ರಸ್ತೆಯಲ್ಲಿ ಕಸ ಎಸೆದ ಯುವಕರಿಗೆ ವಿದೇಶಿ ಮಹಿಳೆಯಿಂದ ಸ್ವಚ್ಛತೆಯ ಪಾಠ, ವಿಡಿಯೋ ವೈರಲ್
ಸ್ವಚ್ಛತೆಯ ಕುರಿತು ಎಷ್ಟೇ ಜಾಗೃತಿ ಮೂಡಿಸಲು ಕೆಲವರು ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎನ್ನುವಂತೆ ವರ್ತಿಸುವುದನ್ನು ನೋಡಬಹುದು. ಕೆಲವೊಮ್ಮೆ ಸಿಕ್ಕ ಸಿಕ್ಕ ಕಡೆಗಳಲ್ಲಿ ಕಸ ಎಸೆದು ಹೋಗುವವರೇ ಹೆಚ್ಚು. ಆದರೆ ಇದೀಗ ರಸ್ತೆಯಲ್ಲಿ ಕಸ ಎಸೆದ ಯುವಕರಿಬ್ಬರನ್ನು ಕರೆದು ಕಸ ಹೆಕ್ಕಿ ಕಸದ ಬುಟ್ಟಿಗೆ ಹಾಕುವಂತೆ ವಿದೇಶಿ ಮಹಿಳೆಯೂ ಬುದ್ಧಿ ಹೇಳಿರುವ ವಿಡಿಯೋವೊಂದು ವೈರಲ್ ಆಗಿದ್ದು, ಈ ವಿಡಿಯೋ ಮೆಚ್ಚುಗೆಗೆ ಪಾತ್ರವಾಗಿದೆ.

ಮನೆಯಷ್ಟೇ ಸ್ವಚ್ಛ (clean) ವಾಗಿದ್ದರೆ ಸಾಲದು, ನಮ್ಮ ಸುತ್ತಲಿನ ಪರಿಸರ ಹಾಗೂ ದಿನನಿತ್ಯ ಓಡಾಡುವ ರಸ್ತೆಗಳು ಅಷ್ಟೇ ಸ್ವಚ್ಛವಾಗಿರಬೇಕು. ಆದರೆ ಮನೆಯ ಬಗ್ಗೆ ಕಾಳಜಿ ವಹಿಸುವ ಜನರು ರಸ್ತೆ ಬದಿಯಲ್ಲೇ ಕಸ ಎಸೆದು ಹೋಗುತ್ತಾರೆ. ಈ ಬಗ್ಗೆ ಎಷ್ಟೇ ಅರಿವು ಮೂಡಿಸಿದರೂ ಕೂಡ ಯಾವುದನ್ನು ತಲೆಗೆ ಹಾಕಿಕೊಳ್ಳುವುದೇ ಇಲ್ಲ. ಇನ್ನು ಕೆಲವು ಮಹಾನುಭಾವರು ಅಂಗಡಿಯಲ್ಲಿ ತಿಂಡಿ ಖರೀದಿಸಿ ತಿಂದು, ಅದರ ಕಸವನ್ನು ರಸ್ತೆಯಲ್ಲಿ ಎಸೆಯುವುದನ್ನು ನೀವು ನೋಡಿರುತ್ತೀರಿ. ಆದರೆ ಇದೀಗ ವಿದೇಶಿ ಮಹಿಳೆ (foreign lady) ಯೂ ರಸ್ತೆ ಬದಿಯಲ್ಲಿ ಕಸ ಬಿಸಾಡಿದ ಯುವಕರಿಬ್ಬರ ಗ್ರಹಚಾರ ಬಿಡಿಸಿದ್ದಾಳೆ. ಹೌದು ಐಸ್ ಕ್ರೀಮ್ ತಿಂದು ಅದರ ಕಸವನ್ನು ರಸ್ತೆಯಲ್ಲಿ ಎಸೆದಿದ್ದಾರೆ. ಆ ಯುವಕರನ್ನು ಕರೆದು ಈ ಕಸ ಹೆಕ್ಕಿ ಕಸದ ಡಬ್ಬಿಗೆ ಹಾಕುವಂತೆ ವಿದೇಶಿ ಮಹಿಳೆ ಹೇಳಿದ್ದಾರೆ.
ameana finds ಹೆಸರಿನ ಖಾತೆಯಲ್ಲಿ ಕಂಟೆಂಟ್ ಕ್ರಿಯೇಟರ್ ಅಮಿಯಾನಾ ಫೈಂಡ್ಸ್ ಅವರು ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಈ ವಿಡಿಯೋದಲ್ಲಿ ಯುವಕರಿಬ್ಬರೂ ಅಂಗಡಿ ಮುಂಭಾಗದಲ್ಲಿ ಕುಳಿತು ಐಸ್ ಕ್ರೀಮ್ ತಿನ್ನುತ್ತಿದ್ದಾರೆ. ಐಸ್ ತಿಂದ ಬಳಿಕ ಅದರ ಕಸವನ್ನು ಅಲ್ಲೇ ಕೆಳಗೆ ಎಸೆದಿದ್ದಾರೆ. ಇದನ್ನು ನೋಡಿದ ವಿದೇಶಿ ಮಹಿಳೆ ಈ ಯುವಕರನ್ನು ಪ್ರಶ್ನೆ ಮಾಡಿದ್ದು, ದಯವಿಟ್ಟು ಕಸವನ್ನು ಕಸದ ಬುಟ್ಟಿಗೆ ಹಾಕಿ ಎಂದು ಹೇಳಿರುವುದನ್ನು ನೋಡಬಹುದು. ಅಷ್ಟೇ ಅಲ್ಲದೇ ಕಸಬುಟ್ಟಿಯಿದ್ದರೂ ಸಾರ್ವಜನಿಕಸ್ಥಳಗಳಲ್ಲಿ ಕಸ ಹಾಕುತ್ತಾರೆ ಎಂದು ಈ ವಿದೇಶಿ ಮಹಿಳೆ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ವೇದಿಕೆ ಮೇಲೆ ಹಾಡು ಹಾಡುತ್ತಲೇ ಕುಸಿದು ಬಿದ್ದು ಪ್ರಾಣ ಬಿಟ್ಟ ಮಾಜಿ ಶಿಕ್ಷಕ
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಈ ವಿಡಿಯೋವೊಂದು ಹತ್ತುಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರು ಈ ವಿದೇಶಿ ಮಹಿಳೆಯ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಳಕೆದಾರರೊಬ್ಬರು, ಅತ್ಯುತ್ತಮವಾದ ಕೆಲಸ ಎಂದಿದ್ದಾರೆ. ಮತ್ತೊಬ್ಬರು, ದಯವಿಟ್ಟು ಎಲ್ಲರೂ ಈ ರೀತಿಯ ಮನಸ್ಥಿತಿಯನ್ನು ಬೆಳೆಸಿಕೊಳ್ಳಿ ಎಂದಿದ್ದಾರೆ. ಇನ್ನೊಬ್ಬರು, ಏನು ವಿಪರ್ಯಾಸ ನೋಡಿ, ಟ್ರಿಪ್ ಗೆ ಬಂದಿರುವ ವಿದೇಶಿಗರಿಂದ ಬುದ್ಧಿವಾದ ಹೇಳಿಸಿಕೊಳ್ಳುವ ಕಾಲ ಬಂದಿದೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:06 am, Sun, 1 June 25








