Video : ಶಾಪಿಂಗ್ ಮಾಡಲು ಸೂಪರ್ ಮಾರ್ಕೆಟ್‌ಗೆ ಎಂಟ್ರಿ ಕೊಟ್ಟ ಗಜರಾಜ, ವಿಡಿಯೋ ವೈರಲ್
ಸೋಶಿಯಲ್ ಮೀಡಿಯಾದಲ್ಲಿ ದಿನಬೆಳಗಾದರೆ ಪ್ರಾಣಿ ಸಾಮ್ರಾಜ್ಯಕ್ಕೆ ಸಂಬಂಧ ಪಟ್ಟ ಒಂದಲ್ಲ ಒಂದು ವಿಡಿಯೋಗಳು ವೈರಲ್ ಆಗುತ್ತಿರುತ್ತದೆ. ಆದರೆ ಇದೀಗ ಇಂತಹದೊಂದು ವಿಡಿಯೋ ವೈರಲ್ ಆಗಿದ್ದು ಶಾಪಿಂಗ್ ಮಾಡಲು ಆನೆಯೊಂದು ಸೂಪರ್ ಮಾರ್ಕೆಟ್‌ಗೆ ನುಗ್ಗಿದೆ. ಅಷ್ಟೇ ಅಲ್ಲದೇ ತನಗೆ ಏನು ಬೇಕು ಅದನ್ನೆಲ್ಲಾ ತಿಂದು ಹೊಟ್ಟೆ ತುಂಬಿಸಿಕೊಂಡಿದೆ. ಈ ವಿಡಿಯೋವೊಂದು ಬಳಕೆದಾರರನ್ನು ಅಚ್ಚರಿಗೊಳಿಸಿದೆ.

ಥೈಲ್ಯಾಂಡ್, ಜೂನ್ 06: ಆನೆಗಳು ನಿಜವಾಗಿಯೂ ಸಾಧು ಪ್ರಾಣಿಗಳು, ಸುಖಾ ಸುಮ್ಮನೆ ಯಾರ ತಂಟೆಗೂ ಹೋಗುವುದಿಲ್ಲ. ಒಂದು ವೇಳೆ ಸಿಟ್ಟು ಬಂದರೆ, ಮದವೇರಿದರೆ ಅದನ್ನು ನಿಯಂತ್ರಿಸುವುದೇ ಕಷ್ಟ. ಮನುಷ್ಯರನ್ನಷ್ಟೇ ಅಲ್ಲ, ಸಿಕ್ಕ ಸಿಕ್ಕ ವಸ್ತುಗಳನ್ನು ಎಸೆದು ರಂಪಾಟ ಮಾಡುವುದಿದೆ. ಆದರೆ ಇದೀಗ ಆನೆಯೊಂದು ಸೂಪರ್ ಮಾರ್ಕೆಟ್‌ಗೆ ನುಗ್ಗಿ ಶಾಪಿಂಗ್ ಮಾಡಿದೆ. ಹೌದು ಥೈಲ್ಯಾಂಡ್ ನ ಸೂಪರ್ ಮಾರ್ಕೆಟ್ (super market in Thailand) ನಲ್ಲಿ ಇಂತಹದೊಂದು ಅಪರೂಪದ ದೃಶ್ಯ ಕಂಡು ಬಂದಿದ್ದು, ತನಗೆ ಏನು ಬೇಕು ಅದನ್ನೆಲ್ಲಾ ತಿಂದು ಅಲ್ಲಿಂದ ಹೊರಟು ಹೋಗಿದೆ. ಇಂಡಿಪೆಂಡೆಂಟ್ ವರದಿಯ ಪ್ರಕಾರವಾಗಿ, ಈ ಆನೆಯು ಕಾವೋ ಯಾಯ್ ರಾಷ್ಟ್ರೀಯ ಉದ್ಯಾನವನ (Thailand’s Khayo Yai National park )ದ ನಿವಾಸಿಯಾಗಿದ್ದು, ಪ್ಲಾಯ್ ಬಿಯಾಂಗ್ ಲೆಕ್ (Plai Biang Lek) ಎಂದು ಗುರುತಿಸಲಾಗಿದೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಈ ದೃಶ್ಯವು ನೆಟ್ಟಿಗರ ಹೃದಯ ಗೆದ್ದುಕೊಂಡಿದೆ.
ವೈರಲ್ ವಿಡಿಯೋದಲ್ಲಿ ಏನಿದೆ?
Bangkokcommunityhelp ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದೊಂದಿಗೆ ಶೀರ್ಷಿಕೆಯಲ್ಲಿ “ಕಾವೋ ಯಾಯ್‌ನಲ್ಲಿ ಆನೆಯೊಂದು ಕದಿನಸಿ ಅಂಗಡಿಗೆ ಆಕಸ್ಮಿಕವಾಗಿ ಭೇಟಿ ನೀಡಿದೆ. ಥೈಲ್ಯಾಂಡ್‌ನಲ್ಲಿ ಇದೊಂದು ಸಾಮಾನ್ಯ ದಿನ, ಹೊರಡುವಾಗ, ಹಸಿದ ಆನೆಯು ದಾರಿಯುದ್ದಕ್ಕೂ ತಿನ್ನಲು ಕೆಲವು ಅಕ್ಕಿ ಬಿಸ್ಕತ್ತುಗಳನ್ನು ಸಹ ಪಡೆದುಕೊಂಡಿದೆ” ಎಂದು ಬರೆದುಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಹಸಿದ ಆನೆಯೊಂದು ದಿನಸಿ ಅಂಗಡಿಗೆ ನುಗ್ಗಿದ್ದು ತನೆಗೆ ಏನು ಬೇಕು ಅದೆಲ್ಲವನ್ನು ತಿನ್ನುತ್ತಿರುವುದನ್ನು ನೀವಿಲ್ಲಿ ನೋಡಬಹುದು. ಹೌದು, ದಿನಸಿ ಅಂಗಡಿಯೊಳಗೆ ಎಂಟ್ರಿ ಕೊಟ್ಟ ಆನೆಯೂ , ಯಾರಿಗೂ ಏನು ತೊಂದರೆ ಮಾಡದೇ ಕಪಾಟಿನಲ್ಲಿ ಜೋಡಿಸಿಟ್ಟಿದ್ದ ತಿಂಡಿ ತಿನಿಸುಗಳನ್ನು ತಿಂದು ಅಲ್ಲಿಂದ ಹೊರಟು ಹೋಗಿರುವುದನ್ನು ನೋಡಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಜೂನ್ 2ರಂದು ಶೇರ್ ಮಾಡಲಾದ ಈ ವಿಡಿಯೋ ಈಗಾಗಲೇ 2.7 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದಾರೆ. ಬಳಕೆದಾರರೊಬ್ಬರು, ಆನೆಗಳು ಕೂಡ ತಿಂಡಿ ತಿನ್ನಲು ಹೀಗೆ ಮಾಡುತ್ತವೆ ಎಂದಿದ್ದಾರೆ. ಮತ್ತೊಬ್ಬರು, ಆನೆಗಳು ಶಾಂತತೆಯಿಂದ ವರ್ತಿಸುವುದು ಬಹಳ ಕಡಿಮೆ, ಆದರೆ ಈ ಆನೆ ಮಾತ್ರ ತನಗೆ ಏನು ಬೇಕು ಅದನ್ನು ಮಾತ್ರ ತೆಗೆದುಕೊಂಡು ಹೋದದ್ದನ್ನು ನೋಡಿ ಅಚ್ಚರಿಯಾಯಿತು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು, ಪಾಪ ಹಸಿದ್ದಿರಬೇಕು, ತಿನ್ನಲಿ ಬಿಡಿ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:51 am, Fri, 6 June 25








