Optical Illusion: ಈ ಕೊಳದಲ್ಲಿ ಅಡಗಿರುವ ಮೊಸಳೆಯನ್ನು ಹುಡುಕಲು ನಿಮ್ಮಿಂದ ಸಾಧ್ಯನಾ?
ಇತ್ತೀಚೆಗಿನ ದಿನಗಳಲ್ಲಿ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ ಇದೆ. ಇಂತಹ ಚಿತ್ರಗಳು ನಿಮ್ಮ ದೃಷ್ಟಿ ಮತ್ತು ಮೆದುಳಿಗೆ ಕೆಲಸ ನೀಡುತ್ತವೆ. ಕೆಲವೊಂದು ಒಗಟುಗಳು ಟ್ರಿಕ್ಕಿಯಾಗಿದ್ದರೂ ಈ ಸವಾಲುಗಳನ್ನು ಎದುರಿಸುವ ಖುಷಿಯೇ ಬೇರೆ ಎನ್ನಬಹುದು. ಹೌದು, ಇದೀಗ ಇಲ್ಲೊಂದು ಬಹಳ ಕಷ್ಟಕರವಾದ ಆಪ್ಟಿಕಲ್ ಇಲ್ಯೂಷನ್ ಚಿತ್ರವೊಂದು ವೈರಲ್ ಆಗಿದ್ದು ಈ ಚಿತ್ರದಲ್ಲಿ ಕೊಳವೊಂದಿದ್ದು, ಇದರಲ್ಲಿ ಅಡಗಿರುವ ಮೊಸಳೆಯನ್ನು ಹುಡುಕುವ ಸವಾಲು ನೀಡಲಾಗಿದ್ದು, ನಿಮ್ಮಿಂದ ಸಾಧ್ಯನಾ.

ಆಪ್ಟಿಕಲ್ ಇಲ್ಯೂಷನ್ (Optical Illusion) ನಂತಹ ಒಗಟಿನ ಆಟಗಳನ್ನು ಹೆಚ್ಚು ಇಷ್ಟ ಪಡುತ್ತಾರೆ. ಹೀಗಾಗಿ ಕೆಲವರು ಬಿಡುವು ಸಿಕ್ಕಾಗ ಒಗಟನ್ನು ಬಿಡಿಸುವುದರಲ್ಲಿ ಸಮಯ ಕಳೆದುಕೊಳ್ಳುತ್ತಾರೆ. ಈ ಚಿತ್ರ ಗಳು ದೃಷ್ಟಿ ಮತ್ತು ಬುದ್ಧಿಗೆ ಸವಾಲು ಎಸೆಯುತ್ತದೆ. ಕೆಲವೊಮ್ಮೆ ಭ್ರಮೆಯಲ್ಲಿ ಸಿಲುಕಿಸಲು ಬಹುದು. ಇದೀಗ ಬುದ್ಧಿವಂತಿಕೆ ಮತ್ತು ಕಣ್ಣಿನ ತೀಕ್ಷ್ಣತೆಗೆ ಸವಾಲೊಡ್ಡುವ ಒಗಟಿನ ಚಿತ್ರವೊಂದು ಸೋಶಿಯಲ್ ಮೀಡಿಯಾ (social media) ದಲ್ಲಿ ವೈರಲ್ ಆಗಿದೆ. ಈ ಆಪ್ಟಿಕಲ್ ಇಲ್ಯೂಷನ್ ಚಿತ್ರವನ್ನು ಸರಿಯಾಗಿ ಗಮನಿಸಿ, ಈ ಚಿತ್ರದಲ್ಲಿ ಕೊಳದಲ್ಲಿ ಮೊಸಳೆಯೊಂದು ಅಡಗಿ ಕುಳಿತಿದೆ. ಆ ಮೊಸಳೆ (crocodile) ಎಲ್ಲಿದೆ ಎಂದು ನೀವು ಹತ್ತೇ ಹತ್ತು ಸೆಕೆಂಡುಗಳಲ್ಲಿ ಪತ್ತೆ ಹಚ್ಚಬಲ್ಲಿರಾ, ಒಂದು ವೇಳೆ ನೀವು ಮೊಸಳೆಯನ್ನು ಗುರುತಿಸಲು ಸಾಧ್ಯವಾದರೆ ನಿಮ್ಮ ವೀಕ್ಷಣಾ ಕೌಶಲ್ಯವು ಚೆನ್ನಾಗಿದೆ ಎಂದರ್ಥ.
ಚಿತ್ರದಲ್ಲಿ ಏನಿದೆ?
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಚಿತ್ರದಲ್ಲಿ ಕೊಳವೊಂದಿದೆ. ಅದರ ಸುತ್ತಲೂ ಹಚ್ಚಹಸಿರಿನಿಂದ ಕೂಡಿದ ಮರಗಿಡಗಳು ಹಾಗೂ ಹುಲ್ಲುಗಳಿದ್ದು, ನೋಡಲು ಆಕರ್ಷಕವಾಗಿದೆ. ಆದರೆ ನಿಮಗಿರುವುದು ಸವಾಲು ಏನೆಂದರೆ ಈ ಕೊಳದಲ್ಲಿ ಒಂದು ಮೊಸಳೆಯಿದೆ. ಆ ಮೊಸಳೆ ಎಲ್ಲಿದೆ ಎಂದು ನೀವು ಪತ್ತೆ ಹಚ್ಚಬೇಕು. ಈ ಮೊಸಳೆಯನ್ನು ಕಂಡು ಹಿಡಿಯಲು ನಿಮಗೆ ಇರುವುದು ಕೆಲವೇ ಹತ್ತೇ ಹತ್ತು ಸೆಕೆಂಡುಗಳು ಮಾತ್ರ ಎನ್ನುವ ನೆನಪಿರಲಿ.
ಉತ್ತರ ಇಲ್ಲಿದೆ
ಎಷ್ಟೇ ಪ್ರಯತ್ನಿಸಿದರೂ, ಈ ಚಿತ್ರದತ್ತ ಕಣ್ಣುಹಾಯಿಸಿದರೂ ಮೊಸಳೆ ಮಾತ್ರ ನಿಮ್ಮ ಕಣ್ಣಿಗೆ ಬಿದ್ದಿಲ್ಲವೇ, ಈ ಚಿತ್ರದಲ್ಲಿರುವ ಮೊಸಳೆ ಪತ್ತೆ ಹಚ್ಚಲು ನಿಮಗೆ ಸಾಧ್ಯವಾಗಿಲ್ಲವೇ. ಆದರೆ ಹೆಚ್ಚು ಚಿಂತಿಸಬೇಡಿ, ಉತ್ತರವನ್ನು ನಾವು ನಿಮಗೆ ಹೇಳುತ್ತೇವೆ. ಕೊಳದ ನಡುವೆ ಮುರಿದು ಬಿದ್ದ ಕೊಂಬೆಯೊಂದಿದೆ. ಅದರ ಕೆಳಭಾಗವನ್ನು ಗಮನಿಸಿ, ಅಲ್ಲಿ ಮೊಸಳೆ ಕಣ್ಣು ಕಾಣಿಸುತ್ತದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ