ಚಲಿಸುತ್ತಿದ್ದ ಬೈಕ್ ನಲ್ಲೇ ಜೋಡಿ ಹಕ್ಕಿಗಳ ರೊಮ್ಯಾನ್ಸ್, ವಿಡಿಯೋ ವೈರಲ್
ಈಗಿನ ಕಾಲದ ಯುವಕ ಯುವತಿಯರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಹೇಗೆ ವರ್ತಿಸಬೇಕು ಎನ್ನುವುದೇ ತಿಳಿದಿಲ್ಲ. ಅದರಲ್ಲಿಯೂ ಕೆಲ ಪ್ರೇಮಿಗಳಂತೂ ಸಾರ್ವಜನಿಕ ಸ್ಥಳಗಳಲ್ಲಿ ರೊಮ್ಯಾನ್ಸ್ ಮಾಡುತ್ತಾ, ಜನರಿಗೆ ಮುಜುಗರ ಉಂಟಾಗುವಂತೆ ಮಾಡುತ್ತಾರೆ. ಇದೀಗ ಚಲಿಸುತ್ತಿದ್ದ ಬೈಕ್ ನಲ್ಲೇ ರೊಮ್ಯಾನ್ಸ್ ಮಾಡುತ್ತಿರುವ ಜೋಡಿ ಹಕ್ಕಿಗಳ ವಿಡಿಯೋವೊಂದು ವೈರಲ್ ಆಗಿದ್ದು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

ವಿಜಯವಾಡ, ಮೇ 25 : ಪ್ರೀತಿ (love) ಪ್ರೇಮ ಕುರುಡು, ಪ್ರೀತಿಗೆ ಕಣ್ಣಿಲ್ಲ ಎಂದು ಹೇಳುವುದನ್ನು ನೀವು ನೋಡಿರಬಹುದು. ಆದರೆ ಕೆಲವೊಮ್ಮೆ ಈ ಪ್ರೀತಿಯಲ್ಲಿ ಬಿದ್ದವರಿಗೆ ಜಗತ್ತಿನ ಪರಿಜ್ಞಾನವೇ ಇರಲ್ಲ ಎಂದೆನಿಸುತ್ತದೆ. ಕೆಲವರು ಸಾರ್ವಜನಿಕ ಸ್ಥಳಗಳಲ್ಲಿ ಮಿತಿ ಮೀರಿ ವರ್ತಿಸುತ್ತಿರುವುದನ್ನು ನೋಡುತ್ತೀರಿ. ಕೆಲ ಪ್ರೇಮಿಗಳು, ರೈಲು, ಮೆಟ್ರೋ, ಬಸ್, ಪಾರ್ಕ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಮುಜುಗರವಾಗುವಂತೆ ನಡೆದುಕೊಳ್ಳುತ್ತಾರೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಚಲಿಸುತ್ತಿದ್ದ ಬೈಕ್ (bike) ನಲ್ಲೇ ಜೋಡಿಹಕ್ಕಿಗಳು ರೊಮ್ಯಾನ್ಸ್ ಮಾಡಿದ್ದಾರೆ. ಆಂಧ್ರ ಪ್ರದೇಶದ ವಿಜಯವಾಡ ನ್ಯಾಷನಲ್ ಹೈ ವೇ – 16 ರಾಮಲಿಂಗೇಶ್ವರ ನಗರ ಫ್ಲೈ ಓವರ್ (NH- 16 Ramalingeshwara Nagar Flyover in Vijayawada) ನಲ್ಲಿ ಈ ರೀತಿಯ ದೃಶ್ಯವು ಕಂಡು ಬಂದಿದೆ.
@jallakai2024 ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಈ ವಿಡಿಯೋದಲ್ಲಿ ಯುವತಿಯೂ ಬೈಕ್ ಮುಂಭಾಗದಲ್ಲಿ ತನ್ನ ಗೆಳೆಯನನ್ನು ಅಪ್ಪಿಕೊಂಡು ಕುಳಿತಿದ್ದಾಳೆ. ಆದರೆ ಇತ್ತ ಯುವಕನು ಬೈಕ್ ಓಡಿಸುತ್ತ ತನ್ನ ಪ್ರೇಮಿಯ ಜೊತೆಗೆ ರೊಮ್ಯಾನ್ಸ್ ಮಾಡುತ್ತಿದ್ದಾನೆ. ಚಲಿಸುತ್ತಿದ್ದ ಬೈಕ್ ನಲ್ಲೇ ಮೈ ಮರೆತು ಪ್ರೇಮಿಗಳಿಬ್ಬರೂ ರೊಮ್ಯಾನ್ಸ್ ಮಾಡುತ್ತಿರುವ ದೃಶ್ಯವನ್ನು ದಾರಿಹೋಕರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿರುವುದನ್ನು ನೋಡಬಹುದು.
ಇದನ್ನೂ ಓದಿ : ಬಿಕಿನಿ, ತುಂಡುಡುಗೆ ತೊಟ್ಟು ಅಶ್ಲೀಲ ವಿಡಿಯೋ ಮಾಡ್ತಾನೆ; ಗಂಡನ ವಿರುದ್ಧ ಪತ್ನಿಯ ಗಂಭೀರ ಆರೋಪ
ವೈರಲ್ ವಿಡಿಯೋ ಇಲ್ಲಿದೆ ನೋಡಿ
మద్యం మత్తులో బైక్పై వెళ్తూ రొమాన్స్ చేసుకున్న జంట..!
విజయవాడ హైవే – రామలింగేశ్వర నగర్ ఫ్లై ఓవర్ వద్ద బైక్పై రొమాన్స్ చేస్తూ కెమెరాకు చిక్కిన జంట.. #ViralVideos pic.twitter.com/1MHxuz6cWf
— Jallakai (@Jallakai2024) May 18, 2025
ಮೇ 18 ರಂದು ಶೇರ್ ಮಾಡಲಾದ ಈ ವಿಡಿಯೋವೊಂದು ಆರುನೂರಕ್ಕೂ ಅಧಿಕ ವೀಕ್ಷಣೆ ಕಂಡುಕೊಂಡಿದೆ. ಬಳಕೆದಾರರು ಸಾರ್ವಜನಿಕ ಸ್ಥಳ ಗಳಲ್ಲಿ ಈ ರೀತಿ ವರ್ತಿಸುವ ಪ್ರೇಮಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಕೆದಾರರೊಬ್ಬರು, ಎಲ್ಲಿ ಯಾವಾಗ ಹೇಗೆ ವರ್ತಿಸಬೇಕೆನ್ನುವ ಪರಿಜ್ಞಾನವೇ ನಿಮಗಿಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೊಬ್ಬರು, ಈಗಿನ ಕಾಲದ ಯುವಕ ಯುವತಿಯರು ದಾರಿ ತಪ್ಪುತ್ತಿದ್ದಾರೆ ಎನ್ನುವುದಕ್ಕೆ ಇದೇ ಉದಾಹರಣೆ ಎಂದಿದ್ದಾರೆ. ಇನ್ನೊಬ್ಬರು, ದಯವಿಟ್ಟು ನಿಮ್ಮ ತಂದೆ ತಾಯಿಯ ಮರ್ಯಾದೆಯನ್ನು ಉಳಿಸಿ, ಬೀದಿಗೆ ತರುವಂತಹ ಕೆಲಸ ಮಾಡಬೇಡಿ ಎಂದು ಕೇಳಿಕೊಂಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








