Viral: ಫೋಟೋ ಹುಚ್ಚು ತಂದ ಫಜೀತಿ; ಥೈಲ್ಯಾಂಡ್‌ನಲ್ಲಿ ಭಾರತೀಯ ಪ್ರವಾಸಿಗನ ಮೇಲೆ ಹುಲಿ ದಾಳಿ
ಥೈಲ್ಯಾಂಡ್‌ಗೆ ಪ್ರವಾಸ ಹೋದವರು ಇಲ್ಲಿನ ಫುಕೆಟ್‌ನಲ್ಲಿರುವ ಟೈಗರ್ ಕಿಂಗ್‌ಡಮ್ ವನ್ಯಜೀವಿ ಉದ್ಯಾನವನದಲ್ಲಿ ಹುಲಿಗಳ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳದೆ ವಾಪಸ್ ಬರೋದೇ ಇಲ್ಲ. ಅದೇ ರೀತಿ ಇಲ್ಲಿಗೆ ಪ್ರವಾಸ ಹೋಗಿದ್ದಂತಹ ಭಾರತೀಯನೊಬ್ಬ ಹುಲಿಯೊಂದಿಗೆ ಫೋಟೋ ಕ್ಲಿಕ್ಕಿಸಲು ಹೋಗಿದ್ದು, ಅದೇನಾಯಿತೋ ಗೊತ್ತಿಲ್ಲ, ಶಾಂತವಾಗಿದ್ದ ಹುಲಿ ಏಕಾಏಕಿ ಆತನ ಮೇಲೆ ದಾಳಿ ನಡೆಸಿದೆ. ಹುಲಿ ದಾಳಿಯ ಈ ಭಯಾನಕ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ಥೈಲ್ಯಾಂಡ್, ಮೇ 31: ಬಹುತೇಕ ಹೆಚ್ಚಿನವರಿಗೆ ಥೈಲ್ಯಾಂಡ್‌ಗೆ (Thailand) ಪ್ರವಾಸ ಹೋಗೋದೆಂದ್ರೆ ಬಲು ಇಷ್ಟ. ಇಲ್ಲಿನ ಬೀಚ್, ನೈಟ್ ಕ್ಲಬ್‌ಗಳಲ್ಲಿ ಎಂಜಾಯ್ ಮಾಡಲು ಮಾತ್ರವಲ್ಲದೆ, ಥೈಲ್ಯಾಂಡ್‌ನ ಫುಕೆಟ್‌ನಲ್ಲಿರುವ ಜನಪ್ರಿಯ ಟೈಗರ್ ಕಿಂಗ್‌ಡಮ್ (Tiger Kingdom) ಉದ್ಯಾನವನದಲ್ಲಿ ಹುಲಿಗಳ ಜೊತೆ ವಿಡಿಯೋ, ಫೋಟೋಗಳನ್ನು ಕ್ಲಿಕ್ಕಿಸಲೆಂದೇ ಅನೇಕಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಇಂತಹ ಸಾಕಷ್ಟು ಕ್ರೇಜಿ ಫೋಟೋ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಕಾಣ ಸಿಗುತ್ತಿರುತ್ತವೆ. ಅದೇ ರೀತಿ ಇತ್ತೀಚಿಗೆ ಭಾರತೀಯನೊಬ್ಬ ಇಲ್ಲಿಗೆ ಪ್ರವಾಸ ಹೋಗಿದ್ದ ಸಂದರ್ಭದಲ್ಲಿ ಟೈಗರ್ ಕಿಂಗ್‌ಡಮ್‌ನಲ್ಲಿ ದೈತ್ಯ ಹುಲಿಯೊಂದಿಗೆ ಫೋಟೋ ತೆಗೆದುಕೊಳ್ಳಲು ಹೋಗಿದ್ದು, ಆ ಸಂದರ್ಭದಲ್ಲಿ ಕೋಪಗೊಂಡ ಹುಲಿ (Tiger attacks Indian tourist) ಆತನ ಮೇಲೆ ಏಕಾಏಕಿ ದಾಳಿ ನಡೆಸಿದೆ. ಈ ಘಟನೆಗೆ ಸಂಬಂಧಪಟ್ಟ ಭಯಾನಕ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
ಥೈಲ್ಯಾಂಡ್‌ನಲ್ಲಿ ಭಾರತೀಯ ಪ್ರವಾಸಿಗನ ಮೇಲೆ ಹುಲಿ ದಾಳಿ:
ಥೈಲ್ಯಾಂಡ್‌ನ ಫುಕೆಟ್‌ನಲ್ಲಿರುವ ಟೈಗರ್ ಕಿಂಗ್‌ಡಮ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಭಾರತೀಯ ಪ್ರವಾಸಿಗನೊಬ್ಬ ಅಲ್ಲಿನ ದೈತ್ಯ ಹುಲಿಯೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಹೋದ ಸಂದರ್ಭದಲ್ಲಿ, ಕೋಪಗೊಂಡ ಹುಲಿ ಇದ್ದಕ್ಕಿದ್ದಂತೆ ಆತನ ಮೇಲೆ ದಾಳಿ ನಡೆಸಿದೆ. ತರಬೇತುದಾರ ಅಲ್ಲಿಯೇ ಇದ್ದರೂ ಕೂಡಾ ಹುಲಿ ದಾಳಿ ನಡೆಸಿದ್ದು, ಪ್ರಾಣಿ ಹಿಂಸೆ ಮತ್ತು ಪ್ರವಾಸಿಗರ ಸುರಕ್ಷತೆ ಬಗ್ಗೆ ಜನ ಕಳವಳ ವ್ಯಕ್ತಪಡಿಸಿದ್ದಾರೆ. ಮಾಹಿತಿಗಳ ಪ್ರಕಾರ ಹುಲಿ ದಾಳಿಗೆ ತುತ್ತಾದ ಭಾರತೀಯ ಪ್ರವಾಸಿಗನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಹೆಚ್ಚಿನ ಯಾವುದೇ ಅಪಾಯ ಸಂಭವಿಸಿಲ್ಲ.
ಈ ಭಯಾನಕ ಹುಲಿ ದಾಳಿಗೆ ಸಂಬಂಧಪಟ್ಟ ವಿಡಿಯೋವನ್ನು ಸಿದ್ಧಾರ್ಥ್ ಶುಕ್ಲಾ (sidhashuk) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಥೈಲ್ಯಾಂಡ್‌ನಲ್ಲಿ ಹುಲಿತ ದಾಳಿಗೆ ತುತ್ತಾದ ಭಾರತೀಯ ವ್ಯಕ್ತಿ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಟೀ ಎಸ್ಟೇಟ್‌ನಲ್ಲಿ ಮರಿಗಳೊಂದಿಗೆ ಪ್ರತ್ಯಕ್ಷವಾದ ಹುಲಿ, ವಿಡಿಯೋ ವೈರಲ್
ವೈರಲ್ ವಿಡಿಯೋ ಇಲ್ಲಿದೆ ನೋಡಿ:
Apparently an Indian man attacked by a tiger in Thailand.
This is one of those paces where they keep tigers like pets and people can take selfies, feed them etc etc.#Indians #tigers #thailand #AnimalAbuse pic.twitter.com/7Scx5eOSB4
— Sidharth Shukla (@sidhshuk) May 29, 2025
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಭಾರತೀಯ ಪ್ರವಾಸಿಗ ಹುಲಿಯೊಂದಿಗೆ ರಾಜಾರೋಷವಾಗಿ ನಡೆದುಕೊಂಡು ಹೋಗುತ್ತಿರುವ ದೃಶ್ಯವನ್ನು ಕಾಣಬಹುದು. ನಂತರ ಆತ ಕುಳಿತುಕೊಂಡು ಹುಲಿಯೊಂದು ಫೋಟೋ ತೆಗೆದುಕೊಳ್ಳಲು ಹೋದಾಗ, ಉದ್ವೇಗಕ್ಕೊಳಗಾದ ಹುಲಿ ಇದ್ದಕ್ಕಿದ್ದಂತೆ ಆತನ ಮೇಲೆ ದಾಳಿ ನಡೆಸಿದೆ.
ಮೇ 29 ರಂದು ಹಂಚಿಕೊಳ್ಳಲಾದ ಈ ವಿಡಿಯೋ 3.6 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಆತ ಕೆಳ ಬೆನ್ನಿನ ಭಾಗವನ್ನು ಮುಟ್ಟಿದ ಕಾರಣ ಹುಲಿ ಆತನ ಮೇಲೆ ದಾಳಿ ನಡೆಸಿದೆ. ಹುಲಿಗಳು ಆ ಭಾಗವನ್ನು ಮುಟ್ಟಿದರೆ ಕೋಪಗೊಳ್ಳುತ್ತವೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಹುಲಿಗಳ ಜೊತೆ ಇಂತಹ ಹುಚ್ಚಾಟ ಬೇಕಿತ್ತಾʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ಈ ಭಯಾನಕ ದೃಶ್ಯವನ್ನು ಕಂಡು ಫುಲ್ ಶಾಕ್ ಆಗಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:35 pm, Sat, 31 May 25








