ಫೋನ್ ಟ್ಯಾಪಿಂಗ್ ನಿಂದ ಬದಲಾಯ್ತು ಅದೃಷ್ಟ, 231 ಕೋಟಿ ಗೆದ್ದು, ಕೋಟ್ಯಾಧಿಪತಿಯಾದ ವ್ಯಕ್ತಿಯ ಕಥೆಯಿದು
ಈಗಿನ ಕಾಲದಲ್ಲಿ ಕೈಯಲ್ಲಿ ದುಡ್ಡಿದ್ರೆ ಮಾತ್ರ ಬೆಲೆ. ಹೀಗಾಗಿ ಕೆಲವರು ಕಳ್ಳ ದಾರಿ ಮೂಲಕ ಹಣ ಸಂಪಾದಿಸುವುದನ್ನು ನೋಡಿರಬಹುದು. ಕೆಲವರು ಕಷ್ಟ ಪಟ್ಟು ದುಡಿದ ಹಣ ಸಂಪಾದಿಸುತ್ತಾರೆ. ಇನ್ನು ಕೆಲವರು ಇದ್ದಾರೆ, ಕಷ್ಟ ಪಡದೆ ತಮ್ಮ ಅದೃಷ್ಟದಿಂದಲೇ ಲಾಟರಿ ಇತ್ಯಾದಿಗಳಿಂದ ಲಕ್ಷಾಧಿಪತಿ, ಕೋಟ್ಯಾಧಿಪತಿಗಳಾಗುತ್ತಾರೆ. ಇಲ್ಲೊಬ್ಬ ನಿವೃತ್ತ ಇಂಜಿನಿಯರ್ ಅವರ ಅದೃಷ್ಟವೇ ಖುಲಾಯಿಸಿದೆ. ಹೌದು, ಯುಎಇಯ 'ಎಮಿರೇಟ್ಸ್ ಡ್ರಾ'ದಲ್ಲಿ 231 ಕೋಟಿ ರೂಪಾಯಿ ಗೆಲ್ಲುವ ಮೂಲಕ ರಾತ್ರಿ ಬೆಳಗಾಗುವಷ್ಟರಲ್ಲಿ ಕೋಟ್ಯಾಧಿಪತಿಯಾಗಿದ್ದಾರೆ. ಹಾಗಾದ್ರೆ ಈ ವ್ಯಕ್ತಿಯ ಅದೃಷ್ಟ ಖುಲಾಯಿಸಿದ್ದು ಹೇಗೆ? ಎನ್ನುವ ಕುರಿತಾದ ಕುತೂಹಲಕಾರಿ ಮಾಹಿತಿ ಇಲ್ಲಿದೆ.

ಚೆನ್ನೈ, ಮೇ 26 : ಅದೃಷ್ಟ ಯಾವಾಗ ಹೇಗೆ ಕೈ ಹಿಡಿಯುತ್ತದೆ ಎಂದು ಹೇಳಲು ಅಸಾಧ್ಯ. ಹೌದು ಅದೃಷ್ಟ ಕೈ ಹಿಡಿದರೆ ರಾತ್ರಿ ಬೆಳಗಾಗುವುದರೊಳಗೆ ಎಲ್ಲವೂ ಕೂಡ ಬದಲಾಗಿ ಬಿಡಬಹುದು. ಇದಕ್ಕೆ ಉದಾಹರಣೆಯಂತಿದೆ ಈ ವ್ಯಕ್ತಿಯ ಕಥೆ. ಚೆನ್ನೈ (Chennai) ನ ನಿವೃತ್ತ ಇಂಜಿನಿಯರ್ ಶ್ರೀರಾಮ್ ರಾಜಗೋಪಾಲನ್ (Retired Engineer Sriram Rajagopalan) ಅವರು ರಾತ್ರಿ ಬೆಳಗಾಗುವಷ್ಟರಲ್ಲಿ ಕೋಟಿ ರೂಪಾಯಿ ಒಡೆಯರಾಗಿದ್ದಾರೆ. 56 ವರ್ಷದ ಶ್ರೀರಾಮ್ ರಾಜ್ ಗೋಪಾಲನ್ ಅವರು ಮಾರ್ಚ್ 16 ರಂದು ತಮ್ಮ ಹುಟ್ಟುಹಬ್ಬದಂದು ಲಾಟರಿ ಟಿಕೆಟ್ ಖರೀದಿಸಿದ್ದು, ಅದುವೇ ಇವರ ಪಾಲಿಗೆ ಅದೃಷ್ಟವಾಗಿದೆ. ಯುಎಇಯ ‘ಎಮಿರೇಟ್ಸ್ ಡ್ರಾ’ (UAE’s ‘Emirates Draw) ದಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 231 ಕೋಟಿ ರೂಪಾಯಿ ವಿಜೇತರಾಗಿದ್ದಾರೆ.
ಮುಂಚೆಯಿಂದಲೂ ಶ್ರೀರಾಮ್ ರಾಜ್ ಗೋಪಾಲನ್ ಅವರು ಫೋನ್ ಟ್ಯಾಪಿಂಗ್ ಮಾಡುವ ಬಗ್ಗೆ ಆಸಕ್ತಿ ಹೊಂದಿದ್ದರು. ತಮ್ಮ ಬಿಡುವ ಸಿಕ್ಕಾಗಲೆಲ್ಲಾ ಫೋನ್ ಟ್ಯಾಪಿಂಗ್ ಮಾಡುತ್ತಿದ್ದರು. ಹೀಗಿರುವಾಗ ಮಾರ್ಚ್ 16 ರಂದು ಎಮಿರೇಟ್ಸ್ ಡ್ರಾ MEGA7 ಎಂಬ ಆನ್‌ಲೈನ್ ಆಟದಲ್ಲಿ ಶ್ರೀರಾಮ್ ಕಣ್ಣು ಮುಚ್ಚಿ ಹದಿನಾರು ನಂಬರ್ ಗಳನ್ನು ಸೆಟ್ ಮಾಡಿದ್ದರು. ಈ ನಂಬರ್ ಇವರ ಅದೃಷ್ಟವನ್ನು ಬದಲಾಯಿಸುತ್ತದೆ ಎಂದು ನಿರೀಕ್ಷೆ ಕೂಡ ಮಾಡಿರಲಿಲ್ಲ. ಆದರೆ ರಾತ್ರಿ ಬೆಳಗಾಗುವಷ್ಟರಲ್ಲಿ ಶ್ರೀರಾಮ್ ಅವರಿಗೆ 231 ಕೋಟಿ ಹಣವು ಕೈ ಸೇರಿದೆ.
ಇದನ್ನೂ ಓದಿ : ಬಾಲಿವುಡ್ ಹಾಡಿಗೆ ಸೊಂಟ ಕುಲುಕಿಸಿದ ಅಜ್ಜಿ, ಇಲ್ಲಿದೆ ನೋಡಿ ವಿಡಿಯೋ
ಕೋಟಿ ಗೆದ್ದಿರುವ ಬಗ್ಗೆ ಖುಷಿ ವ್ಯಕ್ತಪಡಿಸಿರುವ ಶ್ರೀರಾಮ್ ರಾಜ್ ಗೋಪಾಲನ್ ಅವರು, ಈ ಎಮಿರೇಟ್ಸ್ ಡ್ರಾ MEGA7 ದಿಂದ ನನ್ನ ಅದೃಷ್ಟವೇ ಬದಲಾಗಿದೆ. ಪ್ರಾರಂಭದಲ್ಲಿ ನನಗೆ ಇದನ್ನು ನಂಬಲು ಸಾಧ್ಯವಾಗಲಿಲ್ಲ. ನಾನು ಡ್ರಾ ವಿಡಿಯೋವನ್ನು ಎರಡೆರಡು ಬಾರಿ ನೋಡಿದೆ. ಸ್ಕ್ರೀನ್ ಶಾರ್ಟ್ ಗಳನ್ನು ತೆಗೆದುಕೊಂಡ ಬಳಿಕ ನನಗೆ ನಂಬಿಕೆ ಬಂತು. ಯಾವುದೇ ಲೆಕ್ಕಾಚಾರವು ಕೆಲಸ ಮಾಡುವುದಿಲ್ಲ. ಜವಾಬ್ದಾರಿಯುತವಾಗಿ ಆಟವಾಡಿ, ಆಟದ ಸಮಯವನ್ನು ಆನಂದಿಸಿ, ಭರವಸೆ ಇಡಿ. ಎಲ್ಲರಿಗೂ ಕೂಡ ಒಂದು ಸಮಯ ಬರುತ್ತದೆ, ನನ್ನ ಸಮಯ ಈಗ ಬಂತು ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:44 pm, Mon, 26 May 25