ವಿದ್ಯಾರ್ಥಿಗೆ ಗಿಟಾರ್ ನುಡಿಸಲು ಕಲಿಸಿದ ಮೇಘಾಲಯ ಸಿಎಂ; ಸರಳತನಕ್ಕೆ ಭಾರೀ ಮೆಚ್ಚುಗೆ
ಮೇಘಾಲಯದ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರು ಶಾಲಾ ಭೇಟಿಯ ಸಮಯದಲ್ಲಿ ವಿದ್ಯಾರ್ಥಿಗೆ ಗಿಟಾರ್ ನುಡಿಸಲು ಕಲಿಸುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ಇದಕ್ಕೆ ಜನರ ಮೆಚ್ಚುಗೆ ವ್ಯಕ್ತವಾಗಿದೆ. ರಿ-ಭೋಯ್ ಜಿಲ್ಲೆಯ ಪಹಮ್ಜುಲಾ ಗ್ರಾಮದಲ್ಲಿರುವ ಸ್ಥಳೀಯ ಶಾಲೆಗೆ ಭೇಟಿ ನೀಡಿದ ಸಿಎಂ, ಈ ವಿದ್ಯಾರ್ಥಿಗೆ ಗಿಟಾರ್ ನುಡಿಸಲು ಕಲಿಸುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ವಿದ್ಯಾರ್ಥಿ ಸ್ವರಮೇಳ ನುಡಿಸಲು ಕಷ್ಟಪಡುತ್ತಿರುವುದನ್ನು ಸಂಗ್ಮಾ ಗಮನಿಸಿದ್ದಾರೆ. ಆದ್ದರಿಂದ ಅವರು ಮಧ್ಯಪ್ರವೇಶಿಸಿ ವಿದ್ಯಾರ್ಥಿಗೆ ಗಿಟಾರ್ ನುಡಿಸಲು ಸಹಾಯ ಮಾಡಿದರು. ಈ ವಿಡಿಯೋವನ್ನು ಸಿಎಂ ಸ್ವತಃ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಶಿಲ್ಲಾಂಗ್, ಮೇ 26: ಮೇಘಾಲಯದ ಮುಖ್ಯಮಂತ್ರಿ (Meghalaya CM) ಕಾನ್ರಾಡ್ ಕೆ ಸಂಗ್ಮಾ ಇಂದು ಜಿರಾಂಗ್ ಕ್ಷೇತ್ರದ ನಾಂಗ್‌ಸ್ಪಂಗ್ ಎ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಶಾಲೆಯೊಂದಕ್ಕೆ ಭೇಟಿ ನೀಡಿದ್ದರು. ಈ ಸಮಯದಲ್ಲಿ ಮೇಘಾಲಯ ಸಿಎಂ ವಿದ್ಯಾರ್ಥಿಯೊಬ್ಬನಿಗೆ ಗಿಟಾರ್ ನುಡಿಸಲು ಸಹಾಯ ಮಾಡುತ್ತಿರುವ ಹೃದಯಸ್ಪರ್ಶಿ ವೀಡಿಯೊ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದ್ದು, ಬಳಕೆದಾರರಿಂದ ಪ್ರಶಂಸೆ ಗಳಿಸಿದೆ. ಈ ವಿಡಿಯೋವನ್ನು ಸಿಎಂ ಸ್ವತಃ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಹುಡುಗ ಸಂಗೀತ ವಾದ್ಯವನ್ನು ನುಡಿಸಲು ಕಷ್ಟಪಡುತ್ತಿರುವುದನ್ನು ನೋಡಿದ ಸಿಎಂ ತಾವೇ ಖುದ್ದಾಗಿ ಆ ಹುಡುಗನಿಗೆ ಗಿಟಾರ್ ನುಡಿಸಲು ಸಹಾಯ ಮಾಡಿದ್ದಾರೆ. ಅವರ ಸರಳತೆಗೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos