Video : ಅಪ್ಪನಿಗೆ ನೆರಳಾದ ಮುದ್ದಿನ ಮಗಳು, ಇಲ್ಲಿದೆ ನೋಡಿ ವಿಡಿಯೋ
ಸೋಶಿಯಲ್ ಮೀಡಿಯಾದಲ್ಲಿ ಪ್ರತಿನಿತ್ಯ ನೂರಾರು ವಿಡಿಯೋಗಳು ವೈರಲ್ ಆಗುತ್ತಿರುತ್ತದೆ. ಅದರಲ್ಲಿಯೂ ಕೆಲವು ಹೃದಯಸ್ಪರ್ಶಿ ದೃಶ್ಯಗಳು ಸಹಜವಾಗಿ ಎಲ್ಲರ ಮನಸ್ಸನ್ನು ಗೆಲ್ಲುತ್ತದೆ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಬಿಸಿಲಿನಲ್ಲಿ ಸೈಕಲ್ ಓಡಿಸುತ್ತಿರುವ ಅಪ್ಪನಿಗೆ ಬಿಸಿಲು ತಾಕದಂತೆ ಕೊಡೆ ಹಿಡಿದು ಮಗಳು ನೆರಳಾಗಿದ್ದಾಳೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ನೆಟ್ಟಿಗರು ಈ ಸುಂದರ ಬಾಂಧವ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತಾಯಿಯು ತನ್ನ ಮಗುವನ್ನು ಒಂಬತ್ತು ತಿಂಗಳು ಗರ್ಭದಲ್ಲಿಟ್ಟುಕೊಂಡರೆ, ತಂದೆ (father) ತನ್ನ ಹೆಗಲ ಮೇಲೆ ಕೂರಿಸಿಕೊಂಡು ಪ್ರಪಂಚವನ್ನು ತೋರಿಸುತ್ತಾನೆ. ಇದಕ್ಕೆ ಹೇಳುವುದು ಅಪ್ಪ ಅಂದ್ರೆನೇ ಆಕಾಶ. ಹೆಣ್ಣು ಮಕ್ಕಳಿಗೆ ಅಪ್ಪನೆಂದರೆ ಅದೇನೋ ವಿಶೇಷ ಪ್ರೀತಿ. ತಂದೆಗೂ ತನ್ನ ಮಗಳೆಂದರೆ ಜೀವಕ್ಕಿಂತಲೂ ಹೆಚ್ಚು. ಈ ಅಪ್ಪ ಮಗಳ ಸುಂದರ ಬಾಂಧವ್ಯಕ್ಕೆ ಸಾಕ್ಷಿಯಾಗುವ ಹೃದಯಸ್ಪರ್ಶಿ ವಿಡಿಯೋಗಳು ಸೋಷಿಯಲ್ ಮಿಡಿಯಾ (social media) ದಲ್ಲಿ ಆಗಾಗ್ಗೆ ಹರಿದಾಡುತ್ತಿರುತ್ತವೆ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಪುಟಾಣಿಯೊಂದು ತನ್ನ ಬದುಕಿಗೆ ನೆರಳಾಗಿರುವ ಅಪ್ಪನಿಗೆ ಬಿಸಿಲು ತಾಗದಂತೆ ಛತ್ರಿ ಹಿಡಿದು ಸೈಕಲ್ ಮೇಲೆ ನಿಂತುಕೊಂಡಿದ್ದು, ಈ ದೃಶ್ಯವು ಎಲ್ಲರ ಗಮನ ಸೆಳೆಯುತ್ತಿದೆ.
ವೈರಲ್ ವಿಡಿಯೋದಲ್ಲಿ ಏನಿದೆ?
@jaikYadhav16 ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಅಪ್ಪ ಮಗಳ ಬಾಂಧವ್ಯ ಸಾರುವ ದೃಶ್ಯವನ್ನು ನೋಡಬಹುದು. ಅಪ್ಪನ ಅಂಬಾರಿ ಸೈಕಲ್ ಮೇಲೇರಿ ಕುಳಿತ ಪುಟ್ಟ ಹುಡುಗಿಯೊಬ್ಬಳ ಕೈಯಲ್ಲಿ ಛತ್ರಿಯಿದೆ. ಮತ್ತೊಂದು ಕೈಯಲ್ಲಿ ತನ್ನ ತಂದೆಯನ್ನು ಹಿಡಿದುಕೊಂಡು ನಿಂತಿದ್ದಾಳೆ, ಸೈಕಲ್‌ನಲ್ಲಿ ಹೋಗುವಾಗ ತಂದೆಗೆ ಬಿಸಿಲು ತಾಕಬಾರದು ಎಂದು ಛತ್ರಿಯನ್ನು ಬೀಳದಂತೆ ಹಿಡಿದುಕೊಂಡಿರುವುದನ್ನು ನೀವಿಲ್ಲಿ ನೋಡಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ
बेटियाँ हिस्सा नही माँगती पिता से, बेटियाँ ख़ुद को पिता का हिस्सा मानती हैं❤️❤️
— Jaiky Yadav (@JaikyYadav16) June 2, 2025
ಜೂನ್ 2 ರಂದು ಶೇರ್ ಮಾಡಲಾದ ಈ ವಿಡಿಯೋ ನಾಲ್ಕು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಬಳಕೆದಾರರು ಈ ವಿಡಿಯೋವನ್ನು ಮೆಚ್ಚಿಕೊಳ್ಳುವ ಮೂಲಕ ಕಾಮೆಂಟ್ ಗಳನ್ನು ಮಾಡಿದ್ದು, ಬಳಕೆದಾರರೊಬ್ಬರು ಮಗಳು ಯಾವತ್ತಿದ್ದರೂ ರಾಣಿಯಿದ್ದಂತೆ, ತಂದೆಯ ಜೀವನದಲ್ಲಿ ಸದಾ ಸಂತೋಷವನ್ನು ತುಂಬುತ್ತಾಳೆ ಎಂದಿದ್ದಾರೆ. ಇನ್ನೊಬ್ಬರು, ಈ ವಿಡಿಯೋವನ್ನು ನೋಡಿದ ಮೇಲೆ ನನ್ನ ಕಣ್ಣು ಒದ್ದೆಯಾಯಿತು. ಈ ವಿಡಿಯೋ ನನ್ನ ಆತ್ಮವನ್ನು ತಟ್ಟಿದೆ ಎಂದಿದ್ದಾರೆ. ಮತ್ತೊಬ್ಬ ಬಳಕೆದಾರರು, ಮಗಳ ಕಾಳಜಿಯೇ ಹೀಗೆ, ಯಾವಾಗಲೂ ಹಿತವಾದ ಅನುಭವ ತಂದು ಕೊಡುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ








