ಆರ್‌ಸಿಬಿ ಗೆದ್ದ ಖುಷಿಗೆ ಪಬ್ಲಿಕ್‌ನಲ್ಲಿ ಲಿಪ್ ಟು ಲಿಪ್ ಕಿಸ್ ಮಾಡಿದ ಪ್ರೇಮಿಗಳು
18 ವರ್ಷಗಳ ಕಾಯುವಿಕೆ ಕೊನೆಗೂ ಮುಗಿದಿದ್ದು, ಐಪಿಎಲ್ 2025 ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೊದಲ ಬಾರಿಗೆ ಐಪಿಎಲ್ ಟ್ರೋಫಿಯನ್ನು ಗೆದ್ದುಕೊಂಡಿದೆ. ಆರ್‌ಸಿಬಿ ಅಭಿಮಾನಿಗಳ ಖುಷಿಯೂ ಎಲ್ಲೇ ಮೀರಿದ್ದು ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಆರ್‌ಸಿಬಿ ಗೆದ್ದ ಖುಷಿಗೆ ಪ್ರೇಮಿಗಳಿಬ್ಬರೂ ನಡುರಸ್ತೆಯಲ್ಲೇ ಲಿಪ್ ಟು ಲಿಪ್ ಕಿಸ್ ಮಾಡಿದ್ದಾರೆ.ಈ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ಬಳಕೆದಾರರು ಈ ರೀತಿಯೂ ಸೆಲೆಬ್ರೇಟ್ ಮಾಡಿಕೊಳ್ತಾರಾ ಎಂದು ಪ್ರಶ್ನೆ ಮಾಡಿದ್ದಾರೆ.

ಕಳೆದ 17 ವರ್ಷಗಳಿಂದ ಕೈಗೆಟುಕದೇ ಇದ್ದ ಐಪಿಎಲ್ ಟ್ರೋಫಿ (IPL Trophy) ಈ ಬಾರಿ ಆರ್‌ಸಿಬಿ ತಂಡವು ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಹೌದು, ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ (Narendra Modi Stadium in Ahmedabad) ದಲ್ಲಿ ನಡೆದ ಐಪಿಎಲ್ 2025 ರ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (PBKS) ತಂಡವನ್ನು 6 ರನ್‌ಗಳಿಂದ ಆರ್‌ಸಿಬಿ ಸೋಲಿಸಿ ಗೆಲುವು ಸಾಧಿಸಿದೆ. ಕೋಟ್ಯಾಂತರ ಆರ್‌ಸಿಬಿ ಅಭಿಮಾನಿಗಳ ಪ್ರಾರ್ಥನೆ ಕೊನೆಗೂ ಫಲಿಸಿದ್ದು, ಈ ಗೆಲುವು ಆರ್‌ಸಿಬಿ ಅಭಿಮಾನಿಗಳ ಪಾಲಿಗೆ ಖುಷಿ ತಂದು ಕೊಟ್ಟಿದೆ. ಹೀಗಾಗಿ ಅಭಿಮಾನಿಗಳು ಪಟಾಕಿ ಸಿಡಿಸಿ,ಕುಣಿದು ಕುಪ್ಪಳಿಸುವ ಮೂಲಕ ಸಂಭ್ರಮಿಸಿದ್ದಾರೆ. ಆದರೆ ಈ ಪ್ರೇಮಿಗಳು ಆರ್‌ಸಿಬಿ ಗೆದ್ದ ಖುಷಿಗೆ ಪಬ್ಲಿಕ್‌ನಲ್ಲೇ ಲಿಪ್ ಟು ಲಿಪ್ ಕಿಸ್ ಮಾಡಿ ಈ ಗೆಲುವನ್ನು ಸೆಲೆಬ್ರೇಟ್ ಮಾಡಿದ್ದಾರೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ವೈರಲ್ ವಿಡಿಯೋದಲ್ಲಿ ಏನಿದೆ?
shwethaveena3 ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಆರ್ ಸಿಬಿ ತಂಡ ಟ್ರೋಫಿ ಗೆದ್ದದ್ದಕ್ಕೆ ಕುಣಿದು ಕುಪ್ಪಳಿಸಿ ಈ ಗೆಲುವನ್ನು ಸಂಭ್ರಮಿಸಿದರೆ, ಇತ್ತ ಪ್ರೇಮಿಗಳಿಬ್ಬರು ಸಾರ್ವಜನಿಕ ಸ್ಥಳದಲ್ಲಿ ಆರ್‌ಸಿಬಿ ಗೆದ್ದ ಖುಷಿ ಲಿಪ್ ಟು ಲಿಪ್ ಕಿಸ್ ಮಾಡಿಕೊಂಡಿರುವುದನ್ನು ನೀವಿಲ್ಲಿ ನೋಡಬಹುದು.
ಇದನ್ನೂ ಓದಿ : Video : ಪ್ಲೀಸ್ ನನ್ನ ಬಿಟ್ಟೋಗ್ಬೇಡ, ನಿನ್ನ ಜತೆ ನಾನು ಬರ್ತೀನಿ, ಇದೇ ನೋಡಿ ಪ್ರೀತಿ
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಈ ವಿಡಿಯೋವೊಂದು ಹದಿನೇಳು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರು ಕಾಮೆಂಟ್ ಗಳನ್ನು ಮಾಡಿದ್ದಾರೆ. ಬಳಕೆದಾರರೊಬ್ಬರು, ಈ ವರ್ಷ ಸಿಹಿ ಮುತ್ತು, ಮುಂದಿನ ವರ್ಷ ಬ್ರೇಕ್ ಕಾಣಿಸುತ್ತೆ ಎಂದು ಕಾಲೆಳೆದಿದ್ದಾರೆ. ಮತ್ತೊಬ್ಬರು, ಆರ್‌ಸಿಬಿ ಗೆಲ್ಲೋಕೆ 18 ವರ್ಷ ತಕೊಂಡಿದೆ, ಅವನಿಗೆ 18 ನಿಮಿಷನಾದ್ರೂ ಟೈಮ್ ಕೊಡಿ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಈ ಖುಷಿಗೆ ನಂಗೂ ಲವರ್ ಇದ್ದಿದ್ರೆ ಹೀಗೆಯೇ ಮಾಡ್ತಾ ಇದ್ದೆ ಎಂದು ಕಾಮೆಂಟ್ ನಲ್ಲಿ ಬರೆದಿದ್ದಾರೆರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








