Viral : ಅಂದು ನಳಿನ್ ಕುಮಾರ್ ಕಟೀಲ್‌ಗೆ ಏನೆಲ್ಲ ಹೇಳಿಲ್ಲ ನೀವು , ಈಗ ಥ್ಯಾಂಕ್ಸ್ ಹೇಳಿ ಎಂದ ಪ್ರತಾಪ್ ಸಿಂಹ
ಕಳೆದ ಎಂಟು ವರ್ಷಗಳ ಕಾಮಗಾರಿಯ ಬಳಿಕ ರಾಷ್ಟ್ರೀಯ ಹೆದ್ದಾರಿ 75 ರ ಬಂಟ್ವಾಳದ ಕಲ್ಲಡ್ಕ ಫ್ರೈ ಓವರ್ ಪೂರ್ಣಗೊಂಡಿದೆ.ಇದೀಗ ಚಂದದ ಫ್ರೈ ಓವರ್ ನಿರ್ಮಾಣವಾಗಿ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಿದೆ.ಅಂದು ನಳಿನ್ ಕುಮಾರ್ ಕಟೀಲ್‌ಗೆ ಏನೆಲ್ಲ ಹೇಳಿಲ್ಲ ನೀವು, ಆದರೆ ಇಂದು ನಳಿನ್ ಕುಮಾರ್ ಕಟೀಲ್ ಅವರಿಗೆ ಥ್ಯಾಂಕ್ಸ್ ಹೇಳೋಣವೇ ಎನ್ನುವ ಮಾಜಿ ಸಂಸದ ಪ್ರತಾಪ್ ಸಿಂಹರವರ ಪೋಸ್ಟ್‌ವೊಂದು ಎಲ್ಲರ ಗಮನ ಸೆಳೆಯುತ್ತಿದೆ.ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಖಾರವಾಗಿಯೇ ಕಾಮೆಂಟ್ ಮಾಡಿದ್ದಾರೆ.

ಮಂಗಳೂರಿನ ಪಂಪ್‌ವೆಲ್ ಫ್ಲೈ ಓವರ್ (pumpwell flyover of manglore) ಕಾಮಗಾರಿ ವಿಳಂಬವಾಗುತ್ತಿದ್ದಂತೆ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಟ್ರೋಲಿಗರ ಬಾಯಿಗೆ ಆಹಾರವಾಗಿದ್ದೇ ಹೆಚ್ಚು. ಅಷ್ಟೇ ಅಲ್ಲದೇ, ಪಂಪ್‌ವೆಲ್ ಫ್ಲೈ ಓವರ್ ಉದ್ಘಾಟನೆಯಾದ ಬಳಿಕವೂ ನಳಿನ್ ಕುಮಾರ್ ಕಟೀಲ್ (Nalin Kumar Katil) ಅವರ ಕಾಲೆಳೆಯುವುದನ್ನು ಟ್ರೋಲಿಗರು ನಿಲ್ಲಿಸಿರಲಿಲ್ಲ. ಆದರೆ ಇದೀಗ ಮಾಜಿ ಸಂಸದ ಪ್ರತಾಪ್ ಸಿಂಹರವರು, ಇಂದು ಚಂದದ ಕಲ್ಲಡ್ಕ ಫ್ಲೈ ಓವರ್ ನಿರ್ಮಾಣವಾಯಿತಲ್ಲ. ಈ ನಳಿನ್ ಕುಮಾರ್ ಕಟೀಲ್ ಮಾಡಿದ ಕೆಲಸಕ್ಕೆ ಥ್ಯಾಂಕ್ಸ್ ಹೇಳಿ ಎಂದಿದ್ದಾರೆ. ಹೌದು, ಮಾಜಿ ಸಂಸದ ಪ್ರತಾಪ್ ಸಿಂಹ (former MP Pratap Simha) ರವರ ಈ ಪೋಸ್ಟ್‌ವೊಂದು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ರೀತಿಯ ಕಾಮೆಂಟ್‌ನ್ನು ಮಾಡಿದ್ದಾರೆ.
Pratham simha ಹೆಸರಿನ ಖಾತೆಯಲ್ಲಿ ಕಲ್ಲಡ್ಕ ಫ್ಲೈ ಓವರ್ ಬಗ್ಗೆ ಪೋಸ್ಟ್‌ವೊಂದು ಶೇರ್‌ಮಾಡಿಕೊಳ್ಳಲಾಗಿದ್ದು, ಇದರಲ್ಲಿ ಪಂಪ್‌ವೆಲ್ ಸರ್ಕಲ್‌ನಲ್ಲಿ ನೀರು ತುಂಬಿದಾಗ ನಳಿನ್ ಕುಮಾರ್ ಕಟೀಲರನ್ನು ಹೀಗಳೆದು ಮೀಮ್ ಮಾಡಿದ್ರಿ, ಸತತ ಮಳೆಯಿಂದ ರಸ್ತೆ ಕಾಮಗಾರಿ ವಿಳಂಬವಾದಾಗಲೂ ಕಟೀಲೆ ಕಾರಣವೆಂದು ಟೀಕಿಸಿದಿರಿ, ಕಲ್ಲಡ್ಕದಲ್ಲಿ ಚೆಂದದ ಪ್ರೈಓವರ್ ನಿರ್ಮಾಣವಾಯಿತಲ್ಲ ಈಗೇಕೆ ಕಂಜೂಸಿಗಳಾಗಬೇಕು. ಬೇರೆಯವರು ಟೇಪು ಕಟ್ಟು ಮಾಡಬಹುದು, ಕಾಮಗಾರಿ ತಂದವರು ಕಟೀಲ್ ಅಲ್ಲವೇ. ನಳಿನ್ ಅವರಿಗೊಂದು ಥ್ಯಾಂಕ್ಯೂ ಹೇಳೋಣವೇ… ಎಂದು ಬರೆಯಲಾಗಿದೆ.
ಇದನ್ನೂ ಓದಿ : Video: ಕಾಲೇಜ್ ಬಂಕ್ ಮಾಡಿ ಗಲ್ಲಿಯಲ್ಲಿ ರೊಮ್ಯಾನ್ಸ್ ಮಾಡ್ತಾ ನಿಂತ ಸ್ಟೂಡೆಂಟ್
ವೈರಲ್ ಪೋಸ್ಟ್ ಇಲ್ಲಿದೆ
ಈ ಪೋಸ್ಟ್‌ವೊಂದು ಮೂರುವರೆ ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರೊಬ್ಬರು, ‘ಕಳೆದ 13 ವರುಷಗಳಿಂದ ಕುಂಟುತ್ತಾ ಸಾಗಲು ನಳಿನ್ ಕುಮಾರ್ ಕಟೀಲ್ ಕಾರಣ. ಬ್ರಜೇಶ್ ಚೌಟ ರವರು ಬಂದ ಮೇಲೆ ಕಾಮಗಾರಿಗೆ ವೇಗ ಬಂದದ್ದು. ಸುಮ್ಮನೆ ನಳಿನ್ ಗೆ ಕ್ರೆಡಿಟ್ ಕೊಟ್ಟು ಅವರು ಪುನಃ ಮಂಗಳೂರು ಸಂಸದ ಸ್ಥಾನಕ್ಕೆ ಚುನಾವಣೆಗೆ ಅರ್ಜಿ ಸಲ್ಲಿಸುವ ಹಾಗೆ ಮಾಡಬೇಡಿ’ ಎಂದಿದ್ದಾರೆ. ಇನ್ನೊಬ್ಬರು, ಅಷ್ಟಕ್ಕೂ ಅಲ್ಲೊಂದು ಅಷ್ಟು ಉದ್ದ ಅಗಲದ ಫ್ಲೈಓವರ್ ನ ಆವಶ್ಯಕತೆ ಏನಿತ್ತು? ಇಷ್ಟು ಸಮಯ ಈ ಫ್ಲೈಓವರ್ ದೆಸೆಯಿಂದಾಗಿ ನಾವೆಷ್ಟೊಂದು ಕಷ್ಟ ಪಟ್ಟೆವು! ಇದ್ದ ರಸ್ತೆಯನ್ನು ಸುಸ್ಥಿತಿಯಲ್ಲಿ ಇಟ್ಟಿದ್ದರೆ ಯಾವ ಕಷ್ಟವೂ ಇರುತ್ತಲೇ ಇರಲಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಇನ್ಮುಂದೆ ಬರಲಿರುವ ಟೋಲ್ ಕಲೆಕ್ಷನ್ ಕ್ರೆಡಿಟ್ ಕೂಡ ಅವರಿಗೇ ಕೊಡಿ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ