ಮಹಾರಾಣಿ, ಶ್ವಾನದ ಮೇಲೇರಿ ಬೀದಿಗಳಲ್ಲಿ ಸವಾರಿ
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಕೆಲ ವಿಡಿಯೋಗಳು ಮನಸ್ಸಿಗೆ ತುಂಬಾನೇ ಹತ್ತಿರವಾಗುತ್ತದೆ. ಈ ಪ್ರಾಣಿಗಳು ಹಾಗೂ ಮನುಷ್ಯನ ನಡುವಿನ ಬಾಂಧವ್ಯ ಸಾರುವ ಹೃದಯಸ್ಪರ್ಶಿಗಳು ವಿಡಿಯೋಗಳು ಆಗಾಗ ಗಮನ ಸೆಳೆಯುತ್ತದೆ. ಆದರೆ ಇದೀಗ ಕುದುರೆಯಂತೆ ಶ್ವಾನದ ಮೇಲೇರಿ ಪುಟಾಣಿ ಹುಡುಗಿಯೊಂದು ಸವಾರಿ ಮಾಡಿದ್ದು, ಉಳಿದ ಶ್ವಾನಗಳು ಸೆಕ್ಯೂರಿಟಿ ಗಾರ್ಡ್ ನಂತೆ ಪುಟ್ಟ ಬಾಲಕಿಯನ್ನೇ ಹಿಂಬಾಲಿಸಿದ್ದು, ಈ ದೃಶ್ಯವೊಂದು ನೆಟ್ಟಿಗರ ಹೃದಯ ಗೆದ್ದಿದೆ.

ಶ್ವಾನ (dogs) ಗಳ ನಿಷ್ಕಲ್ಮಶ ಪ್ರೀತಿ, ನಿಷ್ಠೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಮನುಷ್ಯನ ಆಪ್ತ ಸ್ನೇಹಿತನಾಗಿ ಸದಾ ಜೊತೆಗೆ ಇರುತ್ತದೆ. ಇದು ಪುಟಾಣಿ ಮಕ್ಕಳ ಉತ್ತಮ ಸ್ನೇಹಿತ ಅಂದ್ರೆ ತಪ್ಪಾಗಲಾರದು. ಕೆಲವೊಮ್ಮೆ ಈ ಶ್ವಾನಗಳು ಮಕ್ಕಳಿಗೆ ಹೈ ಸೆಕ್ಯೂರಿಟಿ ನೀಡುತ್ತವೆ. ಆದರೆ ಇದೀಗ ಪುಟ್ಟ ಬಾಲಕಿ (little girl) ಹಾಗೂ ಶ್ವಾನಗಳ ಬಾಂಧವ್ಯ ಸಾರುವ ವಿಡಿಯೋವೊಂದು ವೈರಲ್ ಆಗಿದ್ದು, ಬಾಲಕಿಯೊಬ್ಬಳು ಬೀದಿ ನಾಯಿಯ ಮೇಲೆ ಸವಾರಿ ಮಾಡಿದ್ದಾಳೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಈ ನಿಷ್ಕಲ್ಮಶ ಪ್ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
@annju00 ಹೆಸರಿನ ಖಾತೆಯಲ್ಲಿ ಹೃದಯಸ್ಪರ್ಶಿ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಬೀದಿ ನಾಯಿಗಳ ಜೊತೆಗೆ ಪುಟ್ಟ ಬಾಲಕಿ ಒಂದೊಳ್ಳೆ ಬಾಂಧವ್ಯ ಹೊಂದಿರುವುದನ್ನು ಕಾಣಬಹುದು. ಶ್ವಾನಗಳ ಜೊತೆ ಸೇರಿ ಪುಟ್ಟ ಬಾಲಕಿ ರಸ್ತೆ ದಾಟಿದ್ದಾಳೆ. ಹೌದು ಶ್ವಾನದ ಮೇಲೇರಿ ಸವಾರಿ ಮಾಡಿದ್ದು, ಆ ಬಳಿಕ ಈ ಶ್ವಾನಗಳ ಗುಂಪು ಆಕೆಯನ್ನೆ ಹಿಂಬಾಲಿಸಿದೆ. ಈ ನಿಷ್ಕಲ್ಮಶ ಪ್ರೀತಿಯನ್ನು ಸಾರುವ ವಿಡಿಯೋ ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ.
ಇದನ್ನೂ ಓದಿ : ನೋಡ ನೋಡುತ್ತಿದ್ದಂತೆ ಕುರ್ಚಿ ಸಮೇತ ವೇದಿಕೆಯಿಂದ ಕೆಳಗೆ ಬಿದ್ದ ವಧು, ವರನ ರಿಯಾಕ್ಷನ್ ನೋಡಿ
ವೈರಲ್ ವಿಡಿಯೋ ಇಲ್ಲಿದೆ ನೋಡಿ
Real Z+ Security 🥰✅ pic.twitter.com/MQxWk9pYzj
— 🍁 (@annju_00) May 21, 2025
ಈ ವಿಡಿಯೋವೊಂದು ನಾಲ್ಕು ಲಕ್ಷ ಐವತ್ತು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರು ಈ ವಿಡಿಯೋವನ್ನು ಮೆಚ್ಚಿಕೊಂಡಿದ್ದಾರೆ. ಬಳಕೆದಾರರೊಬ್ಬರು, ಈ ಭದ್ರತೆಗೆ ಎಷ್ಟು ಪಾರ್ಲೆ ಜಿ ಬಿಸ್ಕೆಟ್ ಹಾಕಿದ್ದೀರಿ ಎಂದು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಉನ್ನತ ಮಟ್ಟದ ಭದ್ರತೆ ಎಂದಿದ್ದಾರೆ. ಇನ್ನೊಬ್ಬರು, ಶ್ವಾನಗಳ ಪ್ರಪಂಚದಲ್ಲಿ ಈಕೆಯೇ ರಾಣಿ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








