AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವರ್ಷಗಳು ಕಳೆದಿದೆ, ಆದರೆ ಇನ್ನೂ ಹಾಗೆಯೇ ಇದೆ, ನಿಮ್ಮ ಭಾಷೆಯಲ್ಲಿ ಇದನ್ನು ಏನೆಂದು ಕರೆಯುತ್ತಾರೆ?

ಸೋಶಿಯಲ್ ಮೀಡಿಯಾದಲ್ಲಿ ಕೆಲವೊಂದು ವಿಡಿಯೋ, ಫೋಟೋಗಳು ನೋಡುಗರ ಗಮನ ಸೆಳೆಯುತ್ತಿರುತ್ತವೆ. ಇನ್ನು ಕೆಲವರು ಹಂಚಿಕೊಳ್ಳುವ ಕುತೂಹಲಕಾರಿ ವಿಚಾರಗಳು ನಿಜಕ್ಕೂ ಹೌದೆನಿಸುತ್ತದೆ. ಇದೀಗ ವೈರಲ್ ಆಗಿರುವ ಪೋಸ್ಟ್ ನಲ್ಲಿ ಸೀರೆಗೆ ಸಿಕ್ಕಿಸುವ ಸೇಫ್ಟಿ ಪಿನ್‌ಗಳು ವರ್ಷಗಳು ಉರುಳಿದರೂ ಇದರ ಆಕಾರ ಹಾಗೂ ವಿನ್ಯಾಸದಲ್ಲಿ ಯಾವುದೇ ಬದಲಾವಣೆ ಕಂಡಿಲ್ಲ. ಈ ಪೋಸ್ಟ್‌ವೊಂದು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಇದು ನಿಜ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ.

ವರ್ಷಗಳು ಕಳೆದಿದೆ, ಆದರೆ ಇನ್ನೂ ಹಾಗೆಯೇ ಇದೆ, ನಿಮ್ಮ ಭಾಷೆಯಲ್ಲಿ ಇದನ್ನು ಏನೆಂದು ಕರೆಯುತ್ತಾರೆ?
ವೈರಲ್ ಪೋಸ್ಟ್ Image Credit source: Twitter
ಸಾಯಿನಂದಾ
|

Updated on: Jun 03, 2025 | 1:23 PM

Share

ಸೇಫ್ಟಿ ಪಿನ್ (safety pin) ಇದು ಎಲ್ಲರಿಗೂ ಚಿರಪರಿಚಿತವಾದ ವಸ್ತು. ಏನಪ್ಪಾ ಇವ್ರು ಸೇಫ್ಟಿ ಪಿನ್ ಬಗ್ಗೆ ಮಾತಾಡ್ತಾ ಇದ್ದರಲ್ಲ, ಏನು ವಿಷ್ಯ ಇರಬಹುದು ಎಂದು ನೀವು ಅಂದುಕೊಳ್ಳಬಹುದು. ಸಾಮಾನ್ಯವಾಗಿ ಹೆಣ್ಣುಮಕ್ಕಳು ಸೀರೆ ಉಡುವಾಗ ಈ ಸೇಫ್ಟಿ ಪಿನ್ ತಪ್ಪದೇ ಬಳಸುತ್ತಾರೆ. ಅದಲ್ಲದೇ ಬಟ್ಟೆಗಳು ಹರಿದಾಗ ಅದನ್ನು ಜೋಡಿಸಲು ಈ ಪಿನ್ ಬೇಕೆ ಬೇಕು. ಇಷ್ಟೆಲ್ಲಾ ಉಪಯೋಗ ಹೊಂದಿರುವ ಈ ಸೇಫ್ಟಿ ಪಿನ್ ಮಾತ್ರ ಆಕಾರ, ವಿನ್ಯಾಸದಲ್ಲಿ ಬದಲಾವಣೆಯನ್ನು ಕಾಣದೇ ಹಾಗೆಯೇ ಉಳಿದಿದೆ ಎನ್ನುವುದು ಅಚ್ಚರಿ ಎನಿಸಬಹುದು. ನೂರ ಎಪ್ಪತ್ತು ವರ್ಷಗಳ ಹಿಂದೆ ಈ ಸೇಫ್ಟಿ ಪಿನ್ ಹೇಗಿತ್ತು, ಈಗ ಹೇಗಿದೆ ಎನ್ನುವ ಪೋಸ್ಟ್‌ವೊಂದು ಸೋಶಿಯಲ್ ಮೀಡಿಯಾ (social media) ದಲ್ಲಿ ವೈರಲ್ ಆಗಿದ್ದು ನೆಟ್ಟಿಗರ ಗಮನ ಸೆಳೆದಿದೆ.

@ThefFigen ಹೆಸರಿನ ಖಾತೆಯಲ್ಲಿ ಪೋಸ್ಟ್ ಶೇರ್ ಮಾಡಿಕೊಳ್ಳಲಾಗಿದ್ದು, ಇದರಲ್ಲಿ ನಾಲ್ಕು ಸೇಫ್ಟಿ ಪಿನ್ ಫೋಟೋವನ್ನು ಹಂಚಿಕೊಳ್ಳಲಾಗಿದೆ. ಇದರಲ್ಲಿರುವ ಸೇಫ್ಟಿ ಪಿನ್ ಚಿತ್ರದ ಕೆಳಗೆ 1849, 1900, 1960, 2025 ಎಂದು ಇಸವಿಯನ್ನು ಬರೆದಿರುವುದನ್ನು ನೋಡಬಹುದು. ನೂರ ಎಪ್ಪತ್ತು ವರ್ಷಗಳು ಉರುಳಿದರೂ ಕೂಡ ಈ ಸೇಫ್ಟಿ ಪಿನ್ ತನ್ನ ವಿನ್ಯಾಸದಲ್ಲಿ ಬದಲಾವಣೆ ಕಾಣದೇ ಹಿಂದೆ ಹೇಗಿತ್ತೋ, ಇವತ್ತಿಗೂ ಹಾಗೆಯೇ ಇರುವುದನ್ನು ನೋಡಬಹುದು.

ಇದನ್ನೂ ಓದಿ
Image
ಮದ್ವೆಯಾಗದಿದ್ರೆ ನಷ್ಟಕ್ಕಿಂತ ಲಾಭವೇ ಹೆಚ್ಚಂತೆ
Image
ಇಂಡೋನೇಷ್ಯಾ ಬಾಲಿಯಲ್ಲಿ ನೀರೊಳಗೆ ವಿಷ್ಣುವಿನ ದೇವಾಲಯ ಪತ್ತೆ?
Image
ಮುಖದ ತುಂಬಾ ಬ್ಯಾಂಡೇಜ್, ಸ್ನೇಹಿತನ ಮದ್ವೆ ನೋಡಲು ಬಂದ ಜೀವದ ಗೆಳೆಯ
Image
ಕೂಲರ್‌ಗಾಗಿ ವಧು ವರನ ಕಡೆಯವರ ನಡುವೆ ಕಿರಿಕ್, ರಣರಂಗವಾಯ್ತು ಕಲ್ಯಾಣ ಮಂಟಪ

ಇದನ್ನೂ ಓದಿ : Video : ತಾತನ ಜತೆಗೆ ಮೊಮ್ಮಗಳ ಸಖತ್​​​​​ ಡ್ಯಾನ್ಸ್​​: ವೈರಲ್​​​​​​ ವಿಡಿಯೋ ಇಲ್ಲಿದೆ ನೋಡಿ

ವೈರಲ್ ಪೋಸ್ಟ್ ಇಲ್ಲಿದೆ ನೋಡಿ

ಈ ಪೋಸ್ಟ್‌ವೊಂದು ಆರು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಈ ಪೋಸ್ಟ್‌ಗೆ ಬಳಕೆದಾರರು ಕಾಮೆಂಟ್ ಗಳನ್ನು ಮಾಡಿದ್ದಾರೆ. ಬಳಕೆದಾರರೊಬ್ಬರು, ಭಾರತದಲ್ಲಿ ಇದು ಸುರಕ್ಷತಾ ಪಿನ್ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಈ ಸೇಫ್ಟಿ ಪಿಕ್ ಕಂಡು ಹಿಡಿದವರ ಹೆಸರು ಐಸಾಕ್ ಪೇಪರ್ ಕ್ಲಿಪ್ ಎಂದಿದ್ದಾರೆ. ಇನ್ನೊಬ್ಬರು, ಇದು ಬಹುಪಯೋಗಿ ವಸ್ತು, ಹರಿದ ಬಟ್ಟೆಗಳನ್ನು ಜೋಡಿಸಲು ಮಾತ್ರವಲ್ಲ, ಯಾರಾದ್ರೂ ತೊಂದರೆ ಮಾಡಿದರೆ ಅವರಿಗೆ ಸರಿಯಾಗಿ ಪಾಠ ಕಲಿಸಲು ಇರುವ ಆಯುಧವೇ ಈ ಪಿನ್ ಎಂದು ಕಾಮೆಂಟ್ ನಲ್ಲಿ ಬರೆದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!