AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Optical Illusion : ಕಾಗೆ, ಮೊಲ : ಈ ಚಿತ್ರದಲ್ಲಿ ನಿಮಗೆ ಮೊದಲು ಕಂಡಿದ್ದೇನು? ಈ ಚಿತ್ರವೇ ನಿಮ್ಮ ವ್ಯಕ್ತಿತ್ವ ತಿಳಿಸುತ್ತೆ

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳ ಮೂಲಕ ವ್ಯಕ್ತಿತ್ವ ಪರೀಕ್ಷಿಸುವುದು ಸರ್ವೇ ಸಾಮಾನ್ಯವಾಗಿದೆ. ಈ ಚಿತ್ರಗಳು ಮನುಷ್ಯನ ಮನದೊಳಗಿನ ಭಾವನೆಗಳು ಹಾಗೂ ವ್ಯಕ್ತಿತ್ವವನ್ನು ಬಹಿರಂಗ ಪಡಿಸುತ್ತದೆ. ಆದರೆ ಇದೀಗ ವೈರಲ್ ಆಗಿರುವ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದ ಮೂಲಕ ನೀವು ಹಠಮಾರಿಗಳೇ ಅಥವಾ ನಾಚಿಕೆ ಸ್ವಭಾವದವರೇ ಎಂದು ತಿಳಿಯಬಹುದು. ಕಾಗೆ ಅಥವಾ ಮೊಲ ಇದರಲ್ಲಿ ನಿಮಗೆ ಮೊದಲು ಯಾವುದು ಕಾಣಿಸಿತು ಎನ್ನುವುದನ್ನು ಆಧರಿಸಿ ನಿಮ್ಮ ನಿಗೂಢ ವ್ಯಕ್ತಿತ್ವವನ್ನು ತಿಳಿದುಕೊಳ್ಳಿ.

Optical Illusion : ಕಾಗೆ, ಮೊಲ : ಈ ಚಿತ್ರದಲ್ಲಿ ನಿಮಗೆ ಮೊದಲು ಕಂಡಿದ್ದೇನು? ಈ ಚಿತ್ರವೇ ನಿಮ್ಮ ವ್ಯಕ್ತಿತ್ವ ತಿಳಿಸುತ್ತೆ
ಆಪ್ಟಿಕಲ್‌ ಇಲ್ಯೂಷನ್‌ Image Credit source: Social Media
ಸಾಯಿನಂದಾ
|

Updated on: Jun 11, 2025 | 10:58 AM

Share

ಮೆದುಳಿಗೆ ವ್ಯಾಯಾಮ ನೀಡುವಂತಹ ಆಪ್ಟಿಕಲ್‌ ಇಲ್ಯೂಷನ್‌ (optical illusion) ಚಿತ್ರಗಳು, ಬ್ರೈನ್‌ ಟೀಸರ್‌ (brain teaser) ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವುದು ಮಾಮೂಲಿ. ಇದು ನಿಮ್ಮ ಬುದ್ಧಿವಂತಿಕೆ ಮತ್ತು ಕಣ್ಣಿನ ತೀಕ್ಷ್ಣತೆಗೆ ಸವಾಲೊಡ್ದುವ ಈ ಚಿತ್ರಗಳನ್ನು ಆಸಕ್ತಿಯಿಂದ ನೋಡುತ್ತಾರೆ. ಈ ಚಿತ್ರಗಳು ಕೆಲವೊಮ್ಮೆ ನಿಮಗೆ ಭ್ರಮೆಯನ್ನುಂಟು ಮಾಡುತ್ತದೆ. ಈ ಚಿತ್ರಗಳ ಮೂಲಕ ಹಲವರು ತಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಪರೀಕ್ಷಿಸಿಕೊಳ್ಳುತ್ತಿರುತ್ತಾರೆ. ಇದೀಗ ಅಂತಹದ್ದೇ ಚಿತ್ರವೊಂದು ಸೋಶಿಯಲ್ ಮೀಡಿಯಾ (social media) ದಲ್ಲಿ ಹರಿದಾಡುತ್ತಿದ್ದು, ಆ ಚಿತ್ರದಲ್ಲಿ ಕಾಗೆ ಅಥವಾ ಮೊಲವಿದೆ. ಆದರೆ ನಿಮಗೆ ಮೊದಲು ಕಂಡಿದ್ದೇನು ಎಂಬ ಆಧಾರದ ಮೇಲೆ ನಿಮ್ಮ ನಿಗೂಢ ವ್ಯಕ್ತಿತ್ವವೇನು ಎನ್ನುವುದನ್ನು ಪರೀಕ್ಷಿಸಿಕೊಳ್ಳಿ.

ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದ ಮೂಲಕ ನೀವು ವ್ಯಕ್ತಿತ್ವ ಪರೀಕ್ಷಿಸಿ

ಕಾಗೆಯನ್ನು ನೋಡಿದರೆ : ಈ ಚಿತ್ರವನ್ನು ಗಮನಿಸಿದಾಗ ಮೊದಲು ಕಾಗೆ ಕಂಡರೆ ಈ ವ್ಯಕ್ತಿಗಳು ಹುಟ್ಟಿನಿಂದಲೇ ಹಠಮಾರಿ ಸ್ವಭಾವದವರು ಎಂದೇಳಬಹುದು. ಈ ವ್ಯಕ್ತಿಗಳು ಬಲವಾದ ಇಚ್ಛಾಶಕ್ತಿ ಹಾಗೂ ದೃಢನಿಶ್ಚಯ ಹೊಂದಿರುತ್ತಾರೆ. ತಮ್ಮ ಸ್ಪಷ್ಟ ನಿಲುವು ಹಾಗೂ ದೃಢ ನಿಶ್ಚಯದಿಂದ ಗುರಿ ಸಾಧಿಸುವತ್ತ ಹೆಚ್ಚು ಗಮನಹರಿಸುತ್ತಾರೆ. ನೇರವಾಗಿ ಹಾಗೂ ಖಾರವಾಗಿ ಮಾತನಾಡುವ ಈ ಗುಣವು ಇವರನ್ನು ಎಲ್ಲರ ಮುಂದೆ ಕೆಟ್ಟವರನ್ನಾಗಿ ಕಾಣುವಂತೆ ಮಾಡುತ್ತದೆ. ಹಠ ಹಿಡಿದು ಕುಳಿತುಕೊಂಡರೆ ಯಾರ ಮಾತಿಗೂ ಹಾಗೂ ಸಲಹೆಗೂ ಕಿವಿಗೊಡುವುದಿಲ್ಲ. ಈ ವ್ಯಕ್ತಿಗಳು ಬದುಕಿನಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಅವರ ಮನಸ್ಸಿಗೆ ಸರಿ ಎನಿಸಿದರೆ ಯಾರು ಏನೇ ಹೇಳಿದರೂ ಆದರಿಂದ ಹಿಂದೆ ಸರಿಯುವುದಿಲ್ಲ. ಕಷ್ಟ ಪಟ್ಟು ದುಡಿದು ಜೀವನದಲ್ಲಿ ಏಳಿಗೆಯನ್ನು ಕಾಣುತ್ತಾರೆ.

ಇದನ್ನೂ ಓದಿ
Image
ಈ ಹುಲ್ಲಿನ ಪೊದೆಯಲ್ಲಿ ಅಡಗಿರುವ ಸಿಂಹದ ಮರಿಯನ್ನು ಹುಡುಕಬಲ್ಲಿರಾ?
Image
ಈ ಟೀ ಶರ್ಟ್‌ನಲ್ಲಿ ಎಷ್ಟು ತೂತುಗಳಿವೆ ಎಂದು ಹೇಳುವಿರಾ?
Image
9 ರ ನಡುವೆ ಅಡಗಿರುವ 8 ಸಂಖ್ಯೆಯನ್ನು ಹುಡುಕಬಲ್ಲಿರಾ?
Image
ಏಳು ಸೆಕೆಂಡುಗಳಲ್ಲಿ ಈ ಚಿತ್ರದಲ್ಲಿ ಅಡಗಿರುವ ವಸ್ತು ಹುಡುಕಿ

ಇದನ್ನೂ ಓದಿ : Optical Illusion : ಈ ಹುಲ್ಲಿನ ಪೊದೆಯಲ್ಲಿ ಅಡಗಿರುವ ಸಿಂಹದ ಮರಿಯನ್ನು ಹುಡುಕಬಲ್ಲಿರಾ?

ಮೊಲವನ್ನು ಮೊದಲು ಕಂಡರೆ : ಮೊಲವು ಹೇಗೆ ತನ್ನ ಶಾಂತ ಗುಣದಿಂದ ಎಲ್ಲರಿಗೂ ಇಷ್ಟವಾಗುತ್ತದೆಯೇ ಅದೇ ರೀತಿ ಈ ವ್ಯಕ್ತಿಗಳು ಬಹುಬೇಗನೇ ಎಲ್ಲರ ಪ್ರೀತಿಗೆ ಪಾತ್ರರಾಗುತ್ತಾರೆ. ಇವರು ಮೃದು, ಸೌಮ್ಯ ಹಾಗೂ ನಾಚಿಕೆ ಸ್ವಭಾವದವರು. ಸ್ನೇಹಪರರು ಆಗಿದ್ದು ಹೊಸಬರರೊಂದಿಗೆ ಬೆರೆಯಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ. ಅಭಿಪ್ರಾಯಗಳು , ಸಂಭಾಷಣೆ ಹಾಗೂ ನಿರ್ಧಾರಗಳು ಸ್ಪಷ್ಟ ಹಾಗೂ ನಿಖರವಾಗಿರುತ್ತದೆ. ಆದರೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ. ತಮಗೆ ಏನು ಅನಿಸುತ್ತದೆಯೋ ಅದನ್ನು ಇತರರೊಂದಿಗೆ ಹಂಚಿಕೊಳ್ಳುವ ಕಾರಣ ತಮ್ಮವರನ್ನು ಅರ್ಥ ಮಾಡಿಕೊಳ್ಳಲು ಇದರಿಂದ ಸಾಧ್ಯವಾಗುತ್ತದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಾಮೂಹಿಕ ಗಣೇಶ ವಿಸರ್ಜನೆ ವೇಳೆ ಕೋಮು ಸೌಹಾರ್ದತೆ ಮೆರೆದ ಮುಸ್ಲಿಂ ಬಾಂಧವರು
ಸಾಮೂಹಿಕ ಗಣೇಶ ವಿಸರ್ಜನೆ ವೇಳೆ ಕೋಮು ಸೌಹಾರ್ದತೆ ಮೆರೆದ ಮುಸ್ಲಿಂ ಬಾಂಧವರು
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ಸಿನಿಮಾ ಸೆನ್ಸಾರ್​​ಗೆ ಹೊಸ ಮಾರ್ಗಸೂಚಿ: ಇಲ್ಲಿದೆ ಪೂರ್ಣ ಮಾಹಿತಿ ವಿಡಿಯೋ
ಸಿನಿಮಾ ಸೆನ್ಸಾರ್​​ಗೆ ಹೊಸ ಮಾರ್ಗಸೂಚಿ: ಇಲ್ಲಿದೆ ಪೂರ್ಣ ಮಾಹಿತಿ ವಿಡಿಯೋ
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು