ಕೂಲರ್‌ಗಾಗಿ ವಧು ವರನ ಕಡೆಯವರ ನಡುವೆ ಕಿರಿಕ್, ರಣರಂಗವಾಯ್ತು ಕಲ್ಯಾಣ ಮಂಟಪ
ಮದುವೆ ಎಂದರೆ ಸಡಗರ ಸಂಭ್ರಮ. ಆದರೆ ಕೆಲವೊಮ್ಮೆ ಮದುವೆ ಮನೆ, ಮದುವೆ ಮಂಟಪದಲ್ಲಿ ಕ್ಷುಲ್ಲಕ ಕಾರಣಗಳಿಗೆ ವಧು ಹಾಗೂ ವರ ಕಡೆಯ ಸಂಬಂಧಿಕರ ಮಧ್ಯೆ ಜಗಳಗಳು ಪ್ರಾರಂಭವಾಗಿ ಹೊಡೆದಾಟದವರೆಗೂ ತಲುಪಿರುವ ಘಟನೆಗಳ ಬಗ್ಗೆ ನೀವು ಕೇಳಿರುತ್ತೀರಿ. ಇಂತಹದ್ದೇ ಸುದ್ದಿಯೊಂದು ಇದೀಗ ವೈರಲ್ ಆಗಿದ್ದು,ಕೂಲರ್ ವಿಚಾರವಾಗಿ ವಧು ವರರ ಕಡೆಯವರ ನಡುವೆ ಜಗಳವು ಏರ್ಪಟ್ಟಿದ್ದು ಮದುವೆ ಮಂಟಪವೇ ರಣರಂಗವಾಗಿದೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೆಟ್ಟಿಗರು ಈ ರೀತಿ ವರ್ತಿಸುವುದು ಸರಿಯಲ್ಲ ಎಂದು ಬುದ್ಧಿ ಹೇಳಿದ್ದಾರೆ.

ಉತ್ತರ ಪ್ರದೇಶ, ಜೂನ್ 2 : ಮದುವೆ (marriage) ಎಂದರೇನೇ ಸಂಭ್ರಮ, ಎರಡು ಮನಸ್ಸುಗಳು ಬೆಸೆಯುವ ಸಮಯ. ಹೀಗಾಗಿ ಮದುವೆ ಮನೆಯಲ್ಲಿ ಸಡಗರ ಸಂಭ್ರಮಕ್ಕೇನು ಕೊರತೆಯಿಲ್ಲ . ಆದರೆ ಕೆಲವೊಮ್ಮೆ ಊಟದ ವಿಚಾರವಾಗಿ, ಸಣ್ಣ ಪುಟ್ಟ ಕಾರಣವನ್ನೇ ಮುಂದಿಟ್ಟುಕೊಂಡು ವಧು ವರರ ಕಡೆಯವರು ಜಗಳವಾಡುವುದನ್ನು ನೀವು ನೋಡಿರಬಹುದು. ಕೆಲವರಂತೂ ಇಂತಹ ಸಂದರ್ಭಕ್ಕಾಗಿಯೇ ಕಾದು ಕುಳಿತಿರುತ್ತಾರೆ. ಆದರೆ ಇದೀಗ ಕೂಲರ್ (cooler) ವಿಚಾರವಾಗಿ ವಧು ವರನ ಕಡೆಯವರ ನಡುವೆ ಜಗಳವು ಶುರುವಾಗಿದೆ. ಕೊನೆಗೆ ಈ ಜಗಳವು ಅತಿರೇಕಕ್ಕೆ ತಿರುಗಿದ್ದು ಎರಡು ಕಡೆಯವರು ಹೊಡೆದಾಡಿಕೊಂಡಿದ್ದಾರೆ. ಈ ಘಟನೆಯೂ ಉತ್ತರ ಪ್ರದೇಶದ ಝಾನ್ಸಿ (Jhansi of Uttar Pradesh) ಯಲ್ಲಿ ನಡೆದಿದೆ ಎನ್ನಲಾಗಿದೆ.
@gharkekalesh ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಮದುವೆ ಮಂಟಪದಲ್ಲಿ ಕೂಲರ್ ವಿಚಾರಕ್ಕೆ ಜಗಳವು ಶುರುವಾಗಿದ್ದು, ವಧು ವರನ ಕಡೆಯವರು ಪರಸ್ಪರ ಕುರ್ಚಿ, ಪಾತ್ರೆಗಳಿಂದ ಹೊಡೆದಾಡಿಕೊಳ್ಳುತ್ತಿರುವುದನ್ನು ನೋಡಬಹುದು.
ಇದನ್ನೂ ಓದಿ : Video : ಸರಿಯಾದ ಸಮಯಕ್ಕೆ ಬಾರದ ಆಂಬ್ಯುಲೆನ್ಸ್, ನಡುರಸ್ತೆಯಲ್ಲೇ ಮಹಿಳೆಗೆ ಹೆರಿಗೆ ಮಾಡಿಸಿದ ನಾರಿಯರು
ಹೌದು, ಮದುವೆ ಮಂಟಪದಲ್ಲಿ ವಧು ವರನಿಗಾಗಿ ಕೂಲರ್ ವ್ಯವಸ್ಥೆ ಮಾಡಲಾಗಿತ್ತು. ಆದರೆ ಹೀಗಿರುವಾಗ ವರನ ಕಡೆಯವರು ಈ ಕೂಲರ್ ಮುಂದೆ ಕುಳಿತು ಗಾಳಿ ಬರುವುದನ್ನು ತಡೆದಿರುವುದೇ ಈ ಜಗಳಕ್ಕೆ ಕಾರಣವಾಗಿದೆ. ಈ ಬಗ್ಗೆ ವಧುವಿನ ಕಡೆಯವರು ಪ್ರಶ್ನೆ ಮಾಡಿದ್ದು, ಬೇರೆ ಕಡೆ ಕುಳಿತುಕೊಳ್ಳುವಂತೆ ಹೇಳಿದ್ದಾರೆ. ಮಾತಿಗೆ ಮಾತು ಬೆಳೆದು ಕೊನೆಗೆ ಹೊಡೆದಾಟ ಹಂತ ತಲುಪಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
Kalesh over standing in front of cooler at a wedding in Jhansi district. Kicks, punches, chairs, tent utensils were thrown at each other, UP pic.twitter.com/3uw27sGdF3
— Ghar Ke Kalesh (@gharkekalesh) May 31, 2025
ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಅರವತ್ತು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರೊಬ್ಬರು, ಉತ್ತರ ಭಾರತೀಯರು ಯಾವುದೇ ಅವಕಾಶವನ್ನು ಬಿಟ್ಟು ಕೊಡುವುದಿಲ್ಲ ಎಂದಿದ್ದಾರೆ. ಇನ್ನೊಬ್ಬರು, ಹೆಚ್ಚಿನ ಮದುವೆಗಳು ಜಗಳದಲ್ಲೇ ಕೊನೆಗೊಳ್ಳುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬ ಬಳಕೆದಾರರು, ಈ ರೀತಿ ಜಗಳ ಆಡುವ ಮುನ್ನ ವಧು ವರರ ತಂದೆ ತಾಯಿಯ ಬಗ್ಗೆ ಕನಿಷ್ಠ ಪಕ್ಷ ಯೋಚಿಸಬೇಕು ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








