಲವೊಮ್ಮೆ ಈ ಧಾರಾವಾಹಿಗಿ ಮೊದಲ ಸ್ಥಾನ ಕೂಡ ಸಿಕ್ಕಿದೆ.

ನೀತಾ ಅಶೋಕ್ ಅವರು ಈ ಮೊದಲು ‘ವಿಕ್ರಾಂತ್ ರೋಣ’ ಸಿನಿಮಾದಲ್ಲಿ ನಟಿಸಿದ್ದರು. ಅವರ ಪಾತ್ರ ತುಂಬಾನೇ ಮುಖ್ಯವಾಗಿತ್ತು. ಆ ಬಳಿಕ ಅವರು ಕಿರುತೆರೆಗೆ ಕಾಲಿಟ್ಟರು. ಈಗ ಕಿರುತೆರೆಯಲ್ಲೂ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ.




