ನಾನಾ ನೀನಾ ನೋಡೇ ಬಿಡೋಣ : ಪುಟ್ಟ ಹುಡುಗನೊಂದಿಗೆ ಫುಟ್ಬಾಲ್ ಆಡುತ್ತಿರುವ ಕಾಗಕ್ಕ
ದಿನಬೆಳಗಾಗದರೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವಿಡಿಯೋಗಳು ವೈರಲ್ ಆಗುತ್ತದೆ. ಕೆಲ ವಿಡಿಯೋಗಳು ನೋಡುಗರನ್ನು ನಗೆಗಡಲಿನಲ್ಲಿ ತೇಲಿಸಿದರೆ, ಇನ್ನು ಕೆಲ ವಿಡಿಯೋಗಳು ಭಾವುಕರನ್ನಾಗಿಸಿ ಬಿಡುತ್ತದೆ. ಆದರೆ ಇದೀಗ ಹೃದಯಸ್ಪರ್ಶಿ ವಿಡಿಯೋವೊಂದು ವೈರಲ್ ಆಗಿದ್ದು, ಕಾಗೆಯೊಂದು ಹುಡುಗನೊಂದಿಗೆ ಫುಟ್ಬಾಲ್ ಆಟ ಆಡಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೋಡುಗರು ಈ ಪುಟ್ಟ ಹುಡುಗ ಹಾಗೂ ಕಾಗೆಯ ಫುಟ್ಬಾಲ್ ಆಟ ನೋಡಿ ಶಾಕ್ ಆಗಿದ್ದಾರೆ.

ಗೋವಾ, ಜೂನ್ 1 : ಬೆಳ್ಳಂಬೆಳಗ್ಗೆ ಕಾವ್ ಕಾವ್ ಎಂದು ಮನೆಯ ಮುಂದೆ ಕೂಗುತ್ತಾ ಕುಳಿತಿರುವ ಕಾಗೆ (crow) ಯನ್ನು ಎಲ್ಲರೂ ನೋಡಿರುತ್ತೀರಿ. ತನಗೆ ಏನಾದರೂ ಸಿಕ್ಕರೆ ಸಾಕು, ತನ್ನ ಬಳಗವನ್ನು ಕರೆದು ಹಂಚಿ ತಿನ್ನುವ ಗುಣ ಈ ಕಾಗೆಯದ್ದು. ಇನ್ನು ನೀವೇನಾದ್ರೂ ಈ ಕಾಗೆಗಳ ಹತ್ತಿರ ಹೋದರೆ ಅವುಗಳು ಹೆದರಿಕೊಂಡು ಹಾರಿ ಹೋಗುವುದಿದೆ. ಆದರೆ ಇದೀಗ ಕಾಗೆಯೊಂದು ಬಾಲಕನೊಂದಿಗೆ ಫುಟ್ಬಾಲ್ (football) ಆಡಿದೆ. ಈ ಘಟನೆಯೂ ನಡೆದಿರುವುದು ಗೋವಾ (South Goa) ದಲ್ಲಿ ಎನ್ನಲಾಗಿದ್ದು, ಈ ಅಪರೂಪದ ವಿಡಿಯೋ ನೆಟ್ಟಿಗರ ಹೃದಯವನ್ನು ಗೆದ್ದುಕೊಂಡಿದೆ.
Chadefootball ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಅಪರೂಪದ ವಿಡಿಯೋದಲ್ಲಿ ದಕ್ಷಿಣ ಗೋವಾದಲ್ಲಿ ಕಾಗೆಯೊಂದು ಪುಟ್ಟ ಬಾಲಕನೊಂದಿಗೆ ಫುಟ್ಬಾಲ್ ಆಡುತ್ತಿರುವುದನ್ನು ಕಾಣಬಹುದು. ಇದು ಎಷ್ಟು ಸುಂದರವಾಗಿದೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ವಿಡಿಯೋದಲ್ಲಿ ಹುಡುಗನೊಬ್ಬನು ಕಾಗೆಯೊಂದಿಗೆ ಫುಟ್ಬಾಲ್ ಆಡುತ್ತಿದ್ದಾನೆ. ಹೌದು ಹುಡುಗನು ತನ್ನ ಕಾಲಿನಿಂದ ಚೆಂಡನ್ನು ಮೆಲ್ಲನೆ ಒದೆಯುತ್ತಾನೆ. ಆ ಚೆಂಡು ತನ್ನ ಹತ್ತಿರ ಬರುತ್ತಿದ್ದಂತೆ ಕಾಗೆಯೂ ಕೊಕ್ಕಿನಿಂದ ಚೆಂಡನ್ನು ಮುಂದಕ್ಕೆ ದೂಡುತ್ತಿರುವುದನ್ನು ನೋಡಬಹುದು.
ಇದನ್ನೂ ಓದಿ : ಈ ಕಣ್ಣಲ್ಲಿ ಇನ್ನು ಏನೇನ್ ನೋಡ್ಬೇಕೋ; ಕ್ಯಾಪ್ಸಿಕಂ ಬಳಸಿ ಕಪ್ ಕೇಕ್ ತಯಾರಿಸಿದ ಯುವತಿ
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಈ ವಿಡಿಯೋವೊಂದು ಐದು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರು ಈ ವಿಡಿಯೋಗೆ ತರಹೇವಾರಿ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಬಳಕೆದಾರರು, ಈ ಕಾಗೆ ಹಿಂದಿನ ಜನ್ಮದಲ್ಲಿ ಫುಟ್ಬಾಲ್ ಪ್ಲೇಯರ್ ಆಗಿರಬೇಕು ಎಂದಿದ್ದಾರೆ. ಇನ್ನೊಬ್ಬರು, ಇದು ನಿಜಕ್ಕೂ ಅದ್ಭುತವಾಗಿದೆ, ಈ ದೃಶ್ಯ ಬೇರೆಲ್ಲೂ ನೋಡಲು ಸಾಧ್ಯವಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ನನ್ನ ಕಣ್ಣಿಂದನೇ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








