ಬಾಲಿವುಡ್ ಹಾಡಿಗೆ ಸೊಂಟ ಕುಲುಕಿಸಿದ ಅಜ್ಜಿ, ಇಲ್ಲಿದೆ ನೋಡಿ ವಿಡಿಯೋ
ವಯಸ್ಸು ದೇಹಕ್ಕಷ್ಟೇ ಮನಸ್ಸಿಗಲ್ಲ ಎನ್ನುವ ಮಾತನ್ನು ಕೇಳಿರುತ್ತೀರಿ. ಆದರೆ ವಯೋವೃದ್ಧರ ಕೆಲ ವಿಡಿಯೋಗಳನ್ನು ನೋಡಿದಾಗ ಈ ಮಾತು ನೂರಕ್ಕೆ ನೂರು ನಿಜ ಎಂದೆನಿಸುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ವೃದ್ಧೆಯೊಬ್ಬರು ತಮ್ಮ ಮೊಮ್ಮಗನ ಮೆಹಂದಿ ಕಾರ್ಯಕ್ರಮದಲ್ಲಿ ಹಿಂದಿ ಹಾಡಿಗೆ ಜಬರ್ದಸ್ತ್ ಸ್ಟೆಪ್ ಹಾಕಿದ್ದಾರೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಹೃದಯವನ್ನು ಗೆದ್ದುಕೊಂಡಿದೆ.

ಏಜ್ ಇಸ್ ಜಸ್ಟ್ ನಂಬರ್ ಎನ್ನುವ ಮಾತಿದೆ. ದೇಹಕ್ಕೆ ವಯಸ್ಸು ಆಗುತ್ತದೆ, ಆದರೆ ಮನಸ್ಸಿಗೆ ಹಾಗೂ ಜೀವನೋತ್ಸಾಹಕ್ಕೆ ಖಂಡಿತ ವಯಸ್ಸಾಗಲ್ಲ ಎನ್ನುವುದಕ್ಕೆ ಉದಾಹರಣೆಯಂತಿದೆ ಈ ವಿಡಿಯೋ, ಹೌದು ಸೋಶಿಯಲ್ ಮೀಡಿಯಾದಲ್ಲಿ ಅಜ್ಜಿಯೊಬ್ಬರ ಡ್ಯಾನ್ಸ್ ವಿಡಿಯೋ (old lady dance video) ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಮೊಮ್ಮಗನ ಮೆಹಂದಿ ಕಾರ್ಯಕ್ರಮ (Mehandi function) ದಲ್ಲಿ ಅಜ್ಜಿಯೊಬ್ಬರು ಬಾಲಿವುಡ್ ಸಿನಿಮಾದ ಕಜ್ರಾ ರೇ ಹಾಡಿ (Kajra Re Song) ಗೆ ಯುವಕ ಯುವತಿಯರು ನಾಚುವಂತೆ ಡಾನ್ಸ್ ಮಾಡಿದ್ದಾರೆ. ಅಜ್ಜಿಯ ಡಾನ್ಸ್ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ನೆಟ್ಟಿಗ ರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
3dtdancecrewpune ಹೆಸರಿನ ಖಾತೆಯಲ್ಲಿ ಅಜ್ಜಿಯ ಡ್ಯಾನ್ಸ್ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಮೊಮ್ಮಗನ ಮೆಹಂದಿಸಮಾರಂಭದಲ್ಲಿ ಅಜ್ಜಿಯೂ ಹಿಂದಿ ಹಾಡಾದ ಕಜ್ರಾ ರೇ ಹಾಡಿಗೆ ಅತ್ಯದ್ಭುತ ಎಕ್ಸ್ಪ್ರೆಸ್ ಕೊಟ್ಟು ಸ್ಟೆಪ್ ಹಾಕಿದ್ದಾರೆ. ಅಜ್ಜಿಗೆ ಮೊಮ್ಮಕ್ಕಳು ಕೂಡ ಸಾಥ್ ಕೊಡುವ ಮೂಲಕ ಡಾನ್ಸ್ ಮಾಡಿದ್ದಾರೆ. ಆದರೆ ಈ ವಿಡಿಯೋದಲ್ಲಿ ಅಜ್ಜಿಯ ಡ್ಯಾನ್ಸ್ ಮಾತ್ರ ಬಾಯಿಯ ಮೇಲೆ ಬೆರಳಿಟ್ಟುಕೊಳ್ಳುವಂತೆ ಇದೆ.
ಇದನ್ನೂ ಓದಿ : ಮಹಾರಾಣಿ, ಶ್ವಾನದ ಮೇಲೇರಿ ಬೀದಿಗಳಲ್ಲಿ ಸವಾರಿ
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಈ ವಿಡಿಯೋವೊಂದು 7.2 ಮಿಲಿಯನ್ ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಬಳಕೆದಾರರು ಅಜ್ಜಿ ಡ್ಯಾನ್ಸ್ ಗೆ ಫಿದಾ ಆಗಿದ್ದಾರೆ. ಬಳಕೆದಾರರು,ಈ ಅಜ್ಜಿ 20 ವರ್ಷದವರಾಗಿದ್ದಾಗ ಹೇಗಿದ್ದರು ಎಂದು ಒಮ್ಮೆ ಊಹಿಸಿ ಎಂದಿದ್ದಾರೆ. ಇನ್ನೊಬ್ಬರು, ಅಜ್ಜಿಯ ಡ್ಯಾನ್ಸ್ ನೋಡಿದರೆ ನಮಗೂ ಕುಣಿ ಬೇಕು ಅನಿಸುತ್ತದೆ, ಅಜ್ಜಿ ಮುಂದೇ ನಮ್ಮ ಡ್ಯಾನ್ಸ್ ಏನು ಅಲ್ಲ ಎಂದು ಕಾಮೆಂಟ್ ನಲ್ಲಿ ಬರೆದಿದ್ದಾರೆ. ಮತ್ತೊಬ್ಬರು, ಅಜ್ಜಿ ರಾಕ್ ಫ್ಯಾಮಿಲಿ ಶಾಕ್ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:00 pm, Mon, 26 May 25








