AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಕಿನಿ, ತುಂಡುಡುಗೆ ತೊಟ್ಟು ಅಶ್ಲೀಲ ವಿಡಿಯೋ ಮಾಡ್ತಾನೆ; ಗಂಡನ ವಿರುದ್ಧ ಪತ್ನಿಯ ಗಂಭೀರ ಆರೋಪ

ಇಲ್ಲೊಂದು ಆಘಾತಕಾರಿ ಘಟನೆ ನಡೆದಿದ್ದು, ಮಹಿಳೆಯೊಬ್ಬರು ತಮ್ಮ ಪತಿಯ ವಿರುದ್ಧವೇ ಗಂಭೀರ ಆರೋಪ ಮಾಡಿದ್ದಾರೆ. ಹಣಕ್ಕಾಗಿ ನನ್ನ ಪತಿ ತಲೆಗೊಂದು ವಿಗ್‌ ಮತ್ತು ತುಂಡುಡುಗೆ ತೊಟ್ಟು ತೃತೀಯ ಲಿಂಗಿ ಮಹಿಳೆಯಂತೆ ವೇಷ ತೊಟ್ಟು, ಇತರ ಪುರುಷರ ಜೊತೆ ಅಶ್ಲೀಲ ವಿಡಿಯೋಗಳನ್ನು ಮಾಡಿ, ಅದನ್ನು ಆನ್‌ಲೈನ್‌ನಲ್ಲಿ ಹರಿ ಬಿಡುತ್ತಿದ್ದಾನೆ ಎಂದು ಆರೋಪಿಸಿದ್ದಾರೆ. ಈ ಸುದ್ದಿ ಇದೀಗ ವೈರಲ್‌ ಆಗುತ್ತಿದೆ.

ಬಿಕಿನಿ, ತುಂಡುಡುಗೆ ತೊಟ್ಟು ಅಶ್ಲೀಲ ವಿಡಿಯೋ ಮಾಡ್ತಾನೆ; ಗಂಡನ ವಿರುದ್ಧ ಪತ್ನಿಯ ಗಂಭೀರ ಆರೋಪ
ವೈರಲ್‌Image Credit source: Google
ಮಾಲಾಶ್ರೀ ಅಂಚನ್​
|

Updated on: May 24, 2025 | 6:56 PM

Share

ಉತ್ತರ ಪ್ರದೇಶ, ಮೇ 24: ನಮ್ಮ ಸಮಾಜದಲ್ಲಿ ಒಂದಲ್ಲಾ ಒಂದು ವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತವೆ. ಇಂತಹ ಸುದ್ದಿಗಳನ್ನು ಕೇಳಿದಾಗ ನಿಜಕ್ಕೂ ಆಘಾತವಾಗುತ್ತದೆ. ಅಂತಹದ್ದೊಂದು ವಿಚಿತ್ರ ಹಾಗೂ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದ್ದು, ಹಣಕ್ಕಾಗಿ ನನ್ನ ಗಂಡ ತೃತೀಯ ಲಿಂಗಿ ಮಹಿಳೆಯಂತೆ (trans woman) ನಟಿಸಿ ಅಶ್ಲೀಲ ವಿಡಿಯೋಗಳನ್ನು (obscene videos) ಮಾಡುತ್ತಾನೆ ಎಂದು ಆರೋಪಿಸಿದ್ದಾರೆ. ನನ್ನ ಗಂಡ ತಲೆಗೆ ವಿಗ್‌ ಹಾಗೂ ತುಂಡುಡುಗೆ ತೊಟ್ಟು ಇತರ ಪುರುಷರೊಂದಿಗೆ ಸೇರಿ ಅಶ್ಲೀಲ ವಿಡಿಯೋಗಳನ್ನು ಮಾಡಿ, ಹಣಕ್ಕಾಗಿ ಅದನ್ನು ಆನ್‌ಲೈನ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಅಪ್‌ಲೋಡ್‌ ಮಾಡುತ್ತಿದ್ದ ಎಂದು ಆರೋಪಿಸಿದ್ದಾರೆ. ಈ ವಿಚಿತ್ರ ಪ್ರಕರಣದ ಸುದ್ದಿ ಇದೀಗ ಭಾರೀ ವೈರಲ್‌ ಆಗುತ್ತಿದೆ.

ತುಂಡುಡುಗೆ ತೊಟ್ಟು ಅಶ್ಲೀಲ ವಿಡಿಯೋ ಮಾಡ್ತಾನೆ:

ಉತ್ತರ ಪ್ರದೇಶದ ಸಂತ ಕಬೀರ್‌ ನಗರದಲ್ಲಿ ಈ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದ್ದು, ಮಹಿಳೆಯೊಬ್ಬರು ನನ್ನ ಪತಿ ಹಣಕ್ಕಾಗಿ ತೃತೀಯ ಲಿಂಗಿಯಂತೆ ವೇಷತೊಟ್ಟು ಅಶ್ಲೀಲ ವಿಡಿಯೋಗಳನ್ನು ಮಾಡಿ ಆನ್‌ಲೈನ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಹರಿ ಬಿಡುತ್ತಿದ್ದಾನೆ ಎಂದು ಆರೋಪಿಸಿದ್ದಾರೆ.  ಇಲ್ಲಿನ ಸರ್ಕಾರಿ ವೈದ್ಯ ಡಾ. ವರುಣೇಶ್‌ ದುಬೆ ಅವರ ಪತ್ನಿ ಸಿಂಪಿ ಪಾಂಡೆ ಇಂತಹದ್ದೊಂದು ಗಂಭೀರ ಆರೋಪವನ್ನು ಮಾಡಿದ್ದಾರೆ. ಮತ್ತು ದಾಂಪತ್ಯ ದ್ರೋಹ, ನಿಂದನೆ ಮತ್ತು ಮಾನಸಿಕ ಕಿರುಕುಳದ ಆರೋಪದಡಿ ಪತಿಯ ವಿರುದ್ಧ ಎಫ್‌.ಐ.ಆರ್‌ ಕೂಡ ದಾಖಲಿಸಿದ್ದಾರೆ. ಆತ ಸರ್ಕಾರಿ ವಸತಿ ಗೃಹದಲ್ಲಿ ತಲೆಗೆ ವಿಗ್‌, ತುಂಡುಡುಗೆ ತೊಟ್ಟು ತೃತೀಯ ಲಿಂಗಿ ಮಹಿಳೆಯಂತೆ ನಟಿಸುತ್ತಾ ಇತರ ಪುರುಷರೊಂದಿಗೆ ಸೇರಿ ಅಶ್ಲೀಲ ವಿಡಿಯೋಗಳನ್ನು ಮಾಡಿ, ಹಣಕ್ಕಾಗಿ ಅದನ್ನು ಆನ್‌ಲೈನ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಅಪ್‌ಲೋಡ್‌ ಮಾಡುತ್ತಿದ್ದ ಎಂದು ಸಿಂಪಿ ಆರೋಪಿಸಿದ್ದಾರೆ.

ಇದನ್ನೂ ಓದಿ: ಬೈಕ್​​ ಓಡಿಸುತ್ತಿದ್ದ ಗಂಡನಿಗೆ ಚಪ್ಪಲಿಯಲ್ಲಿ ಹಿಗ್ಗಾಮುಗ್ಗಾ ಬಾರಿಸಿದ ಹೆಂಡತಿ

ಇದನ್ನೂ ಓದಿ
Image
ಬೋನಿನಲ್ಲಿದ್ದ ಸಿಂಹದ ಜೊತೆ ಹುಚ್ಚಾಟ ಆಡಲು ಹೋಗಿ ಫಜೀತಿಗೆ ಸಿಲುಕಿದ ವ್ಯಕ್ತಿ
Image
ಬಸ್ ಚಾಲಕನ ಮೇಲೆ ಹಲ್ಲೆಗೆ ಯತ್ನಿಸಿದ ಆಟೋ ಚಾಲಕ
Image
ಬೈಕ್ ಓಡಿಸುತ್ತಿರುವಾಗಲೇ ಹಿಂಬದಿ ಕುಳಿತ ಪತ್ನಿಯಿಂದ ಪತಿಗ ಬಿತ್ತು ಒದೆ
Image
ರಾಂಗ್ ರೂಟ್​​​ನಲ್ಲಿ ಬಂದು ಬೈಕ್​​​ಗೆ ಡಿಕ್ಕಿ ಹೊಡೆದ ಕಾರು

ಪತ್ನಿಯ ಆರೋಪಗಳನ್ನೆಲ್ಲಾ ನಿರಾಕರಿಸಿ ಡಾ. ವರುಣೇಶ್‌ ದುಬೆ ಪ್ರತಿ ದೂರು ದಾಖಲಿಸಿದ್ದು, ನನ್ನ ಹೆಸರನ್ನು ಹಾಳು ಮಾಡುವ ಸಲುವಾಗಿ ಇದನ್ನು ಮಾಡಲಾಗಿದೆ. ಇದ್ಯಾವುದು ನಿಜವಲ್ಲ. ಆಕೆಯೇ ಈ ಫೇಕ್‌ ವಿಡಿಯೋಗಳನ್ನು ಸೃಷ್ಟಿಸಿದ್ದಾಳೆ. ನನ್ನ ಪತ್ನಿಯ ಸಂಬಂಧಿ ಸಾಫ್ಟ್‌ವೇರ್‌ ಇಂಜಿನಿಯರ್‌, ಅವರ ಸಹಾಯದಿಂದ ಡೀಪ್ ಫೇಕ್‌ ವಿಡಿಯೋ ಮಾಡಿ ನನ್ನ ಹೆಸರನ್ನು ಹಾಳು ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಪತ್ನಿಯ ವಿರುದ್ಧ ಆರೋಪ ಮಾಡಿದ್ದಾರೆ.

ಪ್ರಸ್ತುತ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೌಟುಂಬಿಕ ಹಿಂಸೆ, ಎಐ ಕುಶಲತೆ, ಸೈಬರ್‌ ಅಪರಾಧ ಸೇರಿದಂತೆ ಎಲ್ಲಾ ಕೋನಗಳಿಂದಲೂ ತನಿಖೆ ನಡೆಸುತ್ತಿದ್ದಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ