Video : ಮಳೆ ಬಂದ್ರೆ ಏನಂತೆ, ಹೊಟ್ಟೆ ಕೇಳುತ್ತಾ : ಒದ್ದೆಯಾಗಿದ್ರೂ ಗಡದ್ದಾಗಿ ಊಟ ಮಾಡಿದ ಪುಣ್ಯಾತ್ಮ
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಕೆಲವು ವಿಡಿಯೋಗಳಲ್ಲಿ ಆಹಾರ ಸವಿಯುವ ರೀತಿ ನೋಡಿದ್ರೆ ನಗಬೇಕೋ ಅಳಬೇಕೋ ಒಂದು ತಿಳಿಯುವುದಿಲ್ಲ. ಕೆಲವರಂತೂ ತಿನ್ನುವುದಕ್ಕೆ ಹುಟ್ಟಿರುವಂತೆ ಮಾಡುತ್ತಾರೆ. ಇದೀಗ ವ್ಯಕ್ತಿಯೊಬ್ಬನು ಮದುವೆ ಮಂಟಪದಲ್ಲಿ ಮಳೆ ಸುರಿದು ತಟ್ಟೆ ತುಂಬಾ ನೀರು ತುಂಬಿದ್ದರೂ, ಊಟ ಮಾಡುವುದನ್ನು ಮಾತ್ರ ನಿಲ್ಲಿಸುತ್ತಿಲ್ಲ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಇವನು ತಿನ್ನುವುದಕ್ಕೆ ಹುಟ್ಟಿರಬೇಕು ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.

ಆಹಾರ ಪ್ರಿಯ (Food lovers) ರಿಗೆ ವಿವಿಧ ರುಚಿ ಖಾದ್ಯಗಳನ್ನು ಸವಿಯುವುದೆಂದರೆ ಇಷ್ಟ. ಹೀಗಾಗಿ ಮದುವೆ ಸೇರಿದಂತೆ ಶುಭ ಸಮಾರಂಭಗಳಿಗೆ ಹೋದಾಗ ಬಾಯಿ ಚಪ್ಪರಿಸಿಕೊಂಡು ಆಹಾರ ಸವಿಯುವುದನ್ನು ನೀವು ನೋಡಿರುತ್ತೀರಿ. ಕೆಲವು ವ್ಯಕ್ತಿಗಳು ಆಹಾರ ಸವಿಯುವುದನ್ನು ನೋಡಿದಾಗ ಇವನೇನು, ಬಕಾಸುರ ವಂಶಸ್ಥನಾ ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತೇವೆ. ಈ ವಿಡಿಯೋವನ್ನು ನೋಡಿದ ಮೇಲೆ ನಿಮಗೂ ಕೂಡ ಹಾಗೆಯೇ ಅನಿಸದೇ ಇರದು. ವೈರಲ್ ವಿಡಿಯೋದಲ್ಲಿ ಮದುವೆ ಮಂಟಪದಲ್ಲಿ ನೀರು ತುಂಬಿಕೊಂಡಿದ್ದು, ಮದುವೆಗೆ ಬಂದವರಿಗೆ ಊಟ ಮಾಡಲು ತೊಂದರೆ ಆಗಿದ್ರೂ, ಈ ವ್ಯಕ್ತಿ ಮಾತ್ರ ಸುರಿಯುತ್ತಿರುವ ಮಳೆಯ ನಡುವೆ ಮದುವೆ ಊಟ ಸವಿದಿದ್ದಾನೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ವೈರಲ್ ವಿಡಿಯೋದಲ್ಲಿ ಏನಿದೆ?
irfanshaikh ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಮದುವೆ ಮಂಟಪದಲ್ಲಿ ನೀರು ತುಂಬಿದೆ. ಟೇಬಲ್ ಸೇರಿದಂತೆ ಊಟದ ತಟ್ಟೆಯ ತುಂಬಾ ನೀರಿದ್ದು, ಆದರೆ ವ್ಯಕ್ತಿಯೊಬ್ಬನು ಇದ್ಯಾವುದರ ಬಗ್ಗೆಯೂ ಚಿಂತಿಸದೇ ಸುರಿಯುತ್ತಿರುವ ಮಳೆಯ ನಡುವೆಯೂ ಊಟ ಮಾಡುತ್ತಿದ್ದಾನೆ. ವ್ಯಕ್ತಿಯ ತಟ್ಟೆಯಲ್ಲಿರುವ ರೊಟ್ಟಿ ಉಬ್ಬಿಕೊಂಡು ಮೃದುವಾಗಿದೆ. ಆದರೆ ಆ ರೊಟ್ಟಿಯನ್ನೇ ಸಾಂಬಾರ್ ನೊಂದಿಗೆ ಅದ್ದಿ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಿರುವುದನ್ನು ಗಮನಿಸಬಹುದು.
ಇದನ್ನೂ ಓದಿ : ವರ್ಷಗಳು ಕಳೆದಿದೆ, ಆದರೆ ಇನ್ನೂ ಹಾಗೆಯೇ ಇದೆ, ನಿಮ್ಮ ಭಾಷೆಯಲ್ಲಿ ಇದನ್ನು ಏನೆಂದು ಕರೆಯುತ್ತಾರೆ?
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಈ ವಿಡಿಯೋವನ್ನು 8 ಮಿಲಿಯನ್‌ಗೂ ಅಧಿಕ ಜನರು ವೀಕ್ಷಿಸಿದ್ದು, ಅನೇಕ ಜನರು ಈ ವಿಡಿಯೋವನ್ನು ಮೆಚ್ಚಿಕೊಂಡಿದ್ದಾರೆ. ಬಳಕೆದಾರರು, ಸುರಿಯುತ್ತಿರುವ ಮಳೆಯಲ್ಲೇ ಊಟ ಸವಿಯಬೇಕೆನ್ನುವುದು ಪ್ರತಿಯೊಬ್ಬ ಹುಡುಗನ ಕನಸಾಗಿರುತ್ತದೆ ಎಂದಿದ್ದಾರೆ. ಮತ್ತೊಬ್ಬರು, ಈ ವ್ಯಕ್ತಿಯನ್ನು ನೋಡುವಾಗ ಅಯ್ಯೋ ಎನಿಸುತ್ತದೆ, ಎಷ್ಟು ದಿನವಾಯ್ತು ಏನೋ ಊಟ ಮಾಡದೇ ಎಂದು ಕಾಲೆಳೆದಿದ್ದಾರೆ. ಇನ್ನೊಬ್ಬರು, ಇಷ್ಟು ಕಷ್ಟದಲ್ಲಿ ಊಟ ಮಾಡ್ಬೇಕಾ, ದೇವ್ರೇ ಎಂತೆಂತಹ ಜನರು ಇರ್ತಾರೊ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








