Optical Illusion: P ನಡುವೆ ಅಡಗಿರುವ F ಅಕ್ಷರವನ್ನು ಹುಡುಕಲು ನಿಮ್ಮಿಂದ ಸಾಧ್ಯವೇ?
ದೃಷ್ಟಿ ಮತ್ತು ಮೆದುಳಿಗೆ ಕೆಲಸ ನೀಡುವಂತಹ ಆಪ್ಟಿಕಲ್ ಇಲ್ಯೂಷನ್, ಬ್ರೈನ್ ಟೀಸರ್ ಇತ್ಯಾದಿ ಒಗಟಿನ ಆಟಗಳನ್ನು ಬಿಡಿಸುವ ಮಜಾನೇ ಬೇರೆ. ಇದೀಗ ಇಲ್ಲೊಂದು ಕಷ್ಟಕರವಾದ ಆಪ್ಟಿಕಲ್ ಇಲ್ಯೂಷನ್ ಚಿತ್ರವೊಂದು ವೈರಲ್ ಆಗಿದ್ದು, P ಅಕ್ಷರಗಳ ನಡುವೆ ಅಡಗಿರುವ F ಅಕ್ಷರವನ್ನು ಹುಡುಕಲು ಸವಾಲು ನೀಡಲಾಗಿದೆ. ಆದರೆ ಈ ಒಗಟಿನ ಆಟವನ್ನು ಬಿಡಿಸಲು ನಿಮಗಿರುವ ಸಮಯಾವಕಾಶ ಹತ್ತು ಸೆಕೆಂಡುಗಳು ಮಾತ್ರ, ಈ ಸವಾಲು ಸ್ವೀಕರಿಸಲು ನೀವು ಸಿದ್ಧವಿದ್ದೀರಾ.

ಇತ್ತೀಚೆಗಿನ ದಿನಗಳಲ್ಲಿ ಬ್ರೈನ್ ಟೀಸರ್, ಆಪ್ಟಿಕಲ್ ಇಲ್ಯೂಷನ್‌ನಂತಹ (Optical Illusion) ಒಗಟಿನ ಆಟಗಳು ಬಹಳಷ್ಟು ಜನಪ್ರಿಯವಾಗುತ್ತಿದೆ. ಬಿಡುವು ಸಿಕ್ಕಾಗಲೆಲ್ಲಾ ಹೆಚ್ಚಿನವರು ಇಂತಹ ಒಗಟನ್ನು ಬಿಡಿಸುವುದರಲ್ಲೇ ಸಮಯ ಕಳೆಯುತ್ತಾರೆ. ಈ ಚಿತ್ರಗಳು ದೃಷ್ಟಿ ಮತ್ತು ಬುದ್ಧಿಗೆ ಸವಾಲು ಎಸೆಯುತ್ತವೆ. ಈ ಮೋಜಿನ ಆಟಗಳು ತಲೆ ಕೆಡಿಸಿಕೊಳ್ಳುವಂತೆ ಮಾಡುವುದರೊಂದಿಗೆ ಮೆದುಳಿಗೆ ಕೆಲಸ ನೀಡುತ್ತದೆ. ಇದೀಗ ಇಲ್ಲೊಂದು ದೃಷ್ಟಿ ಸಾಮರ್ಥ್ಯಕ್ಕೆ ಸವಾಲೊಡ್ಡುವ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಈ ಚಿತ್ರದಲ್ಲಿ P ಅಕ್ಷರಗಳ ನಡುವೆ ಅಡಗಿರುವ F ಅಕ್ಷರವನ್ನು ನೀವು ಕಂಡು ಹಿಡಿಯಬೇಕು. ಕೇವಲ 10 ಸೆಕೆಂಡುಗಳಲ್ಲಿ F ಅಕ್ಷರವನ್ನು ಹುಡುಕುವ ಮೂಲಕ ನಿಮ್ಮ ದೃಷ್ಟಿ ಸಾಮರ್ಥ್ಯ ಎಷ್ಟಿದೆ ಎಂದು ಕಂಡುಕೊಳ್ಳಿ.
P ಅಕ್ಷರಗಳ ನಡುವಿನ F ಅಕ್ಷರವನ್ನು ಹುಡುಕಿ
ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ P ಅಕ್ಷರಗಳ ರಾಶಿಯೇ ಇದೆ. ಆದರೆ ಈ ಅಕ್ಷರಗಳ ನಡುವೆ F ಅಕ್ಷರವೊಂದು ಅಡಗಿದೆ. ಮೇಲ್ನೋಟಕ್ಕೆ ಈ ಚಿತ್ರವನ್ನು ನೋಡಿದಾಗ ನಿಮ್ಮ ಕಣ್ಣಿಗೆ P ಅಕ್ಷರಗಳೇ ಕಾಣಿಸುತ್ತವೆ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ P ಅಕ್ಷರಗಳ ನಡುವೆ F ಅಕ್ಷರವಿದೆ. ನಿಮ್ಮ ಕಣ್ಣು ಶಾರ್ಪ್ ಇದೆ ಎಂದಾದರೆ ಹತ್ತು ಸೆಕೆಂಡುಗಳಲ್ಲಿ ಈ ಅಕ್ಷರವನ್ನು ಹುಡುಕಿ ನೋಡೋಣ. ಮೆದುಳಿಗೆ ಕೆಲಸ ನೀಡುವ ಈ ಸವಾಲನ್ನು ಸ್ವೀಕರಿಸಲು ನೀವು ಸಿದ್ಧರಿದ್ದೀರಾ. ಹಾಗಾದ್ರೆ ಈ ಒಗಟಿನ ಚಿತ್ರದತ್ತ ಕಣ್ಣು ಹಾಯಿಸಿ ಉತ್ತರ ಕಂಡುಹಿಡಿಯಲು ಸಿದ್ಧರಾಗಿ.
ಇದನ್ನೂ ಓದಿ :Optical Illusion : ಈ ಚಿತ್ರದಲ್ಲಿ ಎಷ್ಟು ಪ್ರಾಣಿಗಳಿವೆ, ನಿಮ್ಮಿಂದ ಹೇಳಲು ಸಾಧ್ಯನಾ?
ಉತ್ತರ ಇಲ್ಲಿದೆ

ಈ ಆಪ್ಟಿಕಲ್ ಇಲ್ಯೂಷನ್ ಎಷ್ಟೇ ಕಣ್ಣುಹಾಯಿಸಿದರೂ ಕೂಡ ಕೇವಲ ಹತ್ತು ಸೆಕೆಂಡುಗಳಲ್ಲಿ ಉತ್ತರ ಕಂಡು ಹಿಡಿಯಲು ಸಾಧ್ಯವಾಗಿಲ್ಲವೇ. ನೀವು ಈ ಸವಾಲನ್ನು ಪೂರ್ಣಗೊಳಿಸಲು ನಿಮ್ಮಿಂದ ಸಾಧ್ಯವಾಗಿಲ್ಲ ಎಂದಾದರೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಈ ಚಿತ್ರದ ಐದನೇ ಸಾಲಿನ ಕೊನೆಯಲ್ಲಿ F ಅಕ್ಷರವಿದೆ. ಉತ್ತರವನ್ನು ಕೆಂಪು ಬಣ್ಣದಲ್ಲಿ ಗುರುತಿಸಿದ್ದೇವೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:45 am, Mon, 23 June 25








