ನಡುರಸ್ತೆಯಲ್ಲೇ ಯುವಕನಿಗೆ ಹಿಗ್ಗಾಮುಗ್ಗ ಥಳಿಸಿದ ಯುವತಿಯರು, ವಿಡಿಯೋ ವೈರಲ್
ಕೆಲವರು ಸಣ್ಣ ಪುಟ್ಟ ವಿಷಯವನ್ನೇ ದೊಡ್ಡದು ಮಾಡಿ ಜಗಳಕ್ಕೆ ಇಳಿಯುತ್ತಾರೆ. ಅದರಲ್ಲಿಯೂ ಈ ಯುವತಿಯರು ಹುಡುಗರು ಯಾರಾದ್ರು ತಮ್ಮ ಜೊತೆಗೆ ಸ್ವಲ್ಪ ಕೆಟ್ಟದಾಗಿ ವರ್ತಿಸಿದರೆ ಸಾಕು, ಒಂದು ಗತಿ ಕಾಣಿಸಿ ಬಿಡುತ್ತಾರೆ. ಆದರೆ ಇದೀಗ ನಡುರಸ್ತೆಯಲ್ಲೇ ಯುವಕನಿಗೆ ಮೂವರು ಯುವತಿಯರು ಸೇರಿ ಥಳಿಸಿರುವ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಈ ದೃಶ್ಯ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ.

ದೆಹಲಿ, ಮೇ 29: ಕೆಲವರಿಗೆ ಕೋಪ (angry) ಬಂದರೆ ತಡೆಯೋಕೆ ಆಗಲ್ಲ. ಕೆಲವರಂತೂ ಸಣ್ಣ ಸಣ್ಣ ವಿಚಾರಗಳಿಗೂ ಕೋಪಗೊಂಡು ಜಗಳವಾಡಿಬಿಡುತ್ತಾರೆ. ಆದರೆ ಎಷ್ಟೋ ಬಾರಿ ನಡುರಸ್ತೆಯೇ ಜಗಳಕ್ಕೆ ವೇದಿಕೆಯಾಗಿ ಬಿಡುತ್ತದೆ. ಅದರಲ್ಲಿ ಈ ಹುಡುಗಿಯರು ಜಗಳ (fights) ಕ್ಕೆ ಇಳಿದರೆ ಕೇಳಬೇಕೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ನಡುರಸ್ತೆಯಲ್ಲೇ ಯುವಕನಿಗೆ ಮೂವರು ಯುವತಿಯರು ಸೇರಿ ಮನಬಂದಂತೆ ಥಳಿಸಿದ್ದಾರೆ. ಈ ಘಟನೆಯೂ ದೆಹಲಿ (Dehli) ಯಲ್ಲಿ ನಡೆದಿದೆ ಎನ್ನಲಾಗಿದೆ. ಆದರೆ ಯುವತಿಯರು ಈ ಯುವಕನಿಗೆ ಯಾಕೆ ಹೊಡೆಯುತ್ತಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಇಲ್ಲ.
@gharkekalesh ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಈ ವಿಡಿಯೋದಲ್ಲಿ ನಡುರಸ್ತೆಯಲ್ಲೇ ಯುವಕನೊಬ್ಬನಿಗೆ ಯುವತಿಯರು ಥಳಿಸಿದ್ದಾರೆ. ಈ ಯುವತಿಯರಿಬ್ಬರೂ ಆತನ ಹೊಟ್ಟೆಗೆ ಒದೆಯುತ್ತಿರುವುದನ್ನು ನೋಡಬಹುದು. ಮತ್ತೊಬ್ಬ ಯುವತಿಯೂ ಮನ ಬಂದಂತೆ ಕೆನ್ನೆಗೆ ಪಟಪಟನೆ ಬಾರಿಸುತ್ತಿರುವುದನ್ನು ಕಾಣಬಹುದು.
ಇದನ್ನೂ ಓದಿ : ಮುದ್ದು ಮೊಮ್ಮಗಳಿಗೆ ತಿಂಡಿ ಖರೀದಿಸಿದ ಅಜ್ಜ ಅಜ್ಜಿ, ಭಾವನಾತ್ಮಕ ವಿಡಿಯೋ ಹಂಚಿಕೊಂಡ ಯುವತಿ
ವೈರಲ್ ವಿಡಿಯೋ ಇಲ್ಲಿದೆ ನೋಡಿ
1 v 3 Kinda Kalesh b/w Ladies and a Guy on Street, Delhi https://t.co/fI0ntbRWpr
— Ghar Ke Kalesh (@gharkekalesh) May 28, 2025
ಮೇ 28 ರಂದು ಶೇರ್ ಮಾಡಲಾದ ಈ ವಿಡಿಯೋ ಈವರೆಗೆ ಒಂದು ಲಕ್ಷ ಇಪ್ಪತ್ತೈದು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರು ಕಾಮೆಂಟ್ ಗಳನ್ನು ಮಾಡಿದ್ದಾರೆ. ಬಳಕೆದಾರರೊಬ್ಬರು, ಆ ವ್ಯಕ್ತಿ ಏನು ಮಾಡಿದ್ದಾನೆ ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೊಬ್ಬರು, ಈ ಯುವಕನು ಯುವತಿಯರಿಗೆ ಏನೋ ಮಾಡಿರಬೇಕು. ಅದಕ್ಕೆ, ಸರಿಯಾಗಿ ಪಾಠ ಕಲಿಸಿದ್ದಾರೆ ಎಂದಿದ್ದಾರೆ. ಇನ್ನೊಬ್ಬರು, ಅವನು ಇನ್ಯಾವತ್ತೂ ಹುಡುಗಿಯರನ್ನು ಮುಖ ಎತ್ತಿ ನೋಡಲ್ಲ ಎಂದು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








