World Longest Highway : ಇದು ವಿಶ್ವದ ಅತಿ ಉದ್ದದ ರಸ್ತೆಯಂತೆ, ಇದು ಎಲ್ಲಿರುವುದು ಗೊತ್ತಾ?
ಉತ್ತಮ ರಸ್ತೆಗಳು ಆ ದೇಶದ ಅಭಿವೃದ್ಧಿಯ ಕೈಗನ್ನಡಿಯಾಗಿದೆ. ರಸ್ತೆ ಸಾರಿಗೆ ವ್ಯವಸ್ಥೆಯನ್ನು ಆಧರಿಸಿ ಆ ದೇಶವು ಅಭಿವೃದ್ಧಿ ಕಂಡಿದೆಯೇ, ಇಲ್ಲವೇ ಎಂದು ನಿರ್ಣಯಿಸುತ್ತೇವೆ. ಆದರೆ ವಿಶ್ವದ ಅತಿ ಉದ್ದದ ರಸ್ತೆಯೊಂದಿದ್ದು ಈ ರಸ್ತೆಯಲ್ಲಿ ನೀವು ಯಾವುದೇ ತಿರುವನ್ನು ಕಾಣಲು ಸಾಧ್ಯವಿಲ್ಲವಂತೆ. ಈ ಹೆದ್ದಾರಿಯೂ ಸರಿಸುಮಾರು 14 ದೇಶಗಳನ್ನು ವ್ಯಾಪಿಸಿದೆ ಎನ್ನಲಾಗಿದೆ. ಅತಿ ಉದ್ದದ ಈ ಹೆದ್ದಾರಿಯೂ ಇರುವುದು ಎಲ್ಲಿ? ಸೇರಿದಂತೆ ಇನ್ನಿತ್ತರ ಮಾಹಿತಿ ಇಲ್ಲಿದೆ.
Updated on: Jun 18, 2025 | 7:41 PM

ರಸ್ತೆಗಳು ಉತ್ತಮವಾಗಿದ್ದರೆ ವಾಹನ ಓಡಿಸಲು ಯಾರಿಗಾದರೂ ಖುಷಿಯಾಗುತ್ತದೆ. ರಸ್ತೆಗಳು ಎಂದ ಮೇಲೆ ಅಲ್ಲಲ್ಲಿ ತಿರುವುಗಳು ಇರುವುದು ಸರ್ವೇ ಸಾಮಾನ್ಯ. ಈ ತಿರುವಿನಲ್ಲಿ ವಾಹನ ಚಲಾಯಿಸುವಾಗ ಎಷ್ಟು ಜಾಗರೂಕರಾಗಿದ್ದರೂ ಸಾಲದು.

ಇನ್ನು ನಮ್ಮ ಬಳಿ ಯಾರಾದ್ರೂ ಬಂದು ಭಾರತದ ಅತಿ ಉದ್ದದ ರಸ್ತೆಯ ಬಗ್ಗೆ ಕೇಳಿದ್ರೆ ನಾವು ಮೊದಲು ಹೇಳುವುದೇ ರಾಷ್ಟ್ರೀಯ ಹೆದ್ದಾರಿ 44. ಇದರ ಉದ್ದ ಸುಮಾರು 4,112 ಕಿಲೋಮೀಟರ್‌ಗಳಷ್ಟು, ಆದರೆ ವಿಶ್ವದ ಅತಿ ಉದ್ದದ ರಸ್ತೆಯ ನಿಮಗೆ ಏನಾದ್ರು ತಿಳಿದಿದೆಯೇ.

ವಿಶ್ವದ ಅತಿ ಉದ್ದದ ಹೆದ್ದಾರಿಯಲ್ಲಿ ಯಾವುದೇ ತಿರುವುಗಳಿಲ್ಲವಂತೆ. ದಿನಕ್ಕೆ 500 ಕಿಲೋಮೀಟರ್ ವೇಗದಲ್ಲಿ ಪ್ರಯಾಣಿಸಿದ್ರೂ ಈ ರಸ್ತೆಯನ್ನು ಪೂರ್ಣಗೊಳಿಸಲು ಸರಿಸುಮಾರು 60 ದಿನಗಳು ಬೇಕಾಗುತ್ತದೆಯಂತೆ.

1920 ರ ದಶಕದ ಆರಂಭದಲ್ಲಿ ಪ್ಯಾನ್-ಅಮೇರಿಕನ್ ಹೆದ್ದಾರಿಯನ್ನು ನಿರ್ಮಾಣ ಮಾಡಲಾಯಿತಂತೆ. 1937 ರಲ್ಲಿ, 14 ದೇಶಗಳು ಈ ಸ್ಮಾರಕ ರಸ್ತೆಯನ್ನು ನಿರ್ಮಿಸಲು ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಸರಿಸುಮಾರು 20 ವರ್ಷದ ಬಳಿಕ ಅಂದರೆ 1960 ರಲ್ಲಿ ಸಾರ್ವಜನಿಕ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತಂತೆ.

ವಿಶ್ವದ ಅತಿ ಉದ್ದದ ಹೆದ್ದಾರಿಯಾಗಿರುವ ಪ್ಯಾನ್-ಅಮೆರಿಕನ್ ಹೆದ್ದಾರಿಯು ಅಮೆರಿಕ, ಮೆಕ್ಸಿಕೊ, ಗ್ವಾಟೆಮಾಲಾ, ಎಲ್ ಸಾಲ್ವಡಾರ್, ಹೊಂಡುರಾಸ್, ನಿಕರಾಗುವಾ, ಕೋಸ್ಟರಿಕಾ, ಪನಾಮ ಸೇರಿದಂತೆ ದಕ್ಷಿಣ ಅಮೆರಿಕಾದ ಮೂಲಕ ಕೊಲಂಬಿಯಾ, ಈಕ್ವೆಡಾರ್, ಪೆರು, ಚಿಲಿ ಮತ್ತು ಅರ್ಜೆಂಟೀನಾ ಹೀಗೆ ಸರಿಸುಮಾರು 14 ದೇಶಗಳ ಮೂಲಕ ಹಾದು ಹೋಗುತ್ತದೆ ಎನ್ನಲಾಗಿದೆ.

ಯಾವುದೇ ಹಂಪ್ ಇಲ್ಲದ ಈ ರಸ್ತೆಯೂ ಉತ್ತರ ಅಮೇರಿಕದ ಅಲಾಸ್ಕಾದ ಪುಧೋ ಬೇನಲ್ಲಿ ಪ್ರಾರಂಭವಾಗಿ, ಅರ್ಜೆಂಟೀನಾದ ಉಶುವಾಯಾ ನಗರದಲ್ಲಿ ಕೊನೆಗೊಳ್ಳುತ್ತದೆಯಂತೆ. ಈ ರಸ್ತೆಯ ಉದ್ದ ಬರೋಬ್ಬರಿ 30,600 ಕಿಲೋಮೀಟರ್ ಗಳಷ್ಟು ಎನ್ನಬಹುದು. ಈ ರಸ್ತೆಯಲ್ಲಿ ಆರಾಮದಾಯಕವಾಗಿ ಪ್ರಯಾಣಿಸುವುದಲ್ಲದೇ ಪ್ರಕೃತಿ ಸೌಂದರ್ಯವನ್ನು ಸವಿಯಬಹುದು.









