AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಿಳೆ ಮೇಲೆ ದೌರ್ಜನ್ಯ, ‘ನಾಟು-ನಾಟು’ ಗಾಯಕನ ವಿರುದ್ಧ ದೂರು ದಾಖಲು

Rahul Sipligunj: ‘ಆರ್​​ಆರ್​​ಆರ್’ ಸಿನಿಮಾದ ಆಸ್ಕರ್ ಗೆದ್ದ ಹಾಡು ‘ನಾಟು ನಾಟು’ ಹಾಡಿರುವ ಗಾಯಕ ರಾಹುಲ್ ಸಿಪ್ಲಿಗಂಜ್ ವಿರುದ್ಧ ಆಂಧ್ರದ ವಿಶಾಖಪಟ್ಟಣಂ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಮಹಿಳೆಯೊಬ್ಬರು ನೀಡಿರುವ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಗಾಯಕ ರಾಹುಲ್ ಮಾತ್ರವೇ ಅಲ್ಲದೆ ಅವರ ಸಹೋದರನ ವಿರುದ್ಧವೂ ಪ್ರಕರಣ ದಾಖಲಾಗಿದೆ.

ಮಹಿಳೆ ಮೇಲೆ ದೌರ್ಜನ್ಯ, ‘ನಾಟು-ನಾಟು’ ಗಾಯಕನ ವಿರುದ್ಧ ದೂರು ದಾಖಲು
Rahul Sipliganj
ಮಂಜುನಾಥ ಸಿ.
|

Updated on: Aug 11, 2026 | 3:34 PM

Share

‘ಆರ್​​ಆರ್​​ಆರ್’ (RRR) ಸಿನಿಮಾದ ಆಸ್ಕರ್ (Oscar) ಗೆದ್ದ ಹಾಡು ‘ನಾಟು ನಾಟು’ ಹಾಡಿರುವ ಗಾಯಕ ರಾಹುಲ್ ಸಿಪ್ಲಿಗಂಜ್ ವಿರುದ್ಧ ಆಂಧ್ರದ ವಿಶಾಖಪಟ್ಟಣಂ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಮಹಿಳೆಯೊಬ್ಬರು ನೀಡಿರುವ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಗಾಯಕ ರಾಹುಲ್ ಮಾತ್ರವೇ ಅಲ್ಲದೆ ಅವರ ಸಹೋದರನ ವಿರುದ್ಧವೂ ಪ್ರಕರಣ ದಾಖಲಾಗಿದೆ.

ಯುವತಿಯೊಬ್ಬರು ರಾಹುಲ್ ಸಿಪ್ಲಿಗಂಜ್ ಅವರ ಸಹೋದರ ಸಂಬಂಧಿಯ ವಿರುದ್ಧ ಅತ್ಯಾಚಾರ, ವಂಚನೆ ಮತ್ತು ಬೆದರಿಕೆಯ ದೂರು ದಾಖಲಿಸಿದ್ದಾರೆ. ರಾಹುಲ್ ಅವರ ಸಹೋದರ ಸಂಬಂಧಿ ಕರ್ಪುರಪು ರಾಹುಲ್ ರೆಡ್ಡಿ ತಮ್ಮನ್ನು ಮದುವೆಯಾಗಿ ನಂಬಿಸಿ, ವಂಚನೆ ಮಾಡಿದ್ದಾನೆ. ಮದುವೆಯಾಗುವುದಾಗಿ ಒತ್ತಾಯಿಸಿದ್ದಕ್ಕೆ ಖಾಸಗಿ ವಿಡಿಯೋ, ಚಿತ್ರಗಳನ್ನು ಇರಿಸಿಕೊಂಡು ಬ್ಲ್ಯಾಕ್ ಮೇಲ್ ಮಾಡಿ ಬೆದರಿಕೆ ಹಾಕಿದ್ದಾನೆ ಎಂದು ಯುವತಿ ದೂರು ನೀಡಿದ್ದಾರೆ.

ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಯಕ ರಾಹುಲ್ ಪಿಪ್ಲಿಗಂಜ್ ಸಹ ತಮಗೆ ಬೆದರಿಕೆ ಹಾಕಿದ್ದು ಮಾತ್ರವೇ ಅಲ್ಲದೆ. ತಮ್ಮಿಂದ ಬಲವಂತದ ವಿಡಿಯೋಗಳನ್ನು ಸಹ ಮಾಡಿಸಿದ್ದಾರೆ. ತಪ್ಪೊಪ್ಪಿಗೆ ಹೇಳಿಕೆಗಳನ್ನು ಕೊಡಿಸಿಕೊಂಡಿದ್ದಾರೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಯುವತಿಯ ದೂರಿನ ಅನುಸಾರ ಕರ್ಪುರಪು ರಾಹುಲ್ ರೆಡ್ಡಿ, ರಾಹುಲ್ ಸಿಪ್ಲಿಗಂಜ್ ಸೇರಿ 11 ಮಂದಿಯ​ ವಿರುದ್ಧ ವಿಶಾಖಪಟ್ಟಣಂನ ಎಂವಿಪಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ. ಬಳಿಕ ದೂರನ್ನು ಎಂದಾಡ ಮಹಿಳಾ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದ್ದು, ಈಗಾಗಲೇ ಎಫ್​ಐಆರ್ ದಾಖಲಾಗಿದ್ದು, ಶೀಘ್ರವೇ ಗಾಯಕ ರಾಹುಲ್​​ಗೆ ನೊಟೀಸ್ ನೀಡಿ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ರಾಹುಲ್ ಸಿಪ್ಲಿಗಂಜ್ ಬಲು ಜನಪ್ರಿಯ ಗಾಯಕರಾಗಿದ್ದಾರೆ. ‘ನಾಟು ನಾಟು’ ಮಾತ್ರವೇ ಅಲ್ಲದೆ ತೆಲುಗು, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಹಲವು ಜನಪ್ರಿಯ ಹಾಡುಗಳನ್ನು ರಾಹುಲ್ ಸಿಪ್ಲಿಗಂಜ್ ಹಾಡಿದ್ದಾರೆ. ಗಣೇಶ್ ನಟನೆಯ ‘ಆರೆಂಜ್’ ಸಿನಿಮಾದ ಒಂದು ಹಾಡನ್ನು ರಾಹುಲ್ ಸಿಪ್ಲಿಗಂಜ್ ಹಾಡಿದ್ದಾರೆ. ತೆಲುಗಿನಲ್ಲಿ ಹಲವಾರು ಹಿಟ್ ಹಾಡುಗಳನ್ನು ರಾಹುಲ್ ಹಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us