Optical Illusion : ಈ ಚಿತ್ರದಲ್ಲಿ ಅಡಗಿರುವ ವಿಮಾನವನ್ನು ಹುಡುಕಿ
ಮೆದುಳಿಗೆ ಕೆಲಸ ನೀಡುವಂತಹ ಅನೇಕ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಪ್ರತಿನಿತ್ಯ ವೈರಲ್ ಆಗುತ್ತಿರುತ್ತವೆ. ಇದೀಗ ಇಲ್ಲೊಂದು ಅಂತಹದ್ದೇ ಒಗಟಿನ ಚಿತ್ರ ವೈರಲ್ ಆಗಿದ್ದು, ಈ ಚಿತ್ರದಲ್ಲಿ ಅಡಗಿರುವ ವಿಮಾನವನ್ನು ಇಂತಿಷ್ಟು ಸೆಕೆಂಡುಗಳೊಳಗೆ ಕಂಡು ಹಿಡಿಯಬೇಕು. ಈ ಒಗಟನ್ನು ಬಿಡಿಸಲು ನಿಮ್ಮಿಂದ ಸಾಧ್ಯನಾ? ಹಾಗಾದ್ರೆ ಈಗಲೇ ಈ ಒಗಟನ್ನು ಬಿಡಿಸಲು ಪ್ರಯತ್ನಿಸಿ.

ಒಗಟುಗಳನ್ನು ಬಿಡಿಸುವುದೆಂದರೆ ಕೆಲವರಿಗೆ ಸುಲಭದ ಕೆಲಸ. ಕೆಲವರು ಎಷ್ಟೇ ಪ್ರಯತ್ನಿಸಿದರೂ ಕೂಡ ಕಠಿಣ ಒಗಟುಗಳನ್ನು ಬಿಡಿಸಲು ಸಾಧ್ಯವಾಗುವುದಿಲ್ಲ. ಆದರೆ ಈ ಆಪ್ಟಿಕಲ್ ಇಲ್ಯೂಷನ್ (Optical Illusion) ಚಿತ್ರಗಳು ಮೆದುಳಿಗೆ ವ್ಯಾಯಾಮ ನೀಡುವ ಮೂಲಕ ಬ್ರೈನ್ ಶಾರ್ಪ್ ಆಗಿಸುತ್ತದೆ. ಇದೀಗ ಇಂತಹದ್ದೇ ಟ್ರಿಕ್ಕಿ ಆಪ್ಟಿಕಲ್ ಇಲ್ಯೂಷನ್ ಚಿತ್ರವೊಂದು ಸೋಶಿಯಲ್ ಮೀಡಿಯಾದಲ್ಲಿ (social media) ವೈರಲ್ ಆಗಿದ್ದು, ಈ ಚಿತ್ರದಲ್ಲಿರುವ ವಿಮಾನವನ್ನು ಕೇವಲ ಐದು ಸೆಕೆಂಡುಗಳಲ್ಲಿ ಕಂಡು ಹಿಡಿಯಬೇಕು. ಒಂದು ವೇಳೆ ನೀವು ನಿರ್ದಿಷ್ಟ ಸಮಯದೊಳಗೆ ಪತ್ತೆ ಹಚ್ಚಲು ಸಾಧ್ಯವಾದರೆ ನೀವು ತುಂಬಾನೇ ಶಾರ್ಪ್ ಇದ್ದೀರಾ ಎನ್ನುವುದು ಖಚಿತವಾಗುತ್ತದೆ.
ಚಿತ್ರದಲ್ಲಿ ಏನಿದೆ? r/FindTheSniper ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಶೇರ್ ಮಾಡಲಾದ ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ನೀವು ಸುಂದರವಾದ ಪಟ್ಟಣವನ್ನು ನೋಡಬಹುದು. ಗುಡ್ಡಗಾಡು ಪ್ರದೇಶಗಳ ನಡುವೆ ಮನೆಗಳು, ಅಂಕುಡೊಂಕಾದ ರಸ್ತೆಗಳು ಹಾಗೂ ವಾಣಿಜ್ಯ ಕಟ್ಟಡಗಳನ್ನು ಕಾಣಬಹುದು. ಇನ್ನು ಅಲ್ಲೇ ಹತ್ತಿರದಲ್ಲಿ ನದಿಯೊಂದು ಹರಿಯುತ್ತಿದ್ದು ಪ್ರಶಾಂತವಾದ ವಾತಾವರಣವನ್ನು ಹೊಂದಿದೆ. ಆದರೆ ಈ ಚಿತ್ರದಲ್ಲಿ ವಿಮಾನವೊಂದು ಅಡಗಿದ್ದು, ಅದನ್ನು ಹುಡುಕುವ ಸವಾಲನ್ನು ನೀಡಲಾಗಿದೆ.
ಇದನ್ನೂ ಓದಿ :Optical Illusion : ಈ ಚಿತ್ರದಲ್ಲಿ ಅಡಗಿರುವ ಶ್ವಾನವನ್ನು 6 ಸೆಕೆಂಡುಗಳಲ್ಲಿ ಪತ್ತೆ ಹಚ್ಚಬಲ್ಲಿರಾ?
ಈ ಪೋಸ್ಟ್‌ಗೆ ಬಳಕೆದಾರರು ಕಾಮೆಂಟ್‌ಗಳನ್ನು ಮಾಡಿದ್ದು, ಬಳಕೆದಾರರೊಬ್ಬರು, ಈ ಚಿತ್ರ ನೋಡಿದರೆ ನ್ಯೂಜಿಲೆಂಡ್‌ನಂತೆ ಕಾಣುತ್ತಿದೆ. ಆದರೆ ಈ ಚಿತ್ರವನ್ನು ಸೂಕ್ಷ್ಮವಾಗಿ ನೋಡಿದ ಬಳಿಕ ನಾನು ವಿಮಾನವನ್ನು ಗುರುತಿಸಲು ಸಾಧ್ಯವಾಯಿತು ಎಂದಿದ್ದಾರೆ. ಇನ್ನೊಬ್ಬರು, ವಿಮಾನವನ್ನು ಪತ್ತೆ ಹಚ್ಚುವುದು ತುಂಬಾನೇ ಕಷ್ಟಕರವಾಗಿತ್ತು. ಜೀವನದಲ್ಲಿ ನಿಜವಾದ ವಿಮಾನವನ್ನು ನೋಡುವುದು ಸುಲಭ. ಆದರೆ ಈ ಚಿತ್ರದಲ್ಲಿ ಗುರುತಿಸುವುದು ನನಗೆ ಕಷ್ಟಕರವಾಗಿತ್ತು ಎಂದಿದ್ದಾರೆ. ಮತ್ತೊಬ್ಬರು, ಇಂತಹ ಒಗಟುಗಳನ್ನು ಬಿಡಿಸುವ ಮಜಾನೇ ಬೇರೆ, ಸಮಯ ಸಿಕ್ಕಾಗಲ್ಲೆಲ್ಲಾ ಇಂತಹ ಚಿತ್ರಗಳ ಮೇಲೆ ಹೆಚ್ಚು ಗಮನ ಹರಿಸುತ್ತೇನೆ ಎಂದು ಕಾಮೆಂಟ್ ಮಾಡಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ
ಉತ್ತರ ಇಲ್ಲಿದೆ
ಎಷ್ಟೇ ಹುಡುಕಿದರೂ ಈ ಚಿತ್ರದಲ್ಲಿ ಅಡಗಿರುವ ವಿಮಾನವನ್ನು ಕಂಡು ಹಿಡಿಯಲು ನಿಮ್ಮಿಂದ ಸಾಧ್ಯವಾಗುತ್ತಿಲ್ಲವೇ, ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಈ ಚಿತ್ರವನ್ನು ಸೂಕ್ಷ್ಮವಾಗಿ ಬಹಳ ಹತ್ತಿರದಿಂದ ಗಮನಿಸಿ, ಈ ಚಿತ್ರದ ಬಲಭಾಗದ ಕಡು ಬೂದು ಪ್ರದೇಶದ ಮೇಲೆ ವಿಮಾನವು ನಿಮ್ಮ ಕಣ್ಣಿಗೆ ಬೀಳುತ್ತದೆ. ಹೌದು, ಈ ವಿಮಾನವು ಬಿಳಿ ಬಣ್ಣದಲ್ಲಿದ್ದು ಪಶ್ಚಿಮದ ಕಡೆಗೆ ಮುಖ ಮಾಡಿರುವುದು ನೋಡಬಹುದು.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ