AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಂಡನ ಟಿಫಿನ್ ಬಾಕ್ಸ್​​​​ನ​​​​​​​​​ ಒಳಗಿತ್ತು ಸರ್ಪ್ರೈಸ್, ಮುದ್ದಾಗಿ ಶಾಕ್​​​​ ಆದ ಮಡದಿ

ಪ್ರತಿಯೊಬ್ಬ ಹೆಣ್ಣು ಕೂಡ ತನ್ನ ಗಂಡ ತನಗೆ ಸರ್ಪ್ರೈಸ್ ಉಡುಗೊರೆಯನ್ನು ನೀಡಬೇಕೆಂದು ಬಯಸುವುದು ಸಹಜ. ಅದರಲ್ಲಿ ಸರ್ಪ್ರೈಸ್ ಆಗಿ ಏನಾದರೂ ತಂದು ಕೊಟ್ಟರೆ ಆಕೆಯ ಖುಷಿಗೆ ಪಾರಾವೇ ಇರುವುದಿಲ್ಲ. ಇಲ್ಲೊಬ್ಬ ಪತಿಯೂ ಪತ್ನಿಗೆ ಸರ್ಪ್ರೈಸ್ ಉಡುಗೊರೆಯನ್ನು ನೀಡಿದ್ದಾನೆ. ಹೌದು ಗಂಡನ ಟಿಫಿನ್ ಬಾಕ್ಸ್‌ನಲ್ಲಿದ್ದ ಸರ್ಪ್ರೈಸ್ ಗಿಫ್ಟ್ ನೋಡಿ ಪತ್ನಿಯೂ ಮುದ್ದಾಗಿ ರಿಯಾಕ್ಷನ್ ಕೊಟ್ಟಿದ್ದು ಈ ವಿಡಿಯೋವೊಂದು ನೆಟ್ಟಿಗರ ಹೃದಯ ಗೆದ್ದಿದೆ.

ಗಂಡನ ಟಿಫಿನ್ ಬಾಕ್ಸ್​​​​ನ​​​​​​​​​ ಒಳಗಿತ್ತು ಸರ್ಪ್ರೈಸ್, ಮುದ್ದಾಗಿ ಶಾಕ್​​​​ ಆದ ಮಡದಿ
ವೈರಲ್ ವಿಡಿಯೋImage Credit source: Twitter
ಸಾಯಿನಂದಾ
|

Updated on: May 28, 2025 | 12:18 PM

Share

ಕೆಲವು ಹೆಣ್ಣು ಮಕ್ಕಳು ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಗೃಹಿಣಿ (house wife) ಯಾಗಿ ತನ್ನ ಪತಿಯ ಬೇಕು ಬೇಡಗಳ ಬಗ್ಗೆ ಗಮನ ಹರಿಸುತ್ತಾರೆ. ಹೌದು, ಎಷ್ಟೋ ಹೆಣ್ಣು ಮಕ್ಕಳು ಮದುವೆಯ ಬಳಿಕ ಪತಿ ಹಾಗೂ ತನ್ನ ಕುಟುಂಬಕ್ಕಾಗಿ ಕೆಲವು ಬದಲಾವಣೆಯನ್ನು ಮಾಡಿಕೊಳ್ಳುತ್ತಾರೆ. ಹೀಗೆ ಇರುವ ಹೆಣ್ಣು ತನ್ನ ಗಂಡ ಆಗಾಗ ತನಗೆ ಸರ್ಪ್ರೈಸ್ ಉಡುಗೊರೆ (surprise gift) ಕೊಡುವ ಮೂಲಕ ತನ್ನನ್ನು ಖುಷಿಪಡಿಸಬೇಕು ಎಂದುಕೊಳ್ಳುವುದು ಸಹಜ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಗಂಡನಿಗಾಗಿ ದುಡಿಯುವ ಹಾಗೂ ರುಚಿ ರುಚಿ ಅಡುಗೆ ಮಾಡಿ ಟಿಫಿನ್ ಬಾಕ್ಸ್‌ಗೆ ಹಾಕಿಕೊಡುವ ಪತ್ನಿಗಾಗಿ ತನ್ನ ಟಿಫಿನ್  ಬಾಕ್ಸ್‌ನಲ್ಲಿ ಸರ್ಪ್ರೈಸ್ ಉಡುಗೊರೆ ನೀಡುವ ಮೂಲಕ ಹೆಂಡತಿ ಮೊಗದಲ್ಲಿ ನಗು ಮೂಡಿಸಿದ್ದಾನೆ. ಈ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಈ ರೀತಿ ಸರ್ಪ್ರೈಸ್ ಗಿಫ್ಟ್ ಕೊಟ್ಟಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

@sathyashrii ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಈ ವಿಡಿಯೋಗೆ ಸಣ್ಣ ಸಣ್ಣ ಪ್ರಯತ್ನ ಮುಖ್ಯವಾಗುತ್ತದೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಆಫೀಸು ಮುಗಿಸಿ ಸಂಜೆ ಪತಿಯು ಮನೆಗೆ ಬಂದಿದ್ದಾನೆ. ಆತನ ಟಿಫಿನ್ ಬಾಕ್ಸ್‌ನ್ನು ಪತ್ನಿಯೂ ತೊಳೆಯಲು ಮುಂದಾಗಿದ್ದಾಳೆ. ಈ ವೇಳೆಯಲ್ಲಿ ಟಿಫಿನ್ ಬಾಕ್ಸ್ ಒಳಗೆ ಇದ್ದ ಸರ್ಪ್ರೈಸ್ ಗಿಫ್ಟ್ ನೋಡಿ ಮುದ್ದಾಗಿ ರಿಯಾಕ್ಷನ್ ಕೊಟ್ಟಿದ್ದಾಳೆ. ಪತಿಯೂ ತನ್ನ ಪತ್ನಿಗೆ ಸರ್ಪ್ರೈಸ್ ನೀಡಿ ಖುಷಿ ಪಡಿಸಲು ಈ ಬಾಕ್ಸ್ ಒಳಗೆ ಕಿವಿಯೋಲೆ, ರೋಜ್ ಹಾಗೂ ಚಾಕೋಲೇಟ್ ಇಟ್ಟಿರುವುದನ್ನು ನೋಡಬಹುದು. ಇದನ್ನು ನೋಡಿ ಪತ್ನಿಯೂ ಶಾಕ್ ಆಗಿದ್ದು ಪತಿಯತ್ತ ನೋಡಿ ನಕ್ಕಿದ್ದಾಳೆ.

ಇದನ್ನೂ ಓದಿ
Image
ಮಡದಿಗೆ ನೈಲ್ ಪಾಲಿಶ್ ಹಚ್ಚಿದ ವೃದ್ಧ
Image
ಪತ್ನಿ ಹೆರಿಗೆ ನೋವು ಅನುಭವಿಸುವುದನ್ನು ನೋಡಿ ಬಿಕ್ಕಿ ಬಿಕ್ಕಿ ಅತ್ತ ಪತಿ
Image
ಕರೆಂಟ್ ಬೇಲಿ ದಾಟಲು ಆನೆ ಬಳಸಿದ ಈ ಟ್ರಿಕ್, ನಿಮಗೂ ಉಪಯೋಗಕ್ಕೆ ಬರಬಹುದು
Image
ರಸ್ತೆಯಲ್ಲಿ ಹೋಗುತ್ತಿದ್ದ ಬುರ್ಖಾದಾರಿ ಮಹಿಳೆಗೆ ಕಿಸ್​​ ಮಾಡಿ ಹೋದ ಯುವಕ

ಇದನ್ನೂ ಓದಿ : ಹೆಂಡ್ತಿಗೆ ಹೆರಿಗೆ ನೋವು : ಪತ್ನಿ ನೋವು ಅನುಭವಿಸುವುದನ್ನು ನೋಡಿ ಬಿಕ್ಕಿ ಬಿಕ್ಕಿ ಅತ್ತ ಪತಿ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಈ ವಿಡಿಯೋವೊಂದು ನಾಲ್ಕು ಲಕ್ಷ ಎಂಭತ್ತು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರು ಕಾಮೆಂಟ್ ಗಳನ್ನು ಮಾಡಿದ್ದಾರೆ. ಒಬ್ಬ ಬಳಕೆದಾರರು, ಗಂಡನ ಈ ರೀತಿಯ ಪ್ರೀತಿ ಎಲ್ಲರಿಗೂ ಸಿಗಲಿ ಎಂದಿದ್ದಾರೆ. ಇನ್ನೊಬ್ಬರು, ಈ ಮಹಿಳೆ ವಾರಪೂರ್ತಿ ಈ ಸರ್ಪ್ರೈಸ್ ಉಡುಗೊರೆಯನ್ನೇ ನೆನಪಿಸಿಕೊಂಡು ಖುಷಿ ಪಡುತ್ತಾಳೆ ಎಂದಿದ್ದಾರೆ. ಮತ್ತೊಬ್ಬರು, ಈ ವಿಡಿಯೋ ನನ್ನ ಮುಖದಲ್ಲಿ ನಗುವನ್ನು ತಂದಿತು. ಈ ಇಬ್ಬರೂ ಜೀವನದಲ್ಲಿ ಗೆಲುವು ಸಾಧಿಸುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
ನನ್ನ ಮಗ ಕ್ಯಾಪ್ಟನ್: ಶ್ರೇಯಸ್ ಅಯ್ಯರ್ ತಂದೆಯ ಡ್ಯಾನ್ಸ್ ವಿಡಿಯೋ ವೈರಲ್
ನನ್ನ ಮಗ ಕ್ಯಾಪ್ಟನ್: ಶ್ರೇಯಸ್ ಅಯ್ಯರ್ ತಂದೆಯ ಡ್ಯಾನ್ಸ್ ವಿಡಿಯೋ ವೈರಲ್
ಕೊಟ್ಟಿಯೂರು ದೇವಾಲಯದಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ: ಭಕ್ತರ ಅಸಮಾಧಾನ
ಕೊಟ್ಟಿಯೂರು ದೇವಾಲಯದಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ: ಭಕ್ತರ ಅಸಮಾಧಾನ
ಬೈಲಹೊಂಗಲದಲ್ಲಿ ವರುಣಾರ್ಭಟ: ಅಂಗಡಿಗಳಿಗೆ ಮಳೆನೀರು ನುಗ್ಗಿ ಅಪಾರ ನಷ್ಟ
ಬೈಲಹೊಂಗಲದಲ್ಲಿ ವರುಣಾರ್ಭಟ: ಅಂಗಡಿಗಳಿಗೆ ಮಳೆನೀರು ನುಗ್ಗಿ ಅಪಾರ ನಷ್ಟ
ಡಿಕೆಶಿ ಸಂಪುಟದಲ್ಲಿ ನನಗೇನೂ ಬೇಡ: ರಾಜಣ್ಣ ಖಡಕ್ ಮಾತು
ಡಿಕೆಶಿ ಸಂಪುಟದಲ್ಲಿ ನನಗೇನೂ ಬೇಡ: ರಾಜಣ್ಣ ಖಡಕ್ ಮಾತು
ಸೂರಜ್ ಹೆಗ್ಡೆ ಅಂತಿಮ ದರ್ಶನ ಪಡೆದ ರಾಹುಲ್​​ ಗಾಂಧಿ
ಸೂರಜ್ ಹೆಗ್ಡೆ ಅಂತಿಮ ದರ್ಶನ ಪಡೆದ ರಾಹುಲ್​​ ಗಾಂಧಿ
ಮುಗಿಯದ ಖಾತೆ ಕ್ಯಾತೆ: ದೆಹಲಿಗೆ ತೆರಳಿದ ಸಚಿವ ಕೃಷ್ಣ ಭೈರೇಗೌಡ
ಮುಗಿಯದ ಖಾತೆ ಕ್ಯಾತೆ: ದೆಹಲಿಗೆ ತೆರಳಿದ ಸಚಿವ ಕೃಷ್ಣ ಭೈರೇಗೌಡ
ಲ್ಯಾಡಲ್ ಸ್ಫೋಟ: 25 ಲಕ್ಷ ರೂ. ಪರಿಹಾರ ಘೋಷಿಸಿದ ಹೆಚ್​ಡಿ ಕುಮಾರಸ್ವಾಮಿ
ಲ್ಯಾಡಲ್ ಸ್ಫೋಟ: 25 ಲಕ್ಷ ರೂ. ಪರಿಹಾರ ಘೋಷಿಸಿದ ಹೆಚ್​ಡಿ ಕುಮಾರಸ್ವಾಮಿ
ಕರಗಿದ ಉಕ್ಕನ್ನು ಹೊತ್ತೊಯ್ಯುತ್ತಿದ್ದ ಲ್ಯಾಡಲ್ ಸ್ಫೋಟ, 8 ಮಂದಿ ಸಾವು
ಕರಗಿದ ಉಕ್ಕನ್ನು ಹೊತ್ತೊಯ್ಯುತ್ತಿದ್ದ ಲ್ಯಾಡಲ್ ಸ್ಫೋಟ, 8 ಮಂದಿ ಸಾವು
‘ಕ್ಷೇತ್ರಪಾಲ’ ಸಿನಿಮಾದಲ್ಲಿ ದೈವದ ಕಥೆ? ವಿವರಿಸಿದ ತಂಡ
‘ಕ್ಷೇತ್ರಪಾಲ’ ಸಿನಿಮಾದಲ್ಲಿ ದೈವದ ಕಥೆ? ವಿವರಿಸಿದ ತಂಡ
ಗೋಕರ್ಣದ ಮಹಾಬಲೇಶ್ವರ ದೇಗುಲದಲ್ಲಿ ಆತ್ಮಲಿಂಗವನ್ನೇ ಆವರಿಸಿದ ಕೊಳಚೆ ನೀರು
ಗೋಕರ್ಣದ ಮಹಾಬಲೇಶ್ವರ ದೇಗುಲದಲ್ಲಿ ಆತ್ಮಲಿಂಗವನ್ನೇ ಆವರಿಸಿದ ಕೊಳಚೆ ನೀರು