ಟೀ ಎಸ್ಟೇಟ್‌ನಲ್ಲಿ ಮರಿಗಳೊಂದಿಗೆ ಪ್ರತ್ಯಕ್ಷವಾದ ಹುಲಿ, ವಿಡಿಯೋ ವೈರಲ್
ಕಾಡಿನ ವಿನಾಶದಿಂದಾಗಿ, ಅರಣ್ಯದಲ್ಲಿನ ಪ್ರಾಣಿಗಳೆಲ್ಲಾ ಆಹಾರವನ್ನರಸುತ್ತಾ ನಾಡಿನ ಕಡೆಗೆ ಬರುತ್ತಿವೆ. ಸೋಶಿಯಲ್ ಮೀಡಿಯಾದಲ್ಲಿ ಇಂತಹ ಸಾಕಷ್ಟು ವಿಡಿಯೋಗಳು ಆಗಾಗ ಕಾಣಸಿಗುತ್ತವೆ. ಇದೀಗ ಟೀ ಎಸ್ಟೇಟ್‌ನಲ್ಲಿ ತನ್ನ ಮರಿಗಳೊಂದಿಗೆ ಹುಲಿಯೊಂದು ಪ್ರತ್ಯಕ್ಷವಾಗಿದ್ದು ಈ ಭಯಾನಕ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಾಮೆಂಟ್ ಗಳನ್ನು ಮಾಡಿದ್ದಾರೆ.

ಊಟಿ, ಮೇ 29: ಮಾನವನ ಸ್ವಾರ್ಥ ಚಟುವಟಿಕೆಯಿಂದ ಕಾಡು (forest) ಸಂಪೂರ್ಣವಾಗಿ ನಾಶವಾಗುತ್ತಿದೆ. ಹೀಗಾಗಿ ಆಹಾರ ಅರಸುತ್ತ ಕಾಡು ಪ್ರಾಣಿಗಳು ನಾಡಿಗೆ ಲಗ್ಗೆ ಇಡುತ್ತವೆ. ಹೀಗೆ ನಾಡಿಗೆ ಬಂದ ಪ್ರಾಣಿಗಳು ಮನುಷ್ಯರು, ದನಕರುಗಳು ಹಾಗೂ ಶ್ವಾನಗಳ ಮೇಲೆ ದಾಳಿ ಮಾಡುವುದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಆದರೆ ಇದೀಗ ಹುಲಿಯೊಂದು ತನ್ನ ಮರಿಗಳೊಂದಿಗೆ ಊಟಿಯ ಕಟ್ಟಬೆಟ್ಟು (kattabettu Of Ooty) ಸಮೀಪವಿರುವ ಟೀ ಎಸ್ಟೇಟ್ (tea estate) ನಲ್ಲಿ ಕಾಣಿಸಿಕೊಂಡಿದೆ. ಈ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ಈ ದೃಶ್ಯವು ನೋಡುಗರನ್ನು ಬೆಚ್ಚಿಬೀಳಿಸಿದೆ.
@susantananda3 ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಹೆಚ್ಚುತ್ತಿರುವ ಹುಲಿಗಳ ಸಂಖ್ಯೆಯನ್ನು ಉಳಿಸಿಕೊಳ್ಳಲು ನಮ್ಮಲ್ಲಿ ಸಾಕಷ್ಟು ಕಾಡುಗಳಿವೆಯೇ? ಇದು ನಿನ್ನೆ ಊಟಿಯ ಕಟ್ಟಬೆಟ್ಟು ಟೀ ಎಸ್ಟೇಟ್‌ನಲ್ಲಿ ಹುಲಿಯೂ ತನ್ನ ಮರಿಗಳೊಂದಿಗೆ ಸಂಚರಿಸಿದ ದೃಶ್ಯ. ಮಾನವ ಹಾಗೂ ವನ್ಯಜೀವಿ ಸಂಘರ್ಷ ನಿಜಕ್ಕೂ ಭಯಾನಕವಾಗಿದೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.
ಇದನ್ನೂ ಓದಿ : ಕಮಲ್ ಹಾಸನ್ ಹೇಳಿದ್ದು ಸುಳ್ಳು, ಕನ್ನಡವು ಸಂಸ್ಕೃತ ಆಧಾರಿತ : ಡಾ. ಕೆ ಸುಬ್ರಮೋನಿಯ ಅಯ್ಯರ್
ಈ ವಿಡಿಯೋದಲ್ಲಿ ಟೀ ಎಸ್ಟೇಟ್‌ನಲ್ಲಿ ಹುಲಿಯೊಂದು ಪ್ರತ್ಯಕ್ಷವಾಗಿರುವುದನ್ನು ನೋಡಬಹುದು. ಅತ್ತಿತ್ತ ನೋಡುತ್ತಾ ಮೆಲ್ಲನೆ ನಡೆದುಕೊಂಡು ಹೋಗುತ್ತಿದೆ. ಅದಲ್ಲದೇ ವಿಡಿಯೋದ ಕೊನೆಯಲ್ಲಿ ಹುಲಿಯನ್ನು ಹಿಂಬಾಲಿಸಿಕೊಂಡು ಮರಿಗಳು ಹೋಗುತ್ತಿರುವುದನ್ನು ಕಾಣಬಹುದಾಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
Do we have enough forests to sustain the growing tiger population??
This is near Kattabettu, tea estate,Ooty yesterday. Tigress with cubs. Frightening is the human- wildlife conflict that is likely in such landscapes. pic.twitter.com/98qL29re4d
— Susanta Nanda (@susantananda3) May 28, 2025
ಮೇ 28 ರಂದು ಶೇರ್ ಮಾಡಿಕೊಂಡ ಈ ವಿಡಿಯೋವೊಂದು ಎಂಭತ್ತು ಸಾವಿರಕ್ಕೂ ಅಧಿಕ ವೀಕ್ಷಣೆ ಕಂಡುಕೊಂಡಿದ್ದು, ಈ ದೃಶ್ಯವನ್ನು ನೋಡಿ ನೆಟ್ಟಿಗರು ಕಾಮೆಂಟ್ ಗಳನ್ನು ಮಾಡಿದ್ದಾರೆ. ಈ ವಿಡಿಯೋಗೆ ಬಳಕೆದಾರರೊಬ್ಬರು, ಕಾಡು ಪ್ರಾಣಿಗಳು ಅವುಗಳ ವಾಸಸ್ಥಾನವನ್ನು ಮರಳಿ ಕೊಡಿ ಎಂದಿದ್ದಾರೆ. ಇನ್ನೊಬ್ಬರು, ಹುಲಿಗಳ ಸಂಖ್ಯೆ ಹೆಚ್ಚುತ್ತಿರುವುದು ನಿಜಕ್ಕೂ ಸಂತೋಷ ತಂದಿದೆ. ಆದರೆ ಮತ್ತೊಂಡೆದೆ ಮಾನವ ಪ್ರಾಣಿಗಳ ಸಂಘರ್ಷದ ಬಗ್ಗೆ ಕಳವಳವಿದೆ. ಇದಕ್ಕೆ ಪರಿಹಾರವೇನು? ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು, ಈ ಟೀ ಎಸ್ಟೇಟ್‌ಗಳು ಒಂದು ಕಾಲದಲ್ಲಿ ಪ್ರಾಣಿಗಳ ಆವಾಸಸ್ಥಾನಗಳಾಗಿದ್ದವು ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:16 pm, Thu, 29 May 25








