ಮುಖದ ತುಂಬಾ ಬ್ಯಾಂಡೇಜ್, ಪ್ಲಾಸ್ಟರ್, ಸ್ನೇಹಿತನ ಮದ್ವೆ ನೋಡಲು ಬಂದ ಜೀವದ ಗೆಳೆಯ
ಸ್ನೇಹ ಎನ್ನುವುದೇ ಹಾಗೆ, ಈ ಎರಡಕ್ಷರವನ್ನು ವಿವರಿಸಲು ಅಸಾಧ್ಯ. ಖುಷಿ ಮಾತ್ರವಲ್ಲ ಕಷ್ಟದ ಕಾಲದಲ್ಲಿ ಜೊತೆಗೆ ನಿಲ್ಲುವವರು ಈ ಸ್ನೇಹಿತರು. ಇದಕ್ಕೆ ಸಾಕ್ಷಿಯೆನ್ನುವಂತಹ ಸಾಕಷ್ಟು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುತ್ತದೆ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ತನ್ನ ನೋವನ್ನು ಲೆಕ್ಕಿಸದೇ ಆಸ್ಪತ್ರೆಯಿಂದ ನೇರವಾಗಿ ಸ್ನೇಹಿತನ ಮದುವೆಯಲ್ಲಿ ಭಾಗಿಯಾಗಿ, ಸ್ನೇಹಿತನಿಗೆ ಶುಭಾಶಯ ಕೋರಿದ್ದಾನೆ. ಈ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ಬಳಕೆದಾರರು ಈ ಪರಿಶುದ್ಧ ಸ್ನೇಹವನ್ನು ಮೆಚ್ಚಿಕೊಂಡಿದ್ದಾರೆ.

ಸ್ನೇಹ (friendship) ಎಂಬುದು ಬೆಲೆ ಕಟ್ಟಲಾಗದ ಸಂಪತ್ತು. ಸ್ನೇಹ ನಮ್ಮ ಬಲ ಕೂಡ ಹೌದು. ಎಷ್ಟೋ ಸಲ ಕಷ್ಟ ಕಾಲದಲ್ಲಿ ಜೊತೆಗೆ ನಿಲ್ಲೋರು ಈ ಸ್ನೇಹಿತರು. ಸ್ನೇಹಕ್ಕಿಂತ ಮಿಗಿಲಾದುದು ಯಾವುದು ಇಲ್ಲ. ಕೆಲವರಿಗೆ ಸಂಬಂಧಿಕರಿಗಿಂತ ಸ್ನೇಹಿತರೇ ಎಲ್ಲಾ ಆಗಿರುತ್ತಾರೆ. ಇದಕ್ಕೆ ಉದಾಹರಣೆಯಂತಿದೆ ಈ ವಿಡಿಯೋ. ಮುಖಕ್ಕೆ ಬ್ಯಾಂಡೇಜ್ ಸುತ್ತಿದ್ದು, ನಡೆಯಲು ಕಷ್ಟವಾಗುತ್ತಿದ್ದರೂ ಸ್ನೇಹಿತನೊಬ್ಬನು ತನ್ನ ಜೀವದ ಗೆಳೆಯನ ಮದುವೆಯಲ್ಲಿ ತಪ್ಪದೇ ಹಾಜಾರಾಗಿದ್ದು, ತನ್ನ ಸ್ನೇಹ ಎಂತಹದ್ದು ಎಂದು ಸಾಭೀತು ಪಡಿಸಿದ್ದಾನೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
sschouhan53 ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಸ್ನೇಹಿತನ ಮದುವೆಯಲ್ಲಿ ಮಸ್ತಿ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ವಿಡಿಯೋದಲ್ಲಿ ಗಾಯಗೊಂಡ ವ್ಯಕ್ತಿಯನ್ನು ಸ್ನೇಹಿತರು ಮದುವೆ ಮಂಟಪದತ್ತ ಕರೆದುಕೊಂಡು ಬರುತ್ತಿದೆ. ಸ್ನೇಹಿತನ ಮದುವೆಯಲ್ಲಿ ಭಾಗಿಯಾಗಲು ಆಸ್ಪತ್ರೆಯಿಂದ ನೇರವಾಗಿ ಮದುವೆ ಮಂಟಪಕ್ಕೆ ಬಂದಂತೆ ತೋರುತ್ತಿದೆ. ಈ ವ್ಯಕ್ತಿಯ ಮುಖ ಹಾಗೂ ತಲೆಗೆ ಕಾಲಿಗೆ ಬ್ಯಾಂಡೇಜ್ ಸುತ್ತಿದ್ದು, ಕೈಗೆ ಪ್ಲಾಸ್ಟರ್ ಹಾಕಿದ್ದಾನೆ. ಕೈಯಲ್ಲಿ ಮೂತ್ರದ ಚೀಲವನ್ನು ಹಿಡಿದು ಕೊಂಡಿದ್ದಾನೆ. ನಾಲ್ಕೈದು ಜನರು ಮೆಲ್ಲನೆ ಆತನನ್ನು ವೇದಿಕೆಯತ್ತ ಕರೆದುಕೊಂಡು ಬಂದಿದ್ದು, ಇದನ್ನು ನೋಡಿದ ಮದುಮಗ ಒಂದು ಕ್ಷಣ ಶಾಕ್ ಆಗಿದ್ದಾನೆ. ಅಷ್ಟೇ ಅಲ್ಲದೇ ಏನಾಯ್ತು ಎಂದು ಕೇಳಿದ್ದು, ವಧು ಕೂಡ ಪತಿಯ ಸ್ನೇಹಿತನನ್ನೇ ನೋಡುತ್ತಾ ನಿಂತಿದ್ದಾಳೆ. ಗಾಯಗೊಂಡ ವ್ಯಕ್ತಿಯ ಮುಖದಲ್ಲಿ ನಗು ಹಾಗೆಯೇ ಇರುವುದನ್ನು ಕಾಣಬಹುದು.
ಇದನ್ನೂ ಓದಿ : ಕೂಲರ್‌ಗಾಗಿ ವಧು ವರನ ಕಡೆಯವರ ನಡುವೆ ಕಿರಿಕ್, ರಣರಂಗವಾಯ್ತು ಕಲ್ಯಾಣ ಮಂಟಪ
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಈ ವಿಡಿಯೋವೊಂದು ಹದಿನಾಲ್ಕು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರೊಬ್ಬರು, ತಮಾಷೆಗಾಗಿ ಈ ರೀತಿ ಮಾಡಿರಬೇಕು, ಆ ವ್ಯಕ್ತಿಯ ಹಾಗೂ ಆತನನ್ನು ವೇದಿಕೆಯತ್ತ ಕರೆದುಕೊಂಡು ಬರುತ್ತಿರುವವರ ಮುಖದಲ್ಲಿ ಯಾವುದೇ ಬೇಸರವಿಲ್ಲ, ಎಲ್ಲರೂ ಕೂಡ ನಗುತ್ತಿದ್ದಾರೆ ಎಂದಿದ್ದಾರೆ. ಮತ್ತೊಬ್ಬರು, ಈ ರೀತಿ ಸ್ನೇಹಿತರು ಸಿಕ್ಕರೆ ಇದಕ್ಕಿಂತ ಮತ್ತೇನು ಬೇಕು, ಇವನೇ ನೋಡಿ ನಿಜವಾದ ಸ್ನೇಹಿತ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಸ್ನೇಹಿತನ ಮದುವೆಯಲ್ಲಿ ಈ ರೀತಿ ಪ್ರಾಂಕ್ ಮಾಡೋದಾ ಎಂದು ಕಾಮೆಂಟ್ ಮಾಡಿದ್ದಾರೆ. ಕೆಲವರು ಈ ವಿಡಿಯೋಗೆ ನಗುವ ಇಮೋಜಿ ಕಳುಹಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








