Optical Illusion: 9 ರ ನಡುವೆ ಅಡಗಿರುವ 8 ಸಂಖ್ಯೆಯನ್ನು ಹುಡುಕಬಲ್ಲಿರಾ?
ಪ್ರತಿನಿತ್ಯ ಸೋಷಿಯಲ್ ಮೀಡಿಯಾದಲ್ಲಿ ಮೆದುಳಿಗೆ ಕೆಲಸ ನೀಡುವ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ವೈರಲ್ ಆಗುತ್ತಿರುತ್ತವೆ. ಆದರೆ ಇದರಲ್ಲಿರುವ ಒಗಟುಗಳನ್ನು ಬಿಡಿಸುವುದು ಅಷ್ಟು ಸುಲಭವಲ್ಲ. ಕೆಲವರು ಇಂತಹ ಒಗಟುಗಳನ್ನು ಬಿಡಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ. ಆದರೆ ಇದೀಗ ವೈರಲ್ ಆಗಿರುವ ಫೋಟೋದಲ್ಲಿ ನಂಬರ್ 9 ರ ನಡುವೆ 8 ನಂಬರ್ ಅಡಗಿದೆ. ಕೆಲವೇ ಏಳು ಸೆಕೆಂಡುಗಳಲ್ಲಿ ಈ ಸಂಖ್ಯೆಯನ್ನು ನಿಮ್ಮಿಂದ ಹುಡುಕಲು ಸಾಧ್ಯವೇ, ಈ ಸವಾಲನ್ನು ನೀವು ಸ್ವೀಕರಿಸಿದ್ದೀರಾ.

ಕೆಲವೊಮ್ಮೆ ನೀವು ನಿಮ್ಮ ಮೆದುಳು ಹಾಗೂ ಬುದ್ಧಿವಂತಿಕೆ ಎಷ್ಟಿದೆ ಎಂದು ಪರೀಕ್ಷಿಸಿಕೊಳ್ಳಬೇಕಾಗುತ್ತದೆ. ನೀವೇಷ್ಟು ಬುದ್ಧಿವಂತರು ಎಂದು ತಿಳಿದುಕೊಳ್ಳಲು ಈ ಆಪ್ಟಿಕಲ್ ಇಲ್ಯೂಷನ್ (optical illusion) ಚಿತ್ರಗಳು ಸಹಾಯ ಮಾಡುತ್ತದೆ. ಈ ಚಿತ್ರಗಳಲ್ಲಿ ಕೆಲವೊಂದು ಸವಾಲಿನ ಒಗಟುಗಳು ನೀವು ಬಿಡಿಸಿದರೆ ನಿಮ್ಮ ಬುದ್ಧಿ ಹಾಗೂ ದೃಷ್ಟಿ ತೀಕ್ಷ್ಣತೆ ಎಷ್ಟಿದೆ ಎಂದು ತಿಳಿಸುತ್ತದೆ. ಈ ಕೆಲವು ಒಗಟುಗಳನ್ನು ಸ್ವಲ್ಪ ಟ್ರಿಕ್ಕಿ ಎನಿಸಿದರೂ ಕೂಡ ಅದರ ಬಿಡಿಸುವ ಖುಷಿನೇ ಬೇರೆ. ಇದೀಗ ಆಪ್ಟಿಕಲ್ ಇಲ್ಯೂಷನ್ ಚಿತ್ರವೊಂದು ವೈರಲ್ ಆಗಿದ್ದು, ಈ ಚಿತ್ರದಲ್ಲಿರುವ ಅಡಗಿರುವ ಸಂಖ್ಯೆಯನ್ನು ನೀವು ಗುರುತಿಸಬೇಕು. 9 ನಂಬರ್ ಗಳ ನಡುವೆ ಎಂಟು ಸಂಖ್ಯೆಯೊಂದು ಅಡಗಿ ಕುಳಿತಿದೆ. ಕೆಲವೇ ಕೆಲವು ಸೆಕೆಂಡುಗಳಲ್ಲಿ ಈ ಸಂಖ್ಯೆಯನ್ನು ನಿಮ್ಮಿಂದ ಸಾಧ್ಯವೇ?.
ಈ ಚಿತ್ರದಲ್ಲಿ ಏನಿದೆ? ಮೇಲಿರುವ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಸಾಲಾಗಿ 9 ಸಂಖ್ಯೆಯನ್ನು ಬರೆಯಲಾಗಿದೆ. ಈ 9 ಸಂಖ್ಯೆಗಳ ನಡುವೆ 8 ಸಂಖ್ಯೆಯೂ ಅಡಗಿದೆ. ಹೀಗಾಗಿ ನೀವು ಚಿತ್ರವನ್ನು ಏಕಾಗ್ರತೆಯಿಂದ ಗಮನಿಸಿ, ಒಂಬತ್ತು ಸಂಖ್ಯೆಗಳ ನಡುವೆ ಅಡಗಿರುವ ಎಂಟು ಸಂಖ್ಯೆಯನ್ನು ಬೇಗ ಪತ್ತೆ ಹಚ್ಚಿ ಉತ್ತರ ಹೇಳಿ.
ಇದನ್ನೂ ಓದಿ: Optical Illusion: ಏಳು ಸೆಕೆಂಡುಗಳಲ್ಲಿ ಈ ಚಿತ್ರದಲ್ಲಿ ಅಡಗಿರುವ ವಸ್ತು ಹುಡುಕಿ
ಉತ್ತರ ಇಲ್ಲಿದೆ? ನಿಮಗೆ ಕೊಟ್ಟಿರುವ ಸಮಯ ಏಳು ಸೆಕೆಂಡುಗಳು ಅಷ್ಟೇ. ಆದರೆ ನೀವು ಹತ್ತು ಸೆಕೆಂಡುಗಳಾದರೂ 9 ರ ನಡುವೆ ಅಡಗಿರುವ 8 ಸಂಖ್ಯೆಯನ್ನು ಪತ್ತೆ ಹಚ್ಚಲು ಸೋತಿದ್ದೀರಾ? ಹೆಚ್ಚು ಚಿಂತಿಸಬೇಡಿ, ಉತ್ತರವನ್ನು ನಾವೇ ನಿಮಗೆ ಹೇಳುತ್ತೇವೆ. ಈ ಆಪ್ಟಿಕಲ್ ಇಲ್ಯೂಷನ್ ಚಿತ್ರವನ್ನು ಸರಿಯಾಗಿ ಗಮನಿಸಿ, ಈ ಚಿತ್ರದ ಮೂರನೇ ಸಾಲಿನತ್ತ ಒಮ್ಮೆ ಕಣ್ಣಾಡಿಸಿ. ಏಳನೇ ಕಾಲಮ್ ನ ಮೂರನೇ ಸಾಲಿನಲ್ಲಿ 8 ಸಂಖ್ಯೆಯಿರುವುದನ್ನು ನೀವು ನೋಡಬಹುದು.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:33 pm, Fri, 6 June 25