AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಲಿಸುತ್ತಿದ್ದ ಬಸ್ಸಿನ ಕಿಟಕಿ ಹತ್ತಿ ಬಸ್ ಚಾಲಕನ ಮೇಲೆ ಹಲ್ಲೆಗೆ ಯತ್ನಿಸಿದ ಆಟೋ ಚಾಲಕ

ರಸ್ತೆಯಲ್ಲಿ ವಾಹನಗಳನ್ನು ಚಲಾಯಿಸುವಾಗ ಕೆಲವೊಮ್ಮೆ ಸವಾರರ ನಡುವೆ ಜಗಳಗಳು ಏರ್ಪಡುತ್ತವೆ. ಹೌದು, ಕ್ಷುಲ್ಲಕ ಕಾರಣಗಳಿಗೆ ಸವಾರರು ಹಾಗೂ ಚಾಲಕರ ನಡುವೆ ಮಾತಿಗೆ ಮಾತು ಬೆಳೆದು ಹೊಡೆದಾಟದವರೆಗೆ ತಲುಪುವುದಿದೆ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಆಟೋ ಹೋಗಲು ದಾರಿ ಬಿಡಲಿಲ್ಲ ಎನ್ನುವ ಕಾರಣಕ್ಕೆ ಆರ್ ಟಿಸಿ ಬಸ್ ಚಾಲಕನ ಮೇಲೆ ಆಟೋ ಚಾಲಕನು ಹಲ್ಲೆಗೆ ಯತ್ನಿಸಿದ್ದು, ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಚಲಿಸುತ್ತಿದ್ದ ಬಸ್ಸಿನ ಕಿಟಕಿ ಹತ್ತಿ ಬಸ್ ಚಾಲಕನ ಮೇಲೆ ಹಲ್ಲೆಗೆ ಯತ್ನಿಸಿದ ಆಟೋ ಚಾಲಕ
ವೈರಲ್ ವಿಡಿಯೋImage Credit source: Twitter
Follow us
ಸಾಯಿನಂದಾ
|

Updated on: May 23, 2025 | 10:05 AM

ಹೈದರಾಬಾದ್, ಮೇ 23: ಕೆಲವು ಜನರೇ ಹಾಗೆ, ಸಣ್ಣ ವಿಷಯಕ್ಕೆ ಸಿಕ್ಕರೆ ಸಾಕು ಅದನ್ನೇ ದೊಡ್ಡದು ಮಾಡಿ ಜಗಳಕ್ಕೆ ಇಳಿದು ಬಿಡುತ್ತಾರೆ. ಅದರಲ್ಲಿಯೂ ಈ ವಾಹನ ಸವಾರರು ಹಾಗೂ ಚಾಲಕರ ನಡುವೆ ಆಗಾಗ ಜಗಳಗಳು ನಡೆಯುತ್ತಲೇ ಇರುತ್ತದೆ. ಕೆಲವೊಮ್ಮೆ ನಡುರಸ್ತೆಯಲ್ಲಿ ರೌಡಿಗಳಂತೆಯೇ ವರ್ತಿಸುತ್ತಾರೆ. ಹೈದರಾಬಾದ್ ನ ಮಿಯಾಪುರ (Miyapur of Hyderabad) ದಲ್ಲಿ ಆರ್ ಟಿಸಿ ಬಸ್ ಚಾಲಕ (RTC Bus Driver) ನ ಮೇಲೆ ಆಟೋ ಚಾಲಕ (Auto driver) ನೊಬ್ಬ ಹಲ್ಲೆಗೆ ಯತ್ನಿಸಿದ್ದಾನೆ. ಆಟೋ ಹೋಗಲು ದಾರಿ ಬಿಡಲಿಲ್ಲ ಎನ್ನುವ ಕಾರಣಕ್ಕೆ ಆಟೋ ಚಾಲಕನು ಕೋಪಗೊಂಡು ಹಲ್ಲೆ ಮಾಡಲು ಮುಂದಾಗಿದ್ದಾನೆ. ಆರ್‌ಟಿಸಿ ಬಸ್ ಕಾಚೆಗುಡದಿಂದ ಪತೆಂಚೇರಿಗೆ ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಇದಕ್ಕೆ ಸಂಬಂಧ ಪಟ್ಟ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

@greatandhranews ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಈ ವಿಡಿಯೋದಲ್ಲಿ ಆಟೋ ಚಾಲಕನು ಬಸ್ ಚಾಲಕನ ಮೇಲೆ ಹಲ್ಲೆಗೆ ಯತ್ನಿಸುತ್ತಿರುವುದನ್ನು ನೋಡಬಹುದು. ಆಟೋ ಹೋಗಲು ದಾರಿ ಬಿಡಲಿಲ್ಲ ಎನ್ನುವ ಕಾರಣಕ್ಕೆ ಆಟೋ ಚಾಲಕನು ಕೋಪಗೊಂಡಿದ್ದು, ಚಲಿಸುತ್ತಿದ್ದ ಬಸ್ಸಿನ ಕಿಟಕಿ ಹತ್ತಿ ಬಸ್ ಚಾಲಕನ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ನೋಡಬಹುದು. ಅದೇ ವೇಳೆ ಬಸ್ ಚಾಲಕನು ಪ್ರಯಾಣಿಕರ ಬಳಿ ವಿಡಿಯೋ ಮಾಡಿ ಎಂದಿದ್ದಾನೆ. ಇತ್ತ ಆಟೋ ಚಾಲಕನು ಗಾಡಿಯನ್ನು ಸೈಡ್ ಗೆ ಹಾಕಿ ಎನ್ನುತ್ತಾ, ಬಸ್ಸಿನೊಳಗೆ ನುಗ್ಗಿ ಚಾಲಕನ ಮೊಬೈಲ್ ಕಿತ್ತುಕೊಳ್ಳುವುದನ್ನು ಕಾಣಬಹುದು. ಆ ಬಳಿಕ ಆಟೋ ಚಾಲಕ ಹಾಗೂ ಬಸ್ ಚಾಲಕನ ನಡುವೆ ವಾಗ್ವಾದ ನಡೆದಿದೆ.

ಇದನ್ನೂ ಓದಿ
Image
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
Image
ಸೆಕೆ ಎಂದು ಎಟಿಎಂ ಎಸಿಗೆ ಬಂದು ಕುಳಿತ ಕುಟುಂಬ
Image
ಬೈಕ್ ಓಡಿಸುತ್ತಿರುವಾಗಲೇ ಹಿಂಬದಿ ಕುಳಿತ ಪತ್ನಿಯಿಂದ ಪತಿಗ ಬಿತ್ತು ಒದೆ
Image
ರಾಂಗ್ ರೂಟ್​​​ನಲ್ಲಿ ಬಂದು ಬೈಕ್​​​ಗೆ ಡಿಕ್ಕಿ ಹೊಡೆದ ಕಾರು

ಇದನ್ನೂ ಓದಿ : ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಮೇ 21 ರಂದು ಶೇರ್ ಮಾಡಲಾದ ಈ ವಿಡಿಯೋ ಎರಡು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರು ಈ ವಿಡಿಯೋಗೆ ನಾನಾ ರೀತಿಯ ಕಾಮೆಂಟ್ ಗಳನ್ನು ಮಾಡಿದ್ದಾರೆ. ಬಳಕೆದಾರರೊಬ್ಬರು, ನಾಚಿಕೆಗೇಡು ಎಂದಿದ್ದಾರೆ. ಇನ್ನೊಬ್ಬರು, ದಯವಿಟ್ಟು ಈ ಸಮಸ್ಯೆಯನ್ನು ಗಮನಿಸಿ ಸರ್ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಬಸ್ ಚಾಲಕರು ರಸ್ತೆಯಲ್ಲಿರುವ ಇತರ ವಾಹನಗಳ ಬಗ್ಗೆ ಕಾಳಜಿ ವಹಿಸುವುದಿಲ್ಲ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Video: ಉತ್ತರಕಾಶಿಯಲ್ಲಿ ಮೇಘಸ್ಫೋಟ, 9 ಮಂದಿ ನಾಪತ್ತೆ
Video: ಉತ್ತರಕಾಶಿಯಲ್ಲಿ ಮೇಘಸ್ಫೋಟ, 9 ಮಂದಿ ನಾಪತ್ತೆ
Weekly Horoscope: ಜೂನ್​ 30 ರಿಂದ ಜುಲೈ 6 ರವರೆಗಿನ ವಾರ ಭವಿಷ್ಯ
Weekly Horoscope: ಜೂನ್​ 30 ರಿಂದ ಜುಲೈ 6 ರವರೆಗಿನ ವಾರ ಭವಿಷ್ಯ
ಆಷಾಢ ಮಾಸದಲ್ಲಿ ಶುಭ ಕಾರ್ಯಗಳನ್ನ ಯಾಕೆ ಮಾಡಬಾರದು ತಿಳಿಯಿರಿ
ಆಷಾಢ ಮಾಸದಲ್ಲಿ ಶುಭ ಕಾರ್ಯಗಳನ್ನ ಯಾಕೆ ಮಾಡಬಾರದು ತಿಳಿಯಿರಿ
ಆಶ್ಲೇಷ ನಕ್ಷತ್ರದಲ್ಲಿ ಚಂದ್ರ ಸಂಚಾರ, ಈ ದಿನ ಯಾರಿಗೆಲ್ಲಾ ಶುಭ ತಿಳಿಯಿರಿ
ಆಶ್ಲೇಷ ನಕ್ಷತ್ರದಲ್ಲಿ ಚಂದ್ರ ಸಂಚಾರ, ಈ ದಿನ ಯಾರಿಗೆಲ್ಲಾ ಶುಭ ತಿಳಿಯಿರಿ
ಉತ್ತರಾಖಂಡದಲ್ಲಿ ಪ್ರವಾಹ; ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಸರಯೂ ನದಿ
ಉತ್ತರಾಖಂಡದಲ್ಲಿ ಪ್ರವಾಹ; ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಸರಯೂ ನದಿ
ಜೈನ ಮುನಿಗಳಿಂದ ಪ್ರಧಾನಿ ಮೋದಿಗೆ ಧರ್ಮ ಚಕ್ರವರ್ತಿ ಬಿರುದು ಪ್ರದಾನ
ಜೈನ ಮುನಿಗಳಿಂದ ಪ್ರಧಾನಿ ಮೋದಿಗೆ ಧರ್ಮ ಚಕ್ರವರ್ತಿ ಬಿರುದು ಪ್ರದಾನ
ಧೂಮಪಾನ ಮತ್ತು ಡ್ರಗ್ಸ್ ಸೇವನೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ: ಡಾ ಸದಾನಂದ
ಧೂಮಪಾನ ಮತ್ತು ಡ್ರಗ್ಸ್ ಸೇವನೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ: ಡಾ ಸದಾನಂದ
ಮಳೆಯಿಂದ ಚಾರ್ ಧಾಮ್ ಯಾತ್ರೆಗೆ ಅಡ್ಡಿ; ಕೇದಾರನಾಥ ಮಾರ್ಗದಲ್ಲಿ ಭೂಕುಸಿತ
ಮಳೆಯಿಂದ ಚಾರ್ ಧಾಮ್ ಯಾತ್ರೆಗೆ ಅಡ್ಡಿ; ಕೇದಾರನಾಥ ಮಾರ್ಗದಲ್ಲಿ ಭೂಕುಸಿತ
ಸ್ಕಂದಗಿರಿ ಮತ್ತು ಬಹುನಂದೀಶ್ವವರ ದೇವಸ್ಥಾನಕ್ಕೂ ನೋ ಎಂಟ್ರಿ: ಜಿಲ್ಲಾಡಳಿತ
ಸ್ಕಂದಗಿರಿ ಮತ್ತು ಬಹುನಂದೀಶ್ವವರ ದೇವಸ್ಥಾನಕ್ಕೂ ನೋ ಎಂಟ್ರಿ: ಜಿಲ್ಲಾಡಳಿತ
ಬೌಲಿಂಗ್ ಕೋಚ್ ಜೊತೆ WWE ಆಡಿ ಸೋತ ಅರ್ಷದೀಪ್, ಆಕಾಶ್
ಬೌಲಿಂಗ್ ಕೋಚ್ ಜೊತೆ WWE ಆಡಿ ಸೋತ ಅರ್ಷದೀಪ್, ಆಕಾಶ್