AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿಜಿಟಲ್ ಪಾವತಿಗೆ ಮೊಬೈಲ್ ಬೇಕಿಲ್ಲ, ಕೈಯ ಉಗುರಿನಿಂದ ಪಾವತಿ ಸಾಧ್ಯ

ನಾವಿಂದು ಡಿಜಿಟಲ್ ಯುಗದಲ್ಲಿದ್ದೇವೆ. ಹೀಗಾಗಿ ಹಣಕಾಸಿನ ವ್ಯವಹಾರದಿಂದ ಹಿಡಿದು ಪ್ರತಿಯೊಂದು ಕೆಲಸ ಕಾರ್ಯಗಳು ಡಿಜಿಟಲ್ ಮಯವಾಗಿದೆ. ಈಗ ಎಲ್ಲಿ ನೋಡಿದರಲ್ಲಿಯೂ ಯುಪಿಐ ವಹಿವಾಟುನದ್ದೇ ಕಾರುಬಾರು. ಆದರೆ ಇನ್ನು ಮುಂದೆ ನೀವು ಕೈಯಲ್ಲಿನ ಉಗುರುನಿಂದ ಹಣ ಪಾವತಿಸಬಹುದು. ಇದಕ್ಕೆ ಸಂಬಂಧಿಸಿದ ಪೋಸ್ಟ್‌ವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಈ ಹೊಸ ತಂತ್ರಜ್ಞಾನ ನೋಡಿ ಶಾಕ್ ಆಗಿದ್ದಾರೆ.

ಡಿಜಿಟಲ್ ಪಾವತಿಗೆ ಮೊಬೈಲ್ ಬೇಕಿಲ್ಲ, ಕೈಯ ಉಗುರಿನಿಂದ ಪಾವತಿ ಸಾಧ್ಯ
ವೈರಲ್ ಪೋಸ್ಟ್‌Image Credit source: Twitter
ಸಾಯಿನಂದಾ
|

Updated on:Jun 01, 2025 | 4:02 PM

Share

ಇಂದಿನ ಆಧುನಿಕ ಯುಗದಲ್ಲಿ ಯಾವುದು ಸಾಧ್ಯವಿಲ್ಲ ಹೇಳಿ. ನಾವಿಂದು ಡಿಜಿಟಲ್ ವ್ಯವಸ್ಥೆ (digital system) ಗೆ ಸಂಪೂರ್ಣವಾಗಿ ಒಗ್ಗಿಕೊಂಡು ಬಿಟ್ಟಿದ್ದೇವೆ. ಹೀಗಾಗಿ ದಿನನಿತ್ಯದ ಹೆಚ್ಚಿನ ವ್ಯಾಪಾರ ವಹಿವಾಟುಗಳು ನಗದು ರಹಿತವಾಗಿದೆ. ಅದಲ್ಲದೇ, ಸಣ್ಣ ಪುಟ್ಟ ಅಂಗಡಿಯಿಂದ ಹಿಡಿದು ಮಾಲ್‌ಗಳವರೆಗೂ ಎಲ್ಲಾ ವ್ಯಾಪಾರ ವಹಿವಾಟುಗಳು ನಡೆಯುವುದೇ ಈ ಡಿಜಿಟಲ್ ವ್ಯವಸ್ಥೆಯಿಂದಲೇ. ನೀವೇನಾದ್ರೂ ಡಿಜಿಟಲ್ ಆಗಿ ಹಣಪಾವತಿಸಬೇಕಾದರೆ ನಿಮ್ಮ ಕೈಯಲ್ಲಿ ಸ್ಮಾರ್ಟ್ ಫೋನ್ (smart phone) ಇರಲೇಬೇಕು. ಆದರೆ ಇದೀಗ ಇನ್ನು ಒಂದು ಹೆಜ್ಜೆ ಮುಂದೆ ಹೋಗಿದ್ದು, ನಿಮ್ಮ ಕೈಬೆರಳಿನಿಂದಲೂ ಹಣ ಪಾವತಿಸಲು ಸಾಧ್ಯವಾಗಿದೆ. ಇದೀಗ ವೈರಲ್ ಆಗಿರುವ ಪೋಸ್ಟ್ ನಲ್ಲಿ ಮಹಿಳೆಯೊಬ್ಬಳ ಕೈ ಬೆರಳಿಗೆ ಚಿಪ್ ಜೋಡಿಸಲಾಗಿದ್ದು, ಅದರ ಮೂಲಕ ಹಣ ಪಾವತಿಸಲಾಗಿದೆ.

@beConjuror ಹೆಸರಿನ ಖಾತೆಯಲ್ಲಿ ಈ ಪೋಸ್ಟ್ ವೊಂದನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ಪೋಸ್ಟ್ ನಲ್ಲಿ ಮಹಿಳೆಯ ಕೈ ಬೆರಳಿಗೆ ಚಿಪ್ ಜೋಡಿಸಲಾಗಿರುವುದನ್ನು ನೋಡಬಹುದು. ಇದೊಂದು ಸಣ್ಣದಾದ ಎಲೆಕ್ಟ್ರಾನಿಕ್ ಸಾಧನವಾಗಿದ್ದು, ಯಂತ್ರ ಅಥವಾ ಸಾಧನಗಳು ಸಂಪರ್ಕಕ್ಕೆ ಬಂದಾಗ ಸ್ಕ್ಯಾನ್ ಮಾಡಿ ಹಣ ಪಾವತಿಸಬಹುದು ಎನ್ನಲಾಗಿದೆ.

ಇದನ್ನೂ ಓದಿ
Image
ವೇದಿಕೆ ಮೇಲೆ ಹಾಡು ಹಾಡುತ್ತಲೇ ಕುಸಿದು ಬಿದ್ದು ಪ್ರಾಣ ಬಿಟ್ಟ ಮಾಜಿ ಶಿಕ್ಷಕ
Image
ಬಸ್ಸಿನ ಹಿಂಬದಿ ಸೀಟಿನಲ್ಲಿ ಕುಳಿತು ಪ್ರೇಮಿಗಳಿಬ್ಬರ ರೊಮ್ಯಾನ್ಸ್‌
Image
ಥೈಲ್ಯಾಂಡ್‌ನಲ್ಲಿ ಭಾರತೀಯ ಪ್ರವಾಸಿಗನ ಮೇಲೆ ಹುಲಿ ದಾಳಿ
Image
ಕೋಪದ ಭರದಲ್ಲಿ ಗಂಡನ ಮೇಲೆ ಕೊತ ಕೊತ ಕುದಿಯುತ್ತಿದ್ದ ಎಣ್ಣೆ ಸುರಿದ ಪತ್ನಿ

ಇದನ್ನೂ ಓದಿ : ನಾನಾ ನೀನಾ ನೋಡೇ ಬಿಡೋಣ : ಪುಟ್ಟ ಹುಡುಗನೊಂದಿಗೆ ಫುಟ್ಬಾಲ್ ಆಡುತ್ತಿರುವ ಕಾಗಕ್ಕ

ವೈರಲ್ ಪೋಸ್ಟ್ ಇಲ್ಲಿದೆ

ಈ ಪೋಸ್ಟ್‌ವೊಂದು ಮೂರು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರು ಕಾಮೆಂಟ್ ಗಳನ್ನು ಮಾಡಿದ್ದು, ಒಬ್ಬ ಬಳಕೆದಾರರು, ಈ ತಂತ್ರಜ್ಞಾನ ಭಾರತದಲ್ಲಿ ಇನ್ನು ಬಂದಿಲ್ಲ ಎಂದಿದ್ದಾರೆ. ಇನ್ನೊಬ್ಬರು, ನಾವೆಷ್ಟು ಅಭಿವೃದ್ಧಿ ಹೊಂಡುತ್ತಿದ್ದೇವೆ ಎನ್ನುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೊಬ್ಬರು, ಇಂದಿನ ತಂತ್ರಜ್ಞಾನ ಯುಗದಲ್ಲಿ ಮನುಷ್ಯನ ಬದುಕಿನಲ್ಲಿ ಭಾವನೆಗಳಿಗೆ ಯಾವುದೇ ಬೆಲೆ ಇಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:59 pm, Sun, 1 June 25

ಮೊದಲ ಹೆಂಡತಿ ನನ್ನ ವಿರುದ್ಧ ಕೌಟುಂಬಿಕ ಹಿಂಸೆ ಕೇಸ್ ಹಾಕಿದ್ದಳು: ಬಾಬು
ಮೊದಲ ಹೆಂಡತಿ ನನ್ನ ವಿರುದ್ಧ ಕೌಟುಂಬಿಕ ಹಿಂಸೆ ಕೇಸ್ ಹಾಕಿದ್ದಳು: ಬಾಬು
ಮಾಧ್ಯಮಗಳ ಪ್ರಶ್ನೆಗೆ ಕಾಲವೇ ಉತ್ತರ ನೀಡಲಿದೆ: ವಿ ಸೋಮಣ್ಣ
ಮಾಧ್ಯಮಗಳ ಪ್ರಶ್ನೆಗೆ ಕಾಲವೇ ಉತ್ತರ ನೀಡಲಿದೆ: ವಿ ಸೋಮಣ್ಣ
‘ಎಕ್ಕ’ ಚಿತ್ರ ನೋಡಿದ ವಿನಯ್ ರಾಜ್​ಕುಮಾರ್​; ತಮ್ಮನ ಸಿನಿಮಾ ಇಷ್ಟ ಆಯ್ತಾ?
‘ಎಕ್ಕ’ ಚಿತ್ರ ನೋಡಿದ ವಿನಯ್ ರಾಜ್​ಕುಮಾರ್​; ತಮ್ಮನ ಸಿನಿಮಾ ಇಷ್ಟ ಆಯ್ತಾ?
‘ಜೂನಿಯರ್’ ಸಿನಿಮಾ ನೋಡಿದ ಪ್ರೇಕ್ಷಕರು ಹೇಳಿದ್ದೇನು?
‘ಜೂನಿಯರ್’ ಸಿನಿಮಾ ನೋಡಿದ ಪ್ರೇಕ್ಷಕರು ಹೇಳಿದ್ದೇನು?
ಬದುಕು ಇಲ್ಲವಾಗಿಸಿಕೊಳ್ಳುವುದನ್ನು ಬಿಟ್ಟರೆ ದಾರಿಯಿಲ್ಲ: ಹೂವಿನ ವ್ಯಾಪಾರಿ
ಬದುಕು ಇಲ್ಲವಾಗಿಸಿಕೊಳ್ಳುವುದನ್ನು ಬಿಟ್ಟರೆ ದಾರಿಯಿಲ್ಲ: ಹೂವಿನ ವ್ಯಾಪಾರಿ
ಭಾರೀ ಮಳೆಯಲ್ಲೂ ಪ್ರಧಾನಿ ಮೋದಿಗೆ ಬಂಗಾಳದ ದುರ್ಗಾಪುರದಲ್ಲಿ ಭರ್ಜರಿ ಸ್ವಾಗತ
ಭಾರೀ ಮಳೆಯಲ್ಲೂ ಪ್ರಧಾನಿ ಮೋದಿಗೆ ಬಂಗಾಳದ ದುರ್ಗಾಪುರದಲ್ಲಿ ಭರ್ಜರಿ ಸ್ವಾಗತ
ಕಾವಿ-ಖಾದಿ ನಡುವಿನ ಸೂಕ್ಷ್ಮತೆ ಸೂಚ್ಯವಾಗಿ ತೋರಿಸಿದ ಸುತ್ತೂರು ಶ್ರೀಗಳು
ಕಾವಿ-ಖಾದಿ ನಡುವಿನ ಸೂಕ್ಷ್ಮತೆ ಸೂಚ್ಯವಾಗಿ ತೋರಿಸಿದ ಸುತ್ತೂರು ಶ್ರೀಗಳು
ಕನ್ನಡ ಸ್ಟಾರ್ ನಟರ ಮೇಲೆ ಉರಿದು ಬಿದ್ದ ನಿರ್ಮಾಪಕ ಕನಕಪುರ ಶ್ರೀನಿವಾಸ್
ಕನ್ನಡ ಸ್ಟಾರ್ ನಟರ ಮೇಲೆ ಉರಿದು ಬಿದ್ದ ನಿರ್ಮಾಪಕ ಕನಕಪುರ ಶ್ರೀನಿವಾಸ್
ಸರ್ಕಾರ ನೀಡುತ್ತಿರುವ ಸೌಲಭ್ಯವನ್ನು ಜನ ಸದುಪಯೋಗ ಮಾಡಿಕೊಳ್ಳಬೇಕು: ಸಚಿವ
ಸರ್ಕಾರ ನೀಡುತ್ತಿರುವ ಸೌಲಭ್ಯವನ್ನು ಜನ ಸದುಪಯೋಗ ಮಾಡಿಕೊಳ್ಳಬೇಕು: ಸಚಿವ
ಸಿಎಂ ಸಿದ್ದರಾಮಯ್ಯ ಪ್ರತಾಪ್​ನಂತೆ ಕೆಲಸವಿಲ್ಲದವರಲ್ಲ: ಪ್ರದೀಪ್ ಈಶ್ವರ್
ಸಿಎಂ ಸಿದ್ದರಾಮಯ್ಯ ಪ್ರತಾಪ್​ನಂತೆ ಕೆಲಸವಿಲ್ಲದವರಲ್ಲ: ಪ್ರದೀಪ್ ಈಶ್ವರ್