ಊಟ ಮಾಡ್ಕೊಂಡು ಬರ್ತೇವೆ, ವಧುವಿನ ಕೈಗೆ ಮಗು ಕೊಟ್ಟು ಹೋದ ಕಿಲಾಡಿ ಜೋಡಿ
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ವಿಡಿಯೋಗಳನ್ನು ಕಂಡಾಗ ನಗಬೇಕೋ ಅಳಬೇಕೋ ತಿಳಿಯುವುದಿಲ್ಲ. ಅದ್ರಲ್ಲಿಯೂ ಈ ಪುಟಾಣಿ ಮಕ್ಕಳು ಅಳುತ್ತಿದ್ದರೆ ಸಮಾಧಾನ ಪಡಿಸುವ ವಿಡಿಯೋ ನೋಡಿದಾಗ ಮಕ್ಕಳ ಸಹವಾಸ ಬೇಡಪ್ಪ ಎಂದೆನಿಸುತ್ತದೆ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಮದುವೆ ಸಂಭ್ರಮದಲ್ಲಿ ವೇದಿಕೆಯ ಮೇಲೆ ಕುಳಿತಿದ್ದ ವಧುವು ಸಂಬಂಧಿಕರ ಮಗುವನ್ನು ಸಮಾಧಾನಪಡಿಸುವಲ್ಲಿ ಸುಸ್ತಾಗಿ ಹೋಗಿದ್ದಾಳೆ. ಈ ವಿಡಿಯೋ ನೋಡಿದ ನೆಟ್ಟಿಗರು ವಧುವಿನ ಅವಸ್ಥೆ ನೋಡಿ ಬಿದ್ದು ಬಿದ್ದು ನಕ್ಕಿದ್ದಾರೆ.

ಈಗಿನ ಕಾಲದ ಮಕ್ಕಳು (children) ತುಂಬಾನೇ ಕಿಲಾಡಿಗಳು, ಕೂತಲ್ಲಿ ಕೂರುವುದು ಬಿಡಿ, ಅಳಲು ಪ್ರಾರಂಭಿಸಿದರೆ ನಿಲ್ಲಿಸುವುದೇ ಇಲ್ಲ. ಅದರಲ್ಲಿಯೂ ಗುರುತು ಪರಿಚಯವಿಲ್ಲದವರ ಕೈಗೆ ಹೋದರಂತೂ ಮತ್ತಷ್ಟು ಜೋರಾಗಿ ಅಳಲು ಪ್ರಾರಂಭಿಸುತ್ತದೆ. ಇನ್ನು ಈ ಸಮಾರಂಭಕ್ಕೆ ಹೋದಾಗ ಈ ಮಕ್ಕಳು ತುಂಬಾನೇ ಕಿರಿಕಿರಿ ಕೊಡುತ್ತವೆ. ರಚ್ಚೆ ಹಿಡಿದು ಅಳಲು ಶುರು ಮಾಡಿದರೆ ಅಳು ನಿಲ್ಲಿಸುವುದೇ ಇಲ್ಲ. ಆರತಕ್ಷತೆ (reception)ಕಾರ್ಯಕ್ರಮಕ್ಕೆ ಬಂದ ಸಂಬಂಧಿಕರು ಮಗುವನ್ನು ವಧುವಿನ ಕೈಗೆ ಕೊಟ್ಟು ಊಟ ಮಾಡಿ ಬರುವುದಾಗಿ ಹೇಳಿ ಹೋಗಿದ್ದಾರೆ. ಆದರೆ ಈ ವಧುವು ರಚ್ಚೆ ಹಿಡಿದು ಅಳುತ್ತಿರುವ ಸಂಬಂಧಿಕರ ಮಗುವನ್ನು ಸಮಾಧಾನ ಪಡಿಸಲು ಒದ್ದಾಡಿದ್ದಾಳೆ. ಕೊನೆಗೆ ತನ್ನಿಂದ ಆಗದೇ ಪತಿಯ ಕೈಗೆ ಮಗುವನ್ನು ಕೊಟ್ಟಿದ್ದು, ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
Tv1indialive ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಆರತಕ್ಷತೆಯಲ್ಲಿ ವಧು ಹಾಗೂ ವರರು ವೇದಿಕೆಯ ಮೇಲೆ ಕುಳಿತುಕೊಂಡಿರುವುದನ್ನು ಕಾಣಬಹುದು. ಈ ವೇಳೆಯಲ್ಲಿ ವಧುವಿನ ಕೈಯಲ್ಲಿ ಸಂಬಂಧಿಕರ ಮಗುವೊಂದಿದ್ದು, ಮಗುವು ಜೋರಾಗಿ ಅಳುತ್ತಿದೆ. ಆದರೆ ವಧುವು ಮಗುವನ್ನು ಸಮಾಧಾನ ಪಡಿಸಲು ಹರಸಾಹಸ ಪಡುತ್ತಿದ್ದು ಕಂದಮ್ಮ ಮಾತ್ರ ಅಳುವುದನ್ನು ನಿಲ್ಲಿಸುತ್ತಿಲ್ಲ. ಇದನ್ನು ನೋಡಿದ ವರನು ಮಗುವನ್ನು ಎತ್ತಿಕೊಂಡು ಸಮಾಧಾನ ಪಡಿಸಿದ್ದಾನೆ.
ಇದನ್ನೂ ಓದಿ : ಎಳನೀರಿಗೆ ಆನ್ಲೈನ್ ಗಿಂತ ನಮ್ಮಲ್ಲಿ ಕಡಿಮೆ ಬೆಲೆ : ಆಯ್ಕೆ ನಿಮ್ಮದು
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಈ ವಿಡಿಯೋವೊಂದು ಒಂದು ಲಕ್ಷ ತೊಂಭತ್ತು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಈ ವಿಡಿಯೋಗೆ ಬಳಕೆದಾರರು ತಮಾಷೆಯಾಗಿಯೇ ಕಾಮೆಂಟ್ ಮಾಡಿದ್ದಾರೆ. ಬಳಕೆದಾರರು, ಈ ದೃಶ್ಯವನ್ನು ನೋಡಿದರೆ ನವಜೋಡಿಗೆ ಟ್ರೈನಿಂಗ್ ಕೊಟ್ಟದಂತಿದೆ ಎಂದಿದ್ದಾರೆ. ಮತ್ತೊಬ್ಬರು, ವರನು ಬೆಸ್ಟ್ ಅಪ್ಪ ಆಗುವುದರಲ್ಲಿ ಯಾವುದೇ ಡೌಟ್ ಇಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು, ಅವನಿಗೆ ಹೆಂಡ್ತಿ ಮೇಲೆ ಎಷ್ಟು ಕಾಳಜಿ ಇದೆ ನೋಡಿ, ಅವಳು ಒದ್ದಾಡುವುದನ್ನು ನೋಡಲು ಆಗುತ್ತಿಲ್ಲ. ಅವನು ಒಳ್ಳೆಯ ಪತಿ ಹಾಗೂ ಭವಿಷ್ಯದಲ್ಲಿ ಅದ್ಭುತ ಅಪ್ಪ ಆಗುತ್ತಾನೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








