Video : ತಾತನ ಜತೆಗೆ ಮೊಮ್ಮಗಳ ಸಖತ್ ಡ್ಯಾನ್ಸ್: ವೈರಲ್ ವಿಡಿಯೋ ಇಲ್ಲಿದೆ ನೋಡಿ
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಕೆಲ ವಿಡಿಯೋಗಳು ಬಾಲ್ಯವನ್ನು ನೆನಪಿಸುತ್ತದೆ. ಅದರಲ್ಲಿಯೂ ಹಿರಿಜೀವಗಳ ಜೊತೆಗೆ ಆಟ, ತುಂಟಾಟ ಹಾಗೂ ಡಾನ್ಸ್ ವಿಡಿಯೋಗಳನ್ನು ನೋಡಿದರೆ ತಾವು ಅಜ್ಜ ಅಜ್ಜಿಯಂದಿರ ಜೊತೆಗೆ ಕಳೆದ ಆ ದಿನಗಳು ಕಣ್ಣೇದುರು ಬರುತ್ತದೆ. ಇದೀಗ ಅಂತಹದ್ದೇ ಒಂದು ವಿಡಿಯೋ ವೈರಲ್ ಆಗಿದ್ದು, ಇಲ್ಲೊಂದು ಪುಟಾಣಿಯೊಂದು ತನ್ನ ಪ್ರೀತಿಯ ಅಜ್ಜನೊಂದಿಗೆ ಡಾನ್ಸ್ ಮಾಡಿದ್ದು, ಈ ಹೃದಯ ಸ್ಪರ್ಶಿ ವಿಡಿಯೋಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮನೆಯಲ್ಲಿ ಹಿರಿಜೀವ (grand parents) ಗಳು ಇದ್ದು ಬಿಟ್ಟರೆ ಅದಕ್ಕಿಂತ ಸಂತೋಷ ಬೇರೇನಿದೆ ಹೇಳಿ, ವಯಸ್ಸಾದ ಕಾಲಘಟ್ಟದಲ್ಲಿ ತಮ್ಮ ಮೊಮ್ಮಕ್ಕಳ ಜೊತೆಗೆ ಸಮಯ ಕಳೆಯುವ ಮೂಲಕ ತಮ್ಮ ಬೇಸರವನ್ನು ಕಳೆದುಕೊಳ್ಳುತ್ತಾರೆ. ಈ ಅಜ್ಜ ಅಜ್ಜಿಯಂದಿರಿಗೂ ಮೊಮ್ಮಕ್ಕಳು ಎಂದರೆ ಜೀವ. ಇನ್ನು ಈ ಪುಟಾಣಿಗಳು ಕೂಡ ಹಿರಿಜೀವಗಳನ್ನು ಹೆಚ್ಚು ಹಚ್ಚಿಕೊಂಡಿರುತ್ತವೆ. ಇದೀಗ ಪುಟಾಣಿಯೊಂದು ತನ್ನ ತಾತನೊಂದಿಗೆ ಡಾನ್ಸ್ ಮಾಡಿದೆ. ಅಷ್ಟೇ ಅಲ್ಲದೇ ಅಜ್ಜ ಸುಸ್ತಾಗಿ ಕುಳಿತಾಗ ತನ್ನ ಪುಟ್ಟ ಪುಟ್ಟ ಕೈಗಳಿಂದ ಹಿರಿಜೀವದ ಕೈ ಕಾಲು ಒತ್ತಿ ಕಾಳಜಿ ವಹಿಸಿದೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾ (social media) ದಲ್ಲಿ ಸಖತ್ ವೈರಲ್ ಆಗಿದ್ದು ನೆಟ್ಟಿಗರ ಹೃದಯಕ್ಕೆ ತೀರಾ ಹತ್ತಿರವಾಗಿದೆ.
ಈ ವಿಡಿಯೋದಲ್ಲಿ ಏನಿದೆ?
theruhafamily ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಈ ವಿಡಿಯೋದಲ್ಲಿ ಅಜ್ಜ ಹಾಗೂ ಮೊಮ್ಮಗಳು ಡಾನ್ಸ್ ಮಾಡುತ್ತಿರುವುದನ್ನು ಕಾಣಬಹುದು. ಮೊಮ್ಮಕ್ಕಳ ಡಾನ್ಸ್ ಕಂಡು ಹಿರಿಜೀವವು ಖುಷಿ ಪಟ್ಟಿದೆ. ಡಾನ್ಸ್ ಮಾಡಿ ಸುಸ್ತಾಗಿ ಅಜ್ಜ ಬೆಡ್ ಮೇಲೆ ಕುಳಿತುಕೊಂಡಿದ್ದಾರೆ. ಈ ವೇಳೆಯಲ್ಲಿ ಮೊಮ್ಮಗಳು ಕಾಳಜಿಯಿಂದ ತನ್ನ ಪ್ರೀತಿಯ ತಾತನ ಕೈ ಕಾಲನ್ನು ಒತ್ತಿ, ಮುತ್ತು ನೀಡಿದ್ದಾಳೆ. ಮೊಮ್ಮಗಳ ಪ್ರೀತಿಗೆ ಅಜ್ಜನು ಸಿಹಿಮುತ್ತನ್ನು ನೀಡಿದ್ದಾರೆ.
ಇದನ್ನೂ ಓದಿ : ಮದ್ವೆಯಾಗದಿದ್ರೆ ನಷ್ಟಕ್ಕಿಂತ ಲಾಭವೇ ಹೆಚ್ಚಂತೆ, ವೈರಲ್ ಆಯ್ತು ಮಹಿಳೆಯ ಪೋಸ್ಟ್
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಬಳಕೆದಾರರ ಕಾಮೆಂಟ್ ಗಳು ಹೀಗಿವೆ
ಈ ವಿಡಿಯೋವೊಂದು ಹನ್ನೆರಡು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಬಳಕೆದಾರರೊಬ್ಬರು, ನಾನು ಕೂಡ ತನ್ನ ಅಜ್ಜನ ಜೊತೆಗೆ ಹೀಗೆ ಇರುತ್ತಿದೆ. ಆದರೆ ನಾನು ಇವತ್ತಿಗೂ ತಾತನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದಾರೆ. ಮತ್ತೊಬ್ಬರು, ಇಬ್ಬರಲ್ಲಿಯೂ ಮುಗ್ಧತೆಯಿದೆ. ಈ ಪ್ರೀತಿಯೂ ನಿಜಕ್ಕೂ ಶಾಶ್ವತ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ. ಇನ್ನೊಬ್ಬರು, ಈ ವಿಡಿಯೋ ನನ್ನ ಕಣ್ಣನ್ನು ಒದ್ದೆಯಾಗಿಸಿತು ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ. ಇನ್ನು ಕೆಲವರು ಈ ವಿಡಿಯೋಗೆ ಹಾರ್ಟ್ ಸಿಂಬಲ್ ಕಳುಹಿಸುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:33 am, Tue, 3 June 25








