AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇಹಕ್ಕೆ ಮಾತ್ರ ವಯಸ್ಸು, ನಮ್ಮ ಪ್ರೀತಿ, ಕಾಳಜಿಗಳಲ್ಲ, ಮಡದಿಗೆ ನೈಲ್ ಪಾಲಿಶ್ ಹಚ್ಚಿದ ವೃದ್ಧ

ಇತ್ತೀಚೆಗಿನ ದಿನಗಳಲ್ಲಿ ದಾಂಪತ್ಯ ಜೀವನದಲ್ಲಿ ಸಣ್ಣ ಪುಟ್ಟ ಸಮಸ್ಯೆ ಬಂದು ಬಿಟ್ಟರೆ ಸಾಕು ದಂಪತಿಗಳು ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರುವುದನ್ನು ನೋಡಬಹುದು. ಆದರೆ ಕಷ್ಟ ಸುಖ ಏನೇ ಇರಲಿ, ಜೊತೆಯಾಗಿ ಸಂಸಾರ ನಡೆಸಿ ಅದೇ ಪ್ರೀತಿಯನ್ನು ಉಳಿಸಿಕೊಂಡಿರುವ ವೃದ್ಧ ದಂಪತಿಗಳನ್ನು ಕಂಡಾಗ ನಿಜಕ್ಕೂ ಖುಷಿಯಾಗುತ್ತದೆ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ತನ್ನ ಸಂಗಾತಿಯ ಕೈ ಬೆರಳಿಗೆ ನೈಲ್ ಪಾಲಿಶ್ ಹಚ್ಚುವ ಮೂಲಕ ವೃದ್ಧರೊಬ್ಬರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಈ ವಿಡಿಯೋವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.

ದೇಹಕ್ಕೆ ಮಾತ್ರ ವಯಸ್ಸು, ನಮ್ಮ ಪ್ರೀತಿ, ಕಾಳಜಿಗಳಲ್ಲ, ಮಡದಿಗೆ ನೈಲ್ ಪಾಲಿಶ್ ಹಚ್ಚಿದ ವೃದ್ಧ
ವೈರಲ್ ವಿಡಿಯೋImage Credit source: Instagram
ಸಾಯಿನಂದಾ
|

Updated on: May 27, 2025 | 5:44 PM

Share

ದಾಂಪತ್ಯ ಜೀವನ ನಿಂತಿರುವುದೇ ಪ್ರೀತಿ, ನಂಬಿಕೆಯ ಮೇಲೆ. ವಯಸ್ಸು ಎಷ್ಟು ಆದರೇನು? ಸಂಗಾತಿಗಳಿಬ್ಬರ ನಡುವೆ ಪ್ರೀತಿಗೆ ಕೊರತೆಯಿಲ್ಲ ಹೋದರೆ ಅದಕ್ಕಿಂತ ಹೆಚ್ಚು ಇನ್ನೇನು ಬೇಕು ಅಲ್ಲವೇ. ಹೌದು, ದಂಪತಿಗಳ ಪ್ರೀತಿ (love) ಯನ್ನು ಸಾರುವ ಹೃದಯ ಸ್ಪರ್ಶಿ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ವೈರಲ್ ಆಗುತ್ತಿರುತ್ತದೆ. ಆದರೆ ಇದೀಗ ರೈಲಿನಲ್ಲಿ ಪ್ರಯಾಣಿಸುವ ವೃದ್ಧ ದಂಪತಿ (Old Couple) ಗಳಿಬ್ಬರ ವಿಡಿಯೋವೊಂದು ಎಲ್ಲರ ಗಮನ ಸೆಳೆದಿದೆ. ವೃದ್ಧನು ತನ್ನ ಮಡದಿ ಕೈಬೆರಳುಗಳಿಗೆ ನೈಲ್ ಪಾಲಿಶ್ (nail polish) ಹಚ್ಚುತ್ತಿದ್ದು, ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಈ ಜೋಡಿಗಳ ನಡುವಿನ ಬಾಂಧವ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

iamrohabtmhane ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ತನ್ನ ಸಂಗಾತಿಯ ಕೈಬೆರಳಿಗೆ ನೈಲ್ ಪಾಲಿಶ್ ಹಚ್ಚುವುದನ್ನು ನೋಡಬಹುದು. ಜಗತ್ತು ಎಷ್ಟೇ ಬ್ಯುಸಿಯಾಗಿರಲಿ ಅವರಿಬ್ಬರೂ ತಮ್ಮದೇ ಲೋಕದಲ್ಲಿದ್ದರು.  ವೃದ್ಧನು ತನ್ನ ಪತ್ನಿಯ ಕೈಗೆ ನೈಲ್ ಪಾಲಿಶ್ ಹಚ್ಚುತ್ತಿದ್ದನು. ಆಕೆ ಮಾತ್ರ ಮೊದಲ ಬಾರಿ ಬೆರಳು ಸ್ಪರ್ಶಿದ ಹಾಗೆ ನಗುತ್ತಿದ್ದಳು. ಈ ರೀತಿಯ ಪ್ರೀತಿಗೆ ವಯಸ್ಸು ಆಗುವುದಿಲ್ಲ. ವಯಸ್ಸು ಆದಂತೆ ಇನ್ನಷ್ಟು ಆಳವಾಗುತ್ತದೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.

ಇದನ್ನೂ ಓದಿ
Image
ವಿದ್ಯಾರ್ಥಿಗೆ ಗಿಟಾರ್ ಕಲಿಸಿದ ಮೇಘಾಲಯ ಸಿಎಂ; ಸರಳತನಕ್ಕೆ ಭಾರೀ ಮೆಚ್ಚುಗೆ
Image
73 ವರ್ಷಗಳ ಬಳಿಕ ಸೌದಿಯಲ್ಲಿ ಮದ್ಯ ಮಾರಾಟಕ್ಕೆ ಅವಕಾಶ
Image
ಫೋನ್ ಟ್ಯಾಪಿಂಗ್ ನಿಂದ ಬದಲಾಯ್ತು ಅದೃಷ್ಟ, 231 ಕೋಟಿ ಗೆದ್ದ ವ್ಯಕ್ತಿ
Image
ಬಾಲಿವುಡ್ ಹಾಡಿಗೆ ಸೊಂಟ ಕುಲುಕಿಸಿದ ಅಜ್ಜಿ

ಇದನ್ನೂ ಓದಿ :ಹೆಂಡ್ತಿಗೆ ಹೆರಿಗೆ ನೋವು : ಪತ್ನಿ ನೋವು ಅನುಭವಿಸುವುದನ್ನು ನೋಡಿ ಬಿಕ್ಕಿ ಬಿಕ್ಕಿ ಅತ್ತ ಪತಿ

ಈ ವಿಡಿಯೋದಲ್ಲಿ ವೃದ್ಧ ದಂಪತಿಗಳಿಬ್ಬರೂ ರೈಲಿನಲ್ಲಿ ಪ್ರಯಾಣಿಸುತ್ತಿರುವುದನ್ನು ನೋಡಬಹುದು. ಸಂಗಾತಿಯೂ ತನ್ನ ಎರಡು ಕೈಯನ್ನು ಚಾಚಿದ್ದು, ಪತಿಯೂ ಬಹಳ ಎಚ್ಚರಿಕೆಯಿಂದ ನೈಲ್ ಪಾಲಿಶ್ ಹಚ್ಚುತ್ತಿರುವುದನ್ನು ಕಾಣಬಹುದು. ಈ ಪತ್ನಿಗೆ ಪತಿಯು ಮಾರ್ಗದರ್ಶನ ಮಾಡುತ್ತಿರುವುದನ್ನು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಈ ವಿಡಿಯೋವೊಂದು 46 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರು ಈ ವೃದ್ಧ ದಂಪತಿಗಳ ನಡುವಿನ ಬಾಂಧವ್ಯವನ್ನು ಮೆಚ್ಚಿದ್ದಾರೆ. ಬಳಕೆದಾರರೊಬ್ಬರು, ನಿಜವಾದ ಪ್ರೀತಿ ವಯಸ್ಸಾದರೂ ಸದಾ ಹಸಿರಾಗಿಯೇ ಇರುತ್ತದೆ ಎಂದಿದ್ದಾರೆ. ಇನ್ನೊಬ್ಬರು, ಎಷ್ಟು ಅದ್ಭುತವಾದ ವಿಡಿಯೋ, ಒಮ್ಮೆ ನೋಡಿದರೆ ಮತ್ತೆ ಮತ್ತೆ ನೋಡಬೇಕೇನಿಸುತ್ತದೆ ಎಂದಿದ್ದಾರೆ. ಮತ್ತೊಬ್ಬರು, ಪ್ರೀತಿಗೆ ವಯಸ್ಸಿನ ಮಿತಿಯಿಲ್ಲ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

ಇಂದು ಈ ರಾಶಿಯವರಿಗೆ ಆಕಸ್ಮಿಕ ಧನ ಯೋಗ!
ಇಂದು ಈ ರಾಶಿಯವರಿಗೆ ಆಕಸ್ಮಿಕ ಧನ ಯೋಗ!
ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ