ವರ್ಕ್ ಫ್ರಮ್ ಹೋಮ್ ಪದ್ಧತಿ ಮೊದಲು ಜಾರಿಗೆ ತಂದವರು ಗಣೇಶ್ ಬೀಡಿ ಕಂಪನಿಯಂತೆ
ಬೀಡಿ ಕಟ್ಟುವ ಕಾಯಕವಿಲ್ಲದೇ ಬದುಕು ಸಾಗದು ಎನ್ನುವ ಕಾಲವೊಂದಿತ್ತು. ಈ ಗ್ರಾಮೀಣ ಪ್ರದೇಶದ ಮಹಿಳೆಯರು ಮನೆಯಲ್ಲೇ ಕುಳಿತು ಬೀಡಿ ಕಟ್ಟಿ ಅದರಿಂದ ಬಂದ ಹಣದಿಂದ ಮನೆ ಖರ್ಚು ಹಾಗೂ ಮಕ್ಕಳ ವಿದ್ಯಾಭ್ಯಾಸವನ್ನು ನೋಡಿಕೊಳ್ಳುತ್ತಿದ್ದರು. ಆ ಕಾಲದಲ್ಲೇ ಈ ವರ್ಕ್ ಫ್ರಮ್ ಹೋಂ ಪದ್ಧತಿಯೂ ಹುಟ್ಟಿಕೊಂಡಿತ್ತಂತೆ. ಇದೀಗ ಇದಕ್ಕೆ ಸಂಬಂಧಪಟ್ಟ ಪೋಸ್ಟ್‌ವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಬಳಕೆದಾರರು ಇದು ನೂರಕ್ಕೆ ನೂರರಷ್ಟು ನಿಜ ಎಂದು ಒಪ್ಪಿಕೊಂಡಿದ್ದಾರೆ.

ಈಗಿನ ಕಾಲದಲ್ಲಿ ವರ್ಕ್ ಫ್ರಮ್ ಹೋಮ್ (work from home) ಎನ್ನುವುದು ಎಲ್ಲರ ಬಾಯಲ್ಲಿ ಕೇಳುವಂತಾಗಿದೆ. ಮನೆಯಲ್ಲೇ ಕುಳಿತು ಕೈ ತುಂಬಾ ದುಡಿಯುವ ಅದೆಷ್ಟೋ ಉದ್ಯೋಗಿಗಳನ್ನು ನೀವು ನೋಡಬಹುದು. ಹೌದು, ಕೆಲವೊಂದು ಉದ್ಯೋಗಗಳನ್ನು ಆಫೀಸಿಗೆ ಹೋಗಿ ಮಾಡಬೇಕಾಗಿಲ್ಲ. ಲ್ಯಾಪ್ ಟಾಪ್ ಇದ್ದರೆ ಮನೆಯಲ್ಲೇ ಸುಲಭವಾಗಿ ಕೆಲಸವನ್ನು ಮಾಡಿ ಮುಗಿಸಬಹುದು.ಉದ್ಯೋಗ ಹುಡುಕುವವರು ಮೊದಲು ಕೇಳುವುದೇ ವರ್ಕ್ ಫ್ರಮ್ ಹೋಮ್ ಆಪ್ಶನ್ ಇದೆಯೇ ಎಂದು. ಆದರೆ ಈ ವರ್ಕ್ ಫ್ರಮ್ ಹೋಮ್ ಎನ್ನುವ ಪದ್ಧತಿ ಮೊದಲು ಜಾರಿಗೆ ತಂದವರು ಯಾರು ಎನ್ನುವ ಬಗ್ಗೆ ಯಾವತ್ತಾದ್ರೂ ಯೋಚನೆ ಮಾಡಿದ್ದೀರಾ. ಆದರೆ ಇದಕ್ಕೆ ಉತ್ತರವು ಇದೀಗ ಸಿಕ್ಕಿದ್ದು, ಗಣೇಶ್ ಬೀಡಿ ಕಂಪನಿ (Ganesh beedi company) ಯವರು ಈ ಪದ್ಧತಿಯನ್ನು ಜಾರಿಗೆ ತಂದವರಂತೆ. ಈ ಪೋಸ್ಟ್‌ವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರ ಗಮನ ಸೆಳೆಯುತ್ತಿದೆ.
@raajcar ಹೆಸರಿನ ಖಾತೆಯಲ್ಲಿ ಪೋಸ್ಟ್‌ವೊಂದು ಶೇರ್ ಮಾಡಿಕೊಳ್ಳಲಾಗಿದ್ದು, ವರ್ಕ್ ಫ್ರಮ್ ಹೋಮ್ ಪದ್ಧತಿ ಪ್ರಥಮ ಬಾರಿಗೆ ಜಾರಿಗೆ ತಂದವರು ಗಣೇಶ್ ಬೀಡಿ ಕಂಪನಿ ಎಂದು ಬರೆದಿರುವುದನ್ನು ನೋಡಬಹುದು.ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನಲ್ವತ್ತೇಳು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರು ಇದನ್ನು ನಿಜವೆಂದು ಒಪ್ಪಿಕೊಳ್ಳುವ ಮೂಲಕ ಕಾಮೆಂಟ್ ಗಳನ್ನು ಮಾಡಿದ್ದಾರೆ.
ಇದನ್ನೂ ಓದಿ :Video : ಮಳೆ ಬಂದ್ರೆ ಏನಂತೆ, ಹೊಟ್ಟೆ ಕೇಳುತ್ತಾ : ಒದ್ದೆಯಾಗಿದ್ರೂ ಗಡದ್ದಾಗಿ ಊಟ ಮಾಡಿದ ಪುಣ್ಯಾತ್ಮ
ವೈರಲ್ ಪೋಸ್ಟ್ ಇಲ್ಲಿದೆ ನೋಡಿ
WFH concept was first introduced by Ganesh Beedi company 😀😀 ನಿಜ 🤣🤣😂😂 pic.twitter.com/FVQTJPVRpU
— ಕಾಫಿ ಕುಡ್ಕ (Coffee Kudka) (@raajcar) June 2, 2025
ಬಳಕೆದಾರರ ಕಾಮೆಂಟ್‌ಗಳು ಹೀಗಿವೆ
ಬಳಕೆದಾರರೊಬ್ಬರು, ಹೌದು, ನಮ್ಮ ದಕ್ಷಿಣ ಕನ್ನಡದ ಬಗ್ಗೆ ನಮಗೆ ಹೆಮ್ಮೆ ಇದೆ ಎಂದಿದ್ದಾರೆ. ಮತ್ತೊಬ್ಬರು, ಇದು ನಿಜ ಸರ್, ನಮ್ಮ ಉಡುಪಿಯಲ್ಲಿಯೂ ತುಂಬಾ ಬೀಡಿ ಕಂಪನಿಗಳು ಇದ್ದಾವೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು, ಇದನ್ನು ನೀವು ಹೇಳಿ ಬಿಟ್ರಾ, ಇನ್ನು ಗುಲಾಮರೆಲ್ಲಾ ಓಡಿ ಬರ್ತಾರೆ, ನಾವೇ ಶುರು ಮಾಡಿದ್ದು ಅಂತ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ. ಇನ್ನು ಕೆಲವರು ನಗುವ ಇಮೋಜಿ ಕಳುಹಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ