AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಬಾರ್‌ಕೋಡ್‌ ತೋರಿಸಿ ಪ್ರಯಾಣಿಕರಿಂದ ಟಿಪ್ ಪಡೆಯುತ್ತಿರುವ ಅಡುಗೆ ಸಿಬ್ಬಂದಿ, ವಿಡಿಯೋ ವೈರಲ್

ಬಜೆಟ್‌ ಫ್ರೆಂಡ್ಲಿ ಹಾಗೂ ಆರಾಮದಾಯಕ ಎಂದು ಹೆಚ್ಚಿನ ಜನರು ತಮ್ಮ ದಿನ ನಿತ್ಯದ ಓಡಾಟಕ್ಕಾಗಿ ಈ ರೈಲನ್ನೇ ಅವಲಂಬಿಸಿದ್ದಾರೆ. ಆದರೆ ಕೆಲವೊಮ್ಮೆ ಪ್ರಯಾಣಿಕರು ಆಹಾರ ಖರೀದಿಸುವ ವೇಳೆ ಹೆಚ್ಚುವರಿ ಹಣ ವಸೂಲಿ ಮಾಡುವ ಘಟನೆಗಳು ನಡೆಯುತ್ತಿರುತ್ತದೆ. ಇದೀಗ ವಿಡಿಯೋದಲ್ಲಿ ಅಡುಗೆ ಸಿಬ್ಬಂದಿಯೊಬ್ಬರು ಪ್ರಯಾಣಿಕರಿಂದ ಟಿಪ್ ಆಗಿ ಹಣವನ್ನು ವಸೂಲಿ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದ್ದು ಆಕ್ರೋಶಕ್ಕೆ ಕಾರಣವಾಗಿದೆ.

ಸಾಯಿನಂದಾ
|

Updated on: Jun 06, 2025 | 3:38 PM

Share

ಆರಾಮದಾಯಕ ಹಾಗೂ ಖರ್ಚು ಕಡಿಮೆ ಎನ್ನುವ ಕಾರಣಕ್ಕೆ ಈ ರೈಲು ಸಾರಿಗೆ (railway transp0rt) ಬೆಸ್ಟ್ ಎನ್ನಬಹುದು. ಹೀಗಾಗಿ ದೆಹಲಿ, ಮುಂಬೈಯಂತಹ ದೊಡ್ಡ ದೊಡ್ಡ ನಗರಗಳಲ್ಲಿ ಜನರು ತಮ್ಮ ದಿನನಿತ್ಯದ ಕೆಲಸಕಾರ್ಯಗಳಿಗೆ ಹಾಗೂ ಓಡಾಟಕ್ಕೆ ರೈಲನ್ನು ಅವಲಂಬಿಸಿಕೊಂಡಿರುತ್ತಾರೆ. ಆದರೆ ಕೆಲವೊಮ್ಮೆ ಪ್ರಯಾಣಿಕರಿಂದ ರೈಲ್ವೆ ಸಿಬ್ಬಂದಿಗಳು ಹೆಚ್ಚುವರಿ ಹಣ ವಸೂಲಿ ಮಾಡುವ ಘಟನೆಗಳು ಬೆಳಕಿಗೆ ಬರುತ್ತಿರುತ್ತವೆ. ಇದೀಗ ರಾಜಧಾನಿ ಎಕ್ಸ್‌ಪ್ರೆಸ್ (Rajdhani Express) ನಲ್ಲಿ ಅಡುಗೆ ಸಿಬ್ಬಂದಿ (pantry staff) ಯೊಬ್ಬರು ಮೊಬೈಲ್‌ನಲ್ಲಿ ಬಾರ್‌ಕೋಡ್‌ ತೋರಿಸಿ ಹಣ ವಸೂಲಿ ಮಾಡುತ್ತಿದ್ದು, ಇದನ್ನು ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

@Pritamtayde0 ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಪ್ರಯಾಣಿಕರೊಬ್ಬರು ಶೇರ್ ಮಾಡಿಕೊಂಡಿದ್ದು, ನಾನು ಕೆಆರ್ ಎಸ್ ಬೆಂಗಳೂರಿನಿಂದ ನಾಗ್ಪುರ ಜಂಕ್ಷನ್‌ಗೆ ರೈಲು ಸಂಖ್ಯೆ 22691, ಕೋಚ್ B 2 ನಲ್ಲಿ ಪ್ರಯಾಣಿಸುವುದಾಗಿ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಅಷ್ಟೇ ಅಲ್ಲದೇ, ಅಡುಗೆ ಸಿಬ್ಬಂದಿಯೊಬ್ಬರು ಪ್ರಯಾಣಿಕರಿಂದ ಟಿಪ್ ನೀಡುವಂತೆ ಕೇಳಿದ್ದಾರೆ ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅಡುಗೆ ಸಿಬ್ಬಂದಿಯೊಬ್ಬರು ಪ್ರಯಾಣಿಕರಿಂದ ಟಿಪ್ ಕೇಳುವುದನ್ನು  ನೋಡಬಹುದು. ಸಿಬ್ಬಂದಿಯೂ ನೇರವಾಗಿ ಹಣ ಕೇಳದೆ, ಹವಾನಿಯಂತ್ರಿತ ಕೋಚ್‌ನಲ್ಲಿರುವ ಪ್ರಯಾಣಿಕರಿಗೆ ಮೊಬೈಲ್ ನಲ್ಲಿ ಬಾರ್‌ಕೋಡ್‌ನ್ನು ತೋರಿಸಿ ಟಿಪ್ ಪಡೆಯುತ್ತಿರುವುದನ್ನು ಕಾಣಬಹುದು. ಪ್ರಯಾಣಿಕರೊಬ್ಬರು ನಾನು ಕೊಟ್ಟೆ ಎನ್ನುತ್ತಿದ್ದಂತೆ. ಸರಿ ಯಾವುದೇ ಸಮಸ್ಯೆ ಇಲ್ಲ ಎಂದು ನಿಧಾನ ಧ್ವನಿಯಲ್ಲಿ ಈ ಸಿಬ್ಬಂದಿ ಹೇಳುತ್ತಿರುವುದನ್ನು ಕಾಣಬಹುದು.

ಇದನ್ನೂ ಓದಿ
Image
ನಳಿನ್​​​ ಕುಮಾರ್​​ ಕಟೀಲ್‌ಗೆ ಥ್ಯಾಂಕ್ಸ್​​​​ ಹೇಳಿ : ಪ್ರತಾಪ್​​​ ಸಿಂಹ
Image
ಕಾಲೇಜ್ ಬಂಕ್ ಮಾಡಿ ಗಲ್ಲಿಯಲ್ಲಿ ರೊಮ್ಯಾನ್ಸ್ ಮಾಡ್ತಾ ನಿಂತ ಸ್ಟೂಡೆಂಟ್
Image
ಯುವತಿಯ ಎರಡು ಆಫರ್ ರಿಜೆಕ್ಟ್ ಮಾಡಿದ ಯುವಕ
Image
ಪ್ರೇಯಸಿ ಮನೆಯ ಬಾಲ್ಕನಿಯಿಂದ ಕೆಳಗೆ ಹಾರಿದ ಪ್ರಿಯಕರ

ಇದನ್ನೂ ಓದಿ :Video : ಸೈಕಲ್‌ ಸವಾರನನ್ನು ಕಂಡು ಭಯಬಿದ್ದ ಕರಡಿ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಮೇ 9 ರಂದು ಶೇರ್ ಮಾಡಲಾದ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಈ ಪೋಸ್ಟ್‌ಗೆ ಅಧಿಕೃತ ಐಆರ್ ಸಿಟಿಸಿ ಖಾತೆ ಪ್ರತಿಕ್ರಿಯಿಸಿದ್ದು, ಸರ್, ದಯವಿಟ್ಟು ಮೊಬೈಲ್ ಸಂಖ್ಯೆಯನ್ನು ನೇರವಾಗಿ ಹಂಚಿಕೊಳ್ಳಿ ಎಂದು ತಿಳಿಸಿದೆ. ಬಳಕೆದಾರರೊಬ್ಬರು, ರೈಲ್ವೆ ಅಧಿಕಾರಿಗಳೇ ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದಿದ್ದಾರೆ. ಮತ್ತೊಬ್ಬರು, ಈ ಸಿಬ್ಬಂದಿ ಒಳ್ಳೆಯ ಸೇವೆಯನ್ನು ನೀಡಿದರೆ ನಿಮ್ಮಿಂದ ಟಿಪ್ ನಿರೀಕ್ಷಿಸಬಹುದು, ಆದರೆ ಒತ್ತಾಯಿಸುವಂತಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊರ್ವ ಬಳಕೆದಾರರು, ಈ ಅನುಭವವು ನನಗೂ ಆಗಿದೆ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಗುವಿನ ಮೇಲೆ ನಾಯಿ ದಾಳಿ, ಹೀರೋನಂತೆ ಬಂದು ಕಾಪಾಡಿದ ತಂದೆ
ಮಗುವಿನ ಮೇಲೆ ನಾಯಿ ದಾಳಿ, ಹೀರೋನಂತೆ ಬಂದು ಕಾಪಾಡಿದ ತಂದೆ
ಜಿಪಂ ಕಚೇರಿ ಆವರಣದಲ್ಲಿ ನೇಣು ಬಿಗಿದುಕೊಂಡು ಗುತ್ತಿಗೆ ನೌಕರ ಸಾವಿಗೆ ಶರಣು
ಜಿಪಂ ಕಚೇರಿ ಆವರಣದಲ್ಲಿ ನೇಣು ಬಿಗಿದುಕೊಂಡು ಗುತ್ತಿಗೆ ನೌಕರ ಸಾವಿಗೆ ಶರಣು
ಕಿತ್ತೂರು ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಈ ಸಲ ಫ್ಲಾವರ್​ ಶೋ ಥೀಮ್
ಕಿತ್ತೂರು ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಈ ಸಲ ಫ್ಲಾವರ್​ ಶೋ ಥೀಮ್
100 ಎಸೆತಗಳ ಪಂದ್ಯ: 99ನೇ ಎಸೆತದಲ್ಲಿ 1 ವಿಕೆಟ್​ನ ರೋಚಕ ಗೆಲುವು..!
100 ಎಸೆತಗಳ ಪಂದ್ಯ: 99ನೇ ಎಸೆತದಲ್ಲಿ 1 ವಿಕೆಟ್​ನ ರೋಚಕ ಗೆಲುವು..!
ಕಂದಕಕ್ಕೆ ಉರುಳಿದ ವಾಹನ,ಮೂವರು ಸಿಆರ್​​ಪಿಎಫ್​ ಸಿಬ್ಬಂದಿ ಸಾವು
ಕಂದಕಕ್ಕೆ ಉರುಳಿದ ವಾಹನ,ಮೂವರು ಸಿಆರ್​​ಪಿಎಫ್​ ಸಿಬ್ಬಂದಿ ಸಾವು
ರಾತ್ರಿ ಸುರಿದ ಭಾರೀ ಮಳೆಯಿಂದ ನೀರು ಜಮೀನಿಗೆ ನುಗ್ಗಿ ರೈತ ರಾಜಣ್ಣ ಕಂಗಾಲು
ರಾತ್ರಿ ಸುರಿದ ಭಾರೀ ಮಳೆಯಿಂದ ನೀರು ಜಮೀನಿಗೆ ನುಗ್ಗಿ ರೈತ ರಾಜಣ್ಣ ಕಂಗಾಲು
VIDEO: ಕೆಣಕಿದ ದಿಗ್ವೇಶ್ ರಾಥಿಯ ಬೆಂಡೆತ್ತಿದ ಅಂಕಿತ್
VIDEO: ಕೆಣಕಿದ ದಿಗ್ವೇಶ್ ರಾಥಿಯ ಬೆಂಡೆತ್ತಿದ ಅಂಕಿತ್
ಚಿನ್ನಾಭರಣ ಖರೀದಿಗೆ ಬಂದು ಮಗುವನ್ನೇ ಮರೆತ ತಾಯಿ; ಮುಂದೇನಾಯ್ತು ಗೊತ್ತಾ?
ಚಿನ್ನಾಭರಣ ಖರೀದಿಗೆ ಬಂದು ಮಗುವನ್ನೇ ಮರೆತ ತಾಯಿ; ಮುಂದೇನಾಯ್ತು ಗೊತ್ತಾ?
ತೆಲುಗು ವೇದಿಕೆ ಮೇಲೆ ‘ಬಾವ’ ಹಾಡಿಗೆ ರಾಜ್, ಜೆಪಿ, ಶನೀಲ್ ಭರ್ಜರಿ ಸ್ಟೆಪ್
ತೆಲುಗು ವೇದಿಕೆ ಮೇಲೆ ‘ಬಾವ’ ಹಾಡಿಗೆ ರಾಜ್, ಜೆಪಿ, ಶನೀಲ್ ಭರ್ಜರಿ ಸ್ಟೆಪ್
ಪಾರ್ಕಿಂಗ್​ಗಾಗಿ ಪೂರ್ತಿ ರಸ್ತೆಯನ್ನೇ ಕಬಳಿಸಿರುವುದು ಮೂರ್ಖತನದ ಪರಮಾವಧಿ
ಪಾರ್ಕಿಂಗ್​ಗಾಗಿ ಪೂರ್ತಿ ರಸ್ತೆಯನ್ನೇ ಕಬಳಿಸಿರುವುದು ಮೂರ್ಖತನದ ಪರಮಾವಧಿ