AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಏನ್‌ ಅವಸ್ಥೆ ನೋಡಿ… ಬಸ್ಸಿನಲ್ಲಿ ಕಿಸ್ಸಿಂಗ್ ರೊಮ್ಯಾನ್ಸ್‌ ಮಾಡೋದ್ರಲ್ಲಿ ಬ್ಯೂಸಿಯಾದ ಹುಡುಗ-ಹುಡುಗಿ

ಕೆಲ ಪ್ರೇಮಿಗಳು ಸಾರ್ವಜನಿಕ ಸ್ಥಳಗಳಲ್ಲಿ ಮಾಡಿಕೊಳ್ಳುವ ಅವಾಂತರಗಳು ಜನರ ಕೆಂಗಣ್ಣಿಗೆ ಗುರಿಯಾಗುತ್ತಿರುತ್ತವೆ. ಇಂತಹ ಸಾಕಷ್ಟು ದೃಶ್ಯಗಳು ಈ ಹಿಂದೆಯೂ ವೈರಲ್‌ ಆಗಿದ್ದುಂಟು. ಇದೀಗ ಅಂತಹದ್ದೇ ದೃಶ್ಯವೊಂದು ವೈರಲ್‌ ಆಗಿದ್ದು, ಪ್ರೇಮಿಗಳಿಬ್ಬರು ಯಾರ ಭಯವೂ ಇಲ್ಲದೆ ಬಸ್ಸಿನ ಲಾಸ್ಟ್‌ ಸೀಟಿನಲ್ಲಿ ಕುಳಿತು ತಬ್ಬಿಕೊಳ್ಳುತ್ತಾ, ಕಿಸ್‌ ಮಾಡುತ್ತಾ ರೊಮ್ಯಾನ್ಸ್‌ ಮಾಡಿದ್ದಾರೆ. ಹುಡುಗ-ಹುಡುಗಿಯ ಈ ಅತಿರೇಕದ ವರ್ತನೆಯನ್ನು ಕಂಡು ನೆಟ್ಟಿಗರು ಫುಲ್‌ ಗರಂ ಆಗಿದ್ದಾರೆ.

Viral: ಏನ್‌ ಅವಸ್ಥೆ ನೋಡಿ… ಬಸ್ಸಿನಲ್ಲಿ ಕಿಸ್ಸಿಂಗ್ ರೊಮ್ಯಾನ್ಸ್‌ ಮಾಡೋದ್ರಲ್ಲಿ ಬ್ಯೂಸಿಯಾದ ಹುಡುಗ-ಹುಡುಗಿ
ವೈರಲ್‌ ವಿಡಿಯೋImage Credit source: Instagram
ಮಾಲಾಶ್ರೀ ಅಂಚನ್​
|

Updated on:May 31, 2025 | 3:43 PM

Share

ಪ್ರೀತಿಯಲ್ಲಿ ಬಿದ್ದವರಿಗೆ ಜಗದ ಅರಿವೇ ಇರೋಲ್ಲ ಎಂಬ ಮಾತಿದೆ. ಈ ಮಾತಿಗೆ ಅನುಗುಣವಾಗಿ ಕೆಲ ಪ್ರೇಮಿಗಳು (Lovers) ಲೋಕದ ಪರಿವೇ ಇಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿಯೇ ಮಿತಿ ಮೀರಿ ವರ್ತಿಸುತ್ತಿರುತ್ತಾರೆ. ಬೈಕ್‌ನಲ್ಲಿ ಕುಳಿತು ಕಿಸ್ಸಿಂಗ್‌ ಮಾಡ್ತಾ, ಮೆಟ್ರೋ, ರೈಲಿನಲ್ಲಿ ಕುಳಿತು ಹಗ್ಗಿಂಗ್‌, ಕಿಸ್ಸಿಂಗ್‌ ಅಂತ ಹುಚ್ಚಾಟ ಆಡುವ ಪ್ರೇಮಿಗಳ ಸಾಕಷ್ಟು ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದುಂಟು. ಇದೀಗ ಅಂತಹದ್ದೇ ದೃಶ್ಯವೊಂದು ಹರಿದಾಡುತ್ತಿದ್ದು, ಜೋಡಿ ಹಕ್ಕಿಯೊಂದು ನಮ್ಮ ಅಕ್ಕಪಕ್ಕದಲ್ಲಿ ಜನರಿದ್ದಾರೆ ಅನ್ನೋ ಪರಿಜ್ಞಾನವೇ ಇಲ್ಲದೆ ಬಸ್ಸಿನಲ್ಲಿಯೇ ಒಬ್ಬರನ್ನೊಬ್ಬರು ತಬ್ಬಿಕೊಂಡು ರೊಮ್ಯಾನ್ಸ್‌ (Lovers romance on the bus) ಮಾಡಿದ್ದಾರೆ. ಈ ದೃಶ್ಯ ವೈರಲ್‌ ಆಗಿದ್ದು, ಪ್ರೇಮಿಗಳ ಈ ಅತಿರೇಕದ ವರ್ತನೆಗೆ ಜನ ಛೀಮಾರಿ ಹಾಕಿದ್ದಾರೆ.

ಬಸ್ಸಿನ ಹಿಂಬದಿ ಸೀಟಿನಲ್ಲಿ ಕುಳಿತು ಪ್ರೇಮಿಗಳಿಬ್ಬರ ರೊಮ್ಯಾನ್ಸ್‌:

ಎಲ್ಲಿ ಹೇಗೆ ವರ್ತಿಸಬೇಕು ಎಂಬ ಕನಿಷ್ಠ ಪರಿಜ್ಞಾನವೂ ಇಲ್ಲದೆ ಪ್ರೇಮಿಗಳಿಬ್ಬರು ಬಸ್ಸಿನ ಹಿಂಬದಿಯಲ್ಲಿ ಕುಳಿತು ಹಗ್ಗಿಂಗ್‌ ಕಿಸ್ಸಿಂಗ್‌ ಅಂತ ರೊಮ್ಯಾನ್ಸ್‌ ಮಾಡಿದ್ದು, ಇವರ ಈ ಹುಚ್ಚಾಟವನ್ನು ಯಾರೋ ಮೊಬೈಲ್‌ನಲ್ಲಿ ಸೆರೆ ಹಿಡಿದು ಸೋಷಿಯಲ್‌ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.

ಇದನ್ನೂ ಓದಿ
Image
ಕೋಪದ ಭರದಲ್ಲಿ ಗಂಡನ ಮೇಲೆ ಕೊತ ಕೊತ ಕುದಿಯುತ್ತಿದ್ದ ಎಣ್ಣೆ ಸುರಿದ ಪತ್ನಿ
Image
ನಡುರಸ್ತೆಯಲ್ಲೇ ಯುವಕನಿಗೆ ಹಿಗ್ಗಾಮುಗ್ಗ ಥಳಿಸಿದ ಯುವತಿಯರು
Image
ರಸ್ತೆಯಲ್ಲಿ ಹೋಗುತ್ತಿದ್ದ ಬುರ್ಖಾದಾರಿ ಮಹಿಳೆಗೆ ಕಿಸ್​​ ಮಾಡಿ ಹೋದ ಯುವಕ
Image
ಚಲಿಸುತ್ತಿದ್ದ ಬೈಕ್ ನಲ್ಲೇ ಜೋಡಿ ಹಕ್ಕಿಗಳ ರೊಮ್ಯಾನ್ಸ್

ವೈರಲ್‌  ವಿಡಿಯೋ ಇಲ್ಲಿದೆ ನೋಡಿ:

View this post on Instagram

A post shared by your jan (@yours.jaans)

ಈ ಕುರಿತ ವಿಡಿಯೋವನ್ನು yours.jaans ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶೇರ್‌ ಮಾಡಲಾಗಿದೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಬಸ್ಸಿನ ಹಿಂಬದಿ ಸೀಟಿನಲ್ಲಿ ಜೋಡಿಹಕ್ಕಿಯೊಂದು ರೊಮ್ಯಾನ್ಸ್‌ ಮಾಡ್ತಾ ಕುಳಿತಿರುವ ದೃಶ್ಯವನ್ನು ಕಾಣಬಹುದು. ಹೌದು ಲೋಕದ ಪರಿಜ್ಞಾನವೇ ಇಲ್ಲದೆ ಈ ಹುಡುಗ ಹುಡುಗಿ ಒಬ್ಬರನ್ನೊಬ್ಬರು ತಬ್ಬಿಕೊಂಡು ಚುಂಬಿಸಿದ್ದು, ಇದನ್ನು ಯಾರೋ ವಿಡಿಯೋ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಹರಿ ಬಿಟ್ಟಿದ್ದಾರೆ.

ಇದನ್ನೂ ಓದಿ: ರಸ್ತೆಯಲ್ಲಿ ಹೋಗುತ್ತಿದ್ದ ಬುರ್ಖಾದಾರಿ ಮಹಿಳೆಗೆ ಕಿಸ್​​ ಮಾಡಿ ಹೋದ ಯುವಕ

ನಾಲ್ಕು ದಿನಗಳ ಹಿಂದೆ ಶೇರ್‌ ಮಾಡಲಾದ ಈ ವಿಡಿಯೋ 18 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಅವರೇನೋ ತಪ್ಪು ಮಾಡಿದ್ದಾರೆ, ಆದರೆ ಅದನ್ನು ರೆಕಾರ್ಡ್‌ ಮಾಡಿ ಏಕೆ ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡ್ಬೇಕಿತ್ತುʼ ಎಂದು ಕೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಹೀಗೆ ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯ ವರ್ತನೆ ತೋರುವವರಿಗೆ ಕಠಿಣ ಶಿಕ್ಷೆ ನೀಡಬೇಕುʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇದು ನಾಚಿಕೆಗೇಡಿನ ಸಂಗತಿʼ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:42 pm, Sat, 31 May 25

‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್