ಹೆಂಡ್ತಿಗೆ ಹೆರಿಗೆ ನೋವು : ಪತ್ನಿ ನೋವು ಅನುಭವಿಸುವುದನ್ನು ನೋಡಿ ಬಿಕ್ಕಿ ಬಿಕ್ಕಿ ಅತ್ತ ಪತಿ
ತಾಯಿಯಾಗುವುದು ಪ್ರತಿಯೊಬ್ಬ ಹೆಣ್ಣಿನ ಜೀವನದ ಸಾರ್ಥಕದ ಕ್ಷಣಗಳಲ್ಲಿ ಒಂದು. ಈ ಹೆರಿಗೆಯ ಸಂದರ್ಭದಲ್ಲಿ ಪತಿಯಾದವನು ತನ್ನ ಜೊತೆಗೆ ಇರಬೇಕು ಎಂದು ಹೆಣ್ಣು ಬಯಸುತ್ತಾಳೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಪತ್ನಿಗೆ ಹೆರಿಗೆ ನೋವು ಕಾಣಿಸಿಕೊಳ್ಳುತ್ತಿದ್ದಂತೆ ಪತಿಯೂ ತನ್ನ ಪತ್ನಿಯ ಒದ್ದಾಟವನ್ನು ನೋಡಲಾಗದೇ ಬಿಕ್ಕಿ ಬಿಕ್ಕಿ ಅತ್ತಿದ್ದಾನೆ. ಈ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ಬಳಕೆದಾರರು ಮೆಚ್ಚಿಕೊಂಡಿದ್ದಾರೆ.

ಹೆರಿಗೆ (childbirth) ಎನ್ನುವುದು ಹೆಣ್ಣಿಗೆ ಪುನರ್ಜನ್ಮವಿದ್ದಂತೆ. ಈ ಸಮಯದಲ್ಲಿ ಹೆಣ್ಣು ಅನುಭವಿಸುವ ನೋವನ್ನು ವಿವರಿಸಲು ಅಸಾಧ್ಯ. ಆದರೆ ಜೀವನದ ಪ್ರತಿಕ್ಷಣದಲ್ಲಿ ಜೊತೆಯಾಗುವ ಪತಿಯೂ ಈ ವೇಳೆಯಲ್ಲಿ ತನ್ನ ಜೊತೆಗೆ ಇರಬೇಕು. ತನಗೆ ಧೈರ್ಯ ತುಂಬಬೇಕು ಎಂದು ಹೆಣ್ಣು ಬಯಸುವುದು ಸಹಜ. ಅಂತಹ ಪತಿ ಸಿಕ್ಕರೆ ಆಕೆಗಿಂತ ಅದೃಷ್ಟವಂತೆ ಮತ್ಯಾರಿಲ್ಲ. ಕೆಲವು ಪುರುಷರು ಪತ್ನಿಯ ಹೆರಿಗೆಯ ಸಮಯದಲ್ಲಿ ಭಾವುಕರಾಗುವುದನ್ನು ನೀವು ನೋಡಿರಬಹುದು. ಆದರೆ ವೈರಲ್ ವಿಡಿಯೋ (viral video) ದಲ್ಲಿ ಪತ್ನಿ ಹೆರಿಗೆ ಮಾಡಿಸಿಕೊಳ್ಳಲು ಹೆರಿಗೆ ಕೋಣೆಗೆ ಹೋಗುತ್ತಿರುವಾಗ ಪತಿಯೂ ಕಣ್ಣೀರಿಟ್ಟಿದ್ದಾನೆ.
ಸ್ತ್ರಿ ರೋಗ ತಜ್ಞೆ ಡಾ. ಉಮ್ಮುಲ್ ಖೈರ್ ಫಾತಿಮಾ ಅವರು ತಮ್ಮ drnaazfathima ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋದೊಂದಿಗೆ ಎಲ್ಲರಿಗೂ ಇಂತಹ ಪ್ರೀತಿಯ ಪತಿಯೇ ಸಿಗಲಿ ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ. ಇದರಲ್ಲಿ ತುಂಬು ಗರ್ಭಿಣಿ ಮಹಿಳೆ ಹೆರಿಗೆ ಕೊಠಡಿಗೆ ಹೋಗುತ್ತಿದ್ದಂತೆ ಆಕೆಯನ್ನು ಕಂಡು ಪತಿಯೂ ಜೋರಾಗಿ ಅಳುತ್ತಿರುವುದು ಕಾಣಬಹುದು. ತನ್ನ ಮಡದಿ ತನ್ನ ಮಗುವಿಗಾಗಿ ಎಷ್ಟು ನೋವು ಸಹಿಸಿಕೊಳ್ಳಬೇಕು ಎಂದಿದ್ದಾನೆ. ಅಷ್ಟೇ ಅಲ್ಲದೆ, ಈ ವೇಳೆಯಲ್ಲಿ ವೈದ್ಯರು ನೀವು ನಿಮ್ಮ ಪತ್ನಿಯನ್ನು ಎಷ್ಟು ಪ್ರೀತಿಸುತ್ತೀರಿ ಎಂದು ಕೇಳುತ್ತಿದ್ದಂತೆ ನಾನು ಆಕೆಯನ್ನು ತುಂಬಾನೇ ಪ್ರೀತಿಸುತ್ತೇನೆ ಎನ್ನುವುದನ್ನು ಈ ವಿಡಿಯೋದಲ್ಲಿ ನೋಡಬಹುದು.
ಇದನ್ನೂ ಓದಿ : Video: ಕರೆಂಟ್ ಬೇಲಿ ದಾಟಲು ಆನೆ ಬಳಸಿದ ಈ ಟ್ರಿಕ್, ನಿಮಗೂ ಉಪಯೋಗಕ್ಕೆ ಬರಬಹುದು ನೋಡಿ
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಈ ವಿಡಿಯೋವೊಂದು 13 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರು ಕಾಮೆಂಟ್ ಗಳನ್ನು ಮಾಡಿದ್ದಾರೆ. ಬಳಕೆದಾರರೊಬ್ಬರು, ಈ ವ್ಯಕ್ತಿಯ ಪತ್ನಿ ನಿಜಕ್ಕೂ ಅದೃಷ್ಟವಂತಳು ಎಂದಿದ್ದಾರೆ. ಇನ್ನೊಬ್ಬರು, ಈ ಪ್ರಪಂಚದ ಅದೃಷ್ಟವಂತ ಮಹಿಳೆ ಈಕೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ, ಈ ಮಹಿಳೆ ಜೀವನದಲ್ಲಿ ಗೆದ್ದಿದ್ದಾಳೆ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:46 pm, Tue, 27 May 25








