ಚೀಫ್ ಹ್ಯಾಪಿನೆಸ್ ಆಫೀಸರ್ ಆಗಿ ನೇಮಕಗೊಂಡ ಶ್ವಾನ, ಇದು ವಿಶೇಷ ಹುದ್ದೆ
ಸಾಮಾನ್ಯವಾಗಿ ಕಂಪನಿಯೂ ಹೊಸ ಉದ್ಯೋಗಿಯನ್ನು ನೇಮಕ ಮಾಡಿಕೊಳ್ಳುತ್ತಾರೆ ಎಂದಾದರೆ ಅಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಆ ಬಗ್ಗೆ ತಿಳಿದುಕೊಳ್ಳುವ ಕುತೂಹಲವಿರುವುದು ಸಹಜ. ಆದರೆ ಕಂಪನಿಯೊಂದು ವಿಶೇಷ ಹುದ್ದೆಗೆ ಆಯ್ಕೆ ಮಾಡಿಕೊಂಡಿರುವುದು ವ್ಯಕ್ತಿಯನ್ನಲ್ಲ ಬದಲಾಗಿ ಶ್ವಾನವನ್ನು. ಹೌದು, ಕಂಪನಿಯೊಂದು ಶ್ವಾನವೊಂದನ್ನು ಚೀಪ್ ಹ್ಯಾಪಿನೆಸ್ ಆಫೀಸರ್ ಆಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಹಾಗಾದ್ರೆ ಈ ಶ್ವಾನ ಏನಪ್ಪಾ ಕೆಲಸ ಮಾಡಲು ಸಾಧ್ಯ ಎನ್ನುವ ಪ್ರಶ್ನೆಯೊಂದು ನಿಮ್ಮ ಮನಸ್ಸಿನಲ್ಲಿ ಮೂಡಿರಬಹುದು. ಈ ಕುರಿತಾದ ಕುತೂಹಲಕಾರಿ ಮಾಹಿತಿ ಇಲ್ಲಿದೆ.

ಹೈದರಾಬಾದ್, ಮೇ 28: ಕಂಪನಿ (Company) ಎಂದ ಮೇಲೆ ನೂರಾರು ಹುದ್ದೆಗಳು ಇರುತ್ತವೆ. ಆಯಾಯ ಉದ್ಯೋಗಗಳಿಗೆ ಇರಬೇಕಾದ ಅರ್ಹತೆಯ ಆಧಾರದ ಮೇಲೆ ಯೋಗ್ಯ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಆದರೆ ನೀವೇನಾದ್ರು ಚೀಫ್ ಹ್ಯಾಪಿನೆಸ್ ಆಫೀಸರ್ (chief happiness officer) ಹುದ್ದೆಯ ಬಗ್ಗೆ ಕೇಳಿದ್ದೀರಾ. ಹೌದು ಹೈದರಾಬಾದ್ (hyderabad) ನ ಕಂಪನಿಯೊಂದು ಈ ಪೋಸ್ಟ್‌ಗೆ ವಿಶೇಷವಾದ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಂಡಿದೆ. ಉದ್ಯಮಿಯೊಬ್ಬರು ಕಂಪನಿಯಲ್ಲಿ ಹೊಸದಾಗಿ ನೇಮಕ ಮಾಡಿಕೊಂಡ ವಿಶೇಷ ಉದ್ಯೋಗಿಯಾದ ಡೆನ್ವರ್ (denver) ಹೆಸರಿನ ಶ್ವಾನದ ಕುರಿತಂತೆ ಪೋಸ್ಟ್ ವೊಂದು ಹಾಕಿದ್ದಾರೆ. ಈ ಶ್ವಾನ ಆಯ್ಕೆ ಮಾಡಿಕೊಳ್ಳುವ ಮೂಲ ಉದ್ದೇಶವೇ ಕಂಪನಿಯಲ್ಲಿರುವ ಉಳಿದ ಉದ್ಯೋಗಿಗಳ ಶಕ್ತಿಯನ್ನು ಕಾಯ್ದುಕೊಳ್ಳುವುದು ಹಾಗೂ ಸದಾ ಉತ್ಸಾಹದಿಂದ ಕೆಲಸ ಮಾಡುವಂತೆ ಮಾಡುವುದು ಆಗಿದೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಇದು ಒಂಥರಾ ಚೆನ್ನಾಗಿದೆ ಎಂದು ನೆಟ್ಟಿಗರು ಕಾಮೆಂಟ್ ಗಳನ್ನು ಮಾಡಿದ್ದಾರೆ.
Ragul Arepaka ಹೆಸರಿನ ಲಿಂಕ್ಡ್ ಇನ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದ್ದು, ನಮ್ಮ ಹೊಸ ನೇಮಕಗೊಂಡ ಡೆನ್ವರ್ – ಚೀಫ್ ಹ್ಯಾಪಿನೆಸ್ ಆಫೀಸರ್ ಅವರನ್ನು ಭೇಟಿ ಮಾಡಿ. ಅವರು ಕೋಡ್ ಮಾಡುವುದಿಲ್ಲ. ಅವರು ಯಾವುದಕ್ಕೂ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಅವರು ಬರುತ್ತಾರೆ, ಎಲ್ಲರ ಹೃದಯಗಳನ್ನು ಕದಿಯುತ್ತಾರೆ ಹಾಗೂ ಎಲ್ಲಾ ಉದ್ಯೋಗಿಗಳ ಶಕ್ತಿಯನ್ನು ಉಳಿಸುತ್ತಾರೆ. ಅಲ್ಲದೆ, ನಾವು ಈಗ ಅಧಿಕೃತವಾಗಿ ಸಾಕುಪ್ರಾಣಿ ಸ್ನೇಹಿಯಾಗಿದ್ದೇವೆ. ಇದು ನಮ್ಮ ಅತ್ಯುತ್ತಮ ನಿರ್ಧಾರ. BTW: ಈ ಉದ್ಯೋಗಿಯೂ ಕಂಪನಿಯಲ್ಲಿ ಅತ್ಯುತ್ತಮ ಸವಲತ್ತುಗಳನ್ನು ಹೊಂದಿದ್ದಾರೆ,” ಎಂದು ಬರೆದುಕೊಳ್ಳಲಾಗಿದೆ.
ಇದನ್ನೂ ಓದಿ : ರಸ್ತೆಯಲ್ಲೇ ಕುಸಿದು ಬಿದ್ದ ಒಂಟೆ, ನೀರು ಕೊಟ್ಟು ಬಾಯಾರಿಕೆ ನೀಗಿಸಿದ ಪುಣ್ಯಾತ್ಮ
ವೈರಲ್ ಪೋಸ್ಟ್ ಇಲ್ಲಿದೆ ನೋಡಿ
ಈ ಪೋಸ್ಟ್ ವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಈ ರೀತಿಯ ಹೊಸ ಪ್ರಯತ್ನಕ್ಕೆ ಬಳಕೆದಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಳಕೆದಾರರೊಬ್ಬರು, ಕಂಪನಿಯ ಉದ್ಯೋಗಿಗಳ ಶಕ್ತಿಯನ್ನು ಕಾಯ್ದುಕೊಳ್ಳುವ ಈ ಪ್ರಯತ್ನ ಚೆನ್ನಾಗಿದೆ ಎಂದಿದ್ದಾರೆ. ಇನ್ನೊಬ್ಬರು ಈ ಎಲ್ಲರನ್ನು ಖುಷಿಪಡಿಸುವ ಕೆಲಸದಲ್ಲಿ ಈ ಶ್ವಾನ ದಣಿದಂತೆ ಕಾಣುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಎಷ್ಟು ಮುದ್ದಾದ ಆಫೀಸರ್ ಇವರು ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ