ಇಷ್ಟೇನಾ… ನೇಪಾಳ ಆಟಗಾರರು ಪಂದ್ಯವೊಂದಕ್ಕೆ ಪಡೆಯುವ ವೇತನ..!
NEP vs NED: ಗ್ಲ್ಯಾಸ್ಗೋದಲ್ಲಿ ನಡೆದ ನೆದರ್ಲೆಂಡ್ಸ್ ವಿರುದ್ಧದ ಟಿ20 ಪಂದ್ಯದಲ್ಲಿ ನೇಪಾಳ ತಂಡವು 158 ರನ್ಗಳಿಸಿ ಪಂದ್ಯವನ್ನು ಟೈ ಮಾಡಿಕೊಂಡಿತ್ತು. ಆ ಬಳಿಕ ನಡೆದ ಮೊದಲ ಸೂಪರ್ ಓವರ್ನಲ್ಲಿ ಉಭಯ ತಂಡಗಳು 19 ರನ್ಗಳಿಸಿ ಟೈ ಮಾಡಿಕೊಂಡಿದ್ದರು. ಇನ್ನು ಎರಡನೇ ಸೂಪರ್ ಓವರ್ನಲ್ಲೂ 19 ರನ್ಗಳಿಸಿ ಪಂದ್ಯವನ್ನು ಟೈನಲ್ಲಿ ಅಂತ್ಯಗೊಳಿಸಿದ್ದರು. ಇನ್ನು ಮೂರನೇ ಸೂಪರ್ ಓವರ್ನಲ್ಲಿ ನೇಪಾಳ ರನ್ಗಳಿಸದೇ 2 ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿದ್ದರು.
ನೆದರ್ಲೆಂಡ್ಸ್ ವಿರುದ್ಧದ ಟಿ20 ಪಂದ್ಯದಲ್ಲಿ ದಿಟ್ಟ ಹೋರಾಟ ಪ್ರದರ್ಶಿಸಿದ ಕ್ರಿಕೆಟ್ ಶಿಶು ನೇಪಾಳ ತಂಡವು ಸಖತ್ ಸುದ್ದಿಯಲ್ಲಿದೆ. ಗ್ಲ್ಯಾಸ್ಗೋದ ಟಿಟ್ವುಡ್ನಲ್ಲಿ ನಡೆದ ಈ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡವು 158 ರನ್ ಕಲೆಹಾಕಿದರೆ, ನೇಪಾಳ ತಂಡ ಕೂಡ 20 ಓವರ್ಗಳಲ್ಲಿ 158 ರನ್ ಬಾರಿಸಿತ್ತು. ಆ ಬಳಿಕ ನಡೆದ ಎರಡು ಸೂಪರ್ ಓವರ್ಗಳು ಟೈ ಆಗಿದ್ದವು. ಇನ್ನು ಮೂರನೇ ಸೂಪರ್ ಓವರ್ನಲ್ಲಿ ನೇಪಾಳ ತಂಡವು ವಿರೋಚಿತವಾಗಿ ಸೋಲೊಪ್ಪಿಕೊಂಡಿತು.
1 / 5
ಇದರೊಂದಿಗೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಮೂರು ಸೂಪರ್ ಓವರ್ಗಳನ್ನು ಆಡಿದ ವಿಶ್ವ ದಾಖಲೆ ನೆದರ್ಲೆಂಡ್ಸ್ ಹಾಗೂ ನೇಪಾಳ ತಂಡಗಳ ಪಾಲಾಯಿತು. ವಿಶೇಷ ಎಂದರೆ ಕ್ರಿಕೆಟ್ ಅಂಗಲದಲ್ಲಿ ಅಂಬೆಗಾಲಿಡುತ್ತಿರುವ ನೇಪಾಳ ತಂಡವು ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದೆ. ಅದರಲ್ಲೂ ರಾಷ್ಟ್ರೀಯ ತಂಡದ ಪರ ಆಡುತ್ತಿರುವ ಆಟಗಾರರು ಪ್ರತಿ ಪಂದ್ಯಕ್ಕೆ ಪಡೆಯುತ್ತಿರುವುದು ಅತ್ಯಲ್ಪ ಪಂದ್ಯ ಶುಲ್ಕ ಎಂದರೆ ನಂಬಲೇಬೇಕು.
2 / 5
2013 ರಿಂದ ಟಿ20 ಕ್ರಿಕೆಟ್ ಆರಂಭಿಸಿರುವ ನೇಪಾಳ ತಂಡವು ಈವರೆಗೆ ಆಡಿರುವುದು 101 ಪಂದ್ಯಗಳನ್ನು ಮಾತ್ರ. ಅಲ್ಲದೆ ಪ್ರಸ್ತುತ ರಾಷ್ಟ್ರೀಯ ತಂಡದಲ್ಲಿರುವ ಆಟಗಾರರು ಪ್ರತಿ ಪಂದ್ಯಕ್ಕೆ ಪಡೆಯುತ್ತಿರುವ ಸಂಭಾವನೆ ಕೇವಲ 5000 ನೇಪಾಳ ರೂಪಾಯಿ. ಅಂದರೆ ಭಾರತೀಯ ರೂಪಾಯಿ ಮೌಲ್ಯ ಕೇವಲ 3130 ರೂ.ಗಳು ಮಾತ್ರ..!
3 / 5
ಇದೇ ವೇಳೆ ಟೀಮ್ ಇಂಡಿಯಾ ಆಟಗಾರರು ಪ್ರತಿ ಪಂದ್ಯಕ್ಕೆ ಪಡೆಯುವ ಸಂಭಾವನೆ 3 ಲಕ್ಷ ರೂ. ಅಂದರೆ ಟೀಮ್ ಇಂಡಿಯಾ ಪರ ಟಿ20 ಪಂದ್ಯಗಳಲ್ಲಿ ಕಣಕ್ಕಿಳಿದ ಆಟಗಾರರಿಗೆ ಬಿಸಿಸಿಐ ಪಂದ್ಯ ಶುಲ್ಕವಾಗಿ 3 ಲಕ್ಷ ರೂ. ಅನ್ನು ಪಾವತಿಸುತ್ತದೆ. ಅಂದರೆ ಭಾರತೀಯ ಆಟಗಾರರಿಗೆ ಹೋಲಿಸಿದರೆ, ನೇಪಾಳ ಕ್ರಿಕೆಟಿಗರು ಪಡೆಯುತ್ತಿರುವುದು ಕೇವಲ 1 ಪರ್ಸೆಂಟ್ ವೇತನ ಅಷ್ಟೇ.
4 / 5
ಮತ್ತೊಂದೆಡೆ ಟೀಮ್ ಇಂಡಿಯಾದ ಆಟಗಾರರಿಗಿಂತ ಆಸ್ಟ್ರೇಲಿಯಾದ ಕೆಲ ಸ್ಟಾರ್ ಪ್ಲೇಯರ್ಸ್ ಹೆಚ್ಚಿನ ವೇತನ ಪಡೆಯುತ್ತಿದ್ದಾರೆ. ಆಸೀಸ್ ಪಡೆಯ ಗ್ರೇಡ್ 1 ನಲ್ಲಿರುವ ಆಟಗಾರರಿಗೆ ಪ್ರತಿ ಟಿ20 ಪಂದ್ಯಕ್ಕೆ 10 ಸಾವಿರ ಆಸ್ಟ್ರೇಲಿಯನ್ ಡಾಲರ್ ವೇತನ ಸಿಗುತ್ತಿದೆ. ಅಂದರೆ ಭಾರತೀಯ ರೂಪಾಯಿ ಮೌಲ್ಯ ಸುಮಾರು 5.6 ಲಕ್ಷ ರೂ. ಪಂದ್ಯ ಶುಲ್ಕವಾಗಿ ಪಡೆಯುತ್ತಿದ್ದಾರೆ.