Optical Illusion : ಈ ಚಿತ್ರದಲ್ಲಿ ಅಡಗಿರುವ ಆನೆಯನ್ನು ನೀವು ಹುಡುಕುವುದಕ್ಕೆ ಸಾಧ್ಯ ಇದ್ಯಾ?
ಆಪ್ಟಿಕಲ್ ಇಲ್ಯೂಷನ್ ನೋಡುವುದಕ್ಕೆ ಬಹಳ ಸುಲಭವಾಗಿ ಕಂಡರೂ ಕೂಡ ಅದನ್ನು ಬಿಡಿಸುವುದು ಅಷ್ಟು ಸುಲಭವಾಗಿರುವುದಿಲ್ಲ. ಈ ರೀತಿಯ ಚಿತ್ರಗಳು ನಿಮ್ಮ ಮೆದುಳಿಗೆ ಕೆಲಸ ನೀಡುವುದು ಮಾತ್ರವಲ್ಲ, ನಿಮ್ಮ ಬುದ್ಧಿವಂತಿಕೆ ಹಾಗೂ ಯೋಚನಾಶಕ್ತಿ ಎಷ್ಟಿದೆ ಎಂಬುದನ್ನು ಕೂಡ ಪರೀಕ್ಷಿಸಲು ಸಹಾಯ ಮಾಡುತ್ತದೆ. ಈಗ ಅದೇ ರೀತಿಯ ಒಗಟಿನ ಚಿತ್ರವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ವ್ಯಕ್ತಿಯೊಬ್ಬ ವಿಚಿತ್ರ ವೇಷ ಧರಿಸಿ, ಖಡ್ಗ, ವಾದ್ಯಗಳನ್ನು ಹಿಡಿದುಕೊಂಡು ಸರ್ಕಸ್ ಟೆಂಟ್ ಬಳಿ ಹೋಗುತ್ತಿದ್ದಾನೆ. ಆದರೆ ಈ ಚಿತ್ರದಲ್ಲಿ ಆನೆಯೂ ಇದ್ದು ಅದು ಎಲ್ಲಿದೆ ಎಂಬುದನ್ನು ನೀವು ಕೇವಲ ಐದೇ ಸೆಕೆಂಡುಗಳಲ್ಲಿ ಪತ್ತೆ ಹಚ್ಚಬೇಕು, ಅದು ನಿಮ್ಮಿಂದ ಸಾಧ್ಯನಾ?.

ಆಪ್ಟಿಕಲ್ ಇಲ್ಯೂಷನ್ (Optical Illusion) ನಮ್ಮ ಕಣ್ಣು ಮತ್ತು ಮೆದುಳಿಗೆ ಸವಾಲೊಡ್ಡುವ ಒಗಟುಗಳನ್ನು ಜನ ಸಾಮಾನ್ಯವಾಗಿ ಇಷ್ಟಪಡುತ್ತಾರೆ. ಹಾಗಾಗಿಯೇ ಈ ರೀತಿಯ ಚಿತ್ರಗಳು, ಬ್ರೈನ್ ಟೀಸರ್ (brain teaser) ಗಳಂತಹ ಒಗಟಿನ ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಹರಿದಾಡುತ್ತಿರುತ್ತವೆ. ಕೆಲವೊಂದು ಒಗಟುಗಳು ಬಹಳ ಟ್ರಿಕ್ಕಿಯಾಗಿದ್ದರೂ ಕೂಡ ಈ ರೀತಿಯ ಸವಾಲುಗಳನ್ನು ಎದುರಿಸುವ ಮಜಾನೇ ಬೇರೆ. ಕೆಲವರಂತು ಸಮಯ ಸಿಕ್ಕಾಗೆಲ್ಲಾ ಈ ರೀತಿಯ ಟ್ರಿಕ್ಕಿಯಾಗಿರುವ ಸವಾಲುಗಳನ್ನು ಬಿಡಿಸುತ್ತಾರೆ. ಆದರೆ ಕೆಲವರಿಗೆ ಬೇಗ ಉತ್ತರ ಸಿಗುತ್ತದೆ, ಮತ್ತೊಂದಿಷ್ಟು ಜನರಿಗೆ ಎಷ್ಟು ಸಮಯ ತೆಗೆದುಕೊಂಡರು ಇಂತಹ ಒಗಟುಗಳಿಗೆ ಉತ್ತರವೇ ಸಿಗುವುದಿಲ್ಲ. ಇದೀಗ ಅಂತಹದ್ದೇ ಬುದ್ಧಿವಂತಿಕೆ ಮತ್ತು ಕಣ್ಣಿನ ತೀಕ್ಷ್ಣತೆಗೆ ಸವಾಲೊಡ್ಡುವ ಒಗಟಿನ ಚಿತ್ರವೊಂದು ಸೋಶಿಯಲ್ ಮೀಡಿಯಾ (social media) ದಲ್ಲಿ ವೈರಲ್ ಆಗುತ್ತಿದೆ. ಈ ಆಪ್ಟಿಕಲ್ ಇಲ್ಯೂಷನ್ ಚಿತ್ರವನ್ನು ಸರಿಯಾಗಿ ಗಮನಿಸಿ ಇದರಲ್ಲಿ ವ್ಯಕ್ತಿಯೊಬ್ಬ ವಿಚಿತ್ರ ವೇಷ ಧರಿಸಿ, ಖಡ್ಗ, ವಾದ್ಯಗಳನ್ನು ಹಿಡಿದುಕೊಂಡು ಸರ್ಕಸ್ ಟೆಂಟ್ ಬಳಿ ಹೋಗುತ್ತಿದ್ದಾನೆ. ಆದರೆ ಈ ಚಿತ್ರದಲ್ಲಿ ಆನೆಯೂ ಇದ್ದು ಅದು ಎಲ್ಲಿದೆ ಎಂಬುದನ್ನು ಕಂಡು ಹಿಡಿಯಬೇಕು. ಹಾಗಾದರೆ ಈ ಸವಾಲನ್ನು ನೀವು ಸ್ವೀಕರಿಸಿದ್ದೀರಾ?
ಚಿತ್ರದಲ್ಲಿ ಏನಿದೆ?
ಈ ಆಪ್ಟಿಕಲ್ ಇಲ್ಯೂಷನ್ ಚಿತ್ರ ಬಹಳ ಟ್ರಿಕ್ಕಿಯಾಗಿದ್ದು ನಿಜಕ್ಕೂ ಆಸಕ್ತಿದಾಯಕವಾಗಿದೆ. ಈ ಚಿತ್ರ ಬಹಳ ಸರಳವಾಗಿ ಕಂಡರೂ ಕೂಡ ಉತ್ತರ ಹುಡುಕುವುದು ಅಷ್ಟು ಸುಲಭವಾಗಿಲ್ಲ. ಫೋಟೋದಲ್ಲಿ ನೀವು ನೋಡುವಂತೆ ವ್ಯಕ್ತಿಯೊಬ್ಬ ಸಂಗೀತ ವಾದ್ಯ, ಖಡ್ಗಗಳನ್ನು ಹಿಡಿದುಕೊಂಡು ಸರ್ಕಸ್ ಟೆಂಟ್ ಬಳಿ ಹೋಗುತ್ತಿರುವುದನ್ನು ನೀವು ನೋಡಬಹುದಾಗಿದೆ. ಆದರೆ ನಿಜವಾದ ಸವಾಲು ಇರುವುದು ಆ ಚಿತ್ರದಲ್ಲಿ. ಇಲ್ಲಿ ನೀವು ಆನೆಯನ್ನು ಕೇವಲ ಐದೇ ಸೆಕೆಂಡುಗಳಲ್ಲಿ ಹುಡುಕಬೇಕು.
ಇದನ್ನೂ ಓದಿ: Optical Illusion : ಜಸ್ಟ್ 10 ಸೆಕೆಂಡುಗಳಲ್ಲಿ ಈ ಚಿತ್ರದಲ್ಲಿ ಅಡಗಿರುವ ಕಪ್ಪೆಯನ್ನು ಕಂಡು ಹಿಡಿಯಬಲ್ಲಿರಾ?
ಉತ್ತರ ಇಲ್ಲಿದೆ
ಕೆಲವರು ಒಗಟು ಬಿಡಿಸುವುದರಲ್ಲಿ ಜಾಣರಾಗಿರುತ್ತಾರೆ. ಅಂತವರಲ್ಲಿ ನೀವೂ ಒಬ್ಬರಾ? ಅಥವಾ ನಿಮಗೆ ಇನ್ನು ಇದಕ್ಕೆ ಉತ್ತರ ಸಿಕ್ಕಿಲ್ವಾ?ಯೋಚನೆ ಮಾಡಬೇಡಿ, ನೀವು ಎಷ್ಟೇ ಹುಡುಕಿದರೂ ಚಿತ್ರದಲ್ಲಿ ಆನೆ ಕಂಡಿಲ್ಲ ಎಂದಾದರೆ ನೀವು ಚಿತ್ರವನ್ನು ಸರಿಯಾಗಿ ನೋಡಿಲ್ಲ ಎಂದರ್ಥ. ಹೋಗಲಿ ಬಿಡಿ, ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಈ ಚಿತ್ರದಲ್ಲಿ ಮನುಷ್ಯನ ಬೆನ್ನನ್ನು ಸರಿಯಾಗಿ ನೋಡಿ. ಅವನ ಜಾಕೆಟ್ ಹಿಂದೆ ಆನೆ ಕಾಣಿಸುತ್ತದೆ. ಅದರ ಸೊಂಡಿಲು ಆ ವ್ಯಕ್ತಿಯ ಬೆನ್ನ ಹಿಂದಿನಿಂದ ಇಳಿದು ಕಾಲಿನವರೆಗೆ ಬಂದಿರುವುದು ಕಾಣಿಸುತ್ತದೆ. ಈ ರೀತಿಯ ಮಾನಸಿಕ ವ್ಯಾಯಾಮಗಳನ್ನು ಮಾಡಿ ಚುರುಕಾಗಿ, ಆರೋಗ್ಯವಾಗಿರಿ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:15 pm, Sat, 21 June 25