Video : ಪ್ಲೀಸ್ ನನ್ನ ಬಿಟ್ಟೋಗ್ಬೇಡ, ನಿನ್ನ ಜತೆ ನಾನು ಬರ್ತೀನಿ, ಇದೇ ನೋಡಿ ಪ್ರೀತಿ
ನಿಷ್ಕಲ್ಮಶ ಪ್ರೀತಿಗೆ ಮತ್ತೊಂದು ಹೆಸರೇ ಈ ಶ್ವಾನ, ಒಂದೊತ್ತು ಊಟ ಹಾಕಿದರೆ ಸಾಕು, ಜೀವಮಾನವಿಡೀ ಮನೆ ಮಾಲೀಕನಿಗೆ ನಿಯತ್ತಾಗಿರುತ್ತೆ ಈ ಶ್ವಾನ. ಹೌದು, ಮಾಲೀಕ ಮನೆಗೆ ಬಂದೊಡನೆ ಮೈ ಮೇಲೆ ಜಿಗಿಯುತ್ತ ತನ್ನ ಪ್ರೀತಿಯನ್ನು ವ್ಯಕ್ತಪಡಿಸುತ್ತದೆ. ಇದಕ್ಕೆ ನಿದರ್ಶನದಂತಿರುವ ವಿಡಿಯೋವೊಂದು ವೈರಲ್ ಆಗಿದ್ದು, ಮನೆ ಮಾಲೀಕನು ಮನೆಯ ಮುದ್ದಿನ ಶ್ವಾನದ ಕಣ್ಣು ತಪ್ಪಿಸಿ ಹೊರಗೆ ಹೋಗಲು ಹರಸಾಹಸ ಪಟ್ಟಿದ್ದಾನೆ. ಈ ವಿಡಿಯೋ ನೋಡಿದ ಬಳಕೆದಾರರು ಈ ನಿಷ್ಕಲ್ಮಶ ಶ್ವಾನ ಪ್ರೀತಿಯನ್ನು ಮೆಚ್ಚಿಕೊಂಡಿದ್ದಾರೆ.
ಈ ಶ್ವಾನ (dog) ಗಳಿಗೆ ಮನೆ ಮಾಲೀಕರೆಂದರೆ ಎಲ್ಲಿಲ್ಲದ ಪ್ರೀತಿ. ಕೆಲವೊಮ್ಮೆ ಈ ಶ್ವಾನಗಳು ಸಂಜೆಯಾಗುತ್ತಿದ್ದಂತೆ ಮನೆ ಮಾಲೀಕ ಬರುವ ದಾರಿಯನ್ನೇ ಕಾಯುತ್ತ ಕುಳಿತಿರುತ್ತವೆ. ಅಷ್ಟೇ ಅಲ್ಲದೇ, ಮಾಲೀಕ ಎಲ್ಲಿ ಹೋಗುತ್ತಾನೆ ಆತನನ್ನೇ ಹಿಂಬಾಲಿಸಿಕೊಂಡು ಹೋಗುವುದನ್ನು ನೀವು ನೋಡಿರಬಹುದು. ಆದರೆ ಇದೀಗ ವಿಡಿಯೋ (video) ವೊಂದು ವೈರಲ್ ಆಗಿದ್ದು, ಮನೆ ಮಾಲೀಕನು ಹೊರಗೆ ಹೋಗದಂತೆ ತಡೆದು ಶ್ವಾನವು ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದ್ದು, ಕೊನೆಗೆ ಗೇಟ್ ಹಾರಿ ಅದೇಗೋ ಶ್ವಾನದ ಕೈಯಿಂದ ತಪ್ಪಿಸಿಕೊಂಡು ಮನೆ ಮಾಲೀಕನು ಹೊರಗೆ ಹೋಗಿದ್ದಾನೆ. ಈ ಹೃದಯಸ್ಪರ್ಶಿ ವಿಡಿಯೋವೊಂದು ನೆಟ್ಟಿಗರ ಹೃದಯ ಗೆದ್ದುಕೊಂಡಿದೆ.
ವೈರಲ್ ವಿಡಿಯೋದಲ್ಲಿ ಏನಿದೆ?
Quickheadlineindia ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋಗೆ ಮನೆ ಬಿಡೋದು ಇಷ್ಟೊಂದು ಕಷ್ಟನಾ ಎನ್ನುವ ಶೀರ್ಷಿಕೆಯನ್ನು ನೀಡಲಾಗಿದೆ. ಈ ವಿಡಿಯೋದಲ್ಲಿ ಶ್ವಾನವೊಂದು ಮನೆ ಮಾಲೀಕನು ಹೊರಗೆ ಹೋಗುವುದನ್ನು ತಡೆದು ನಿಲ್ಲಿಸಿ ತಾನು ಬರ್ತೇನೆ ಎನ್ನುವಂತೆ ಈ ದೃಶ್ಯವಿದೆ. ಆದರೆ ಮನೆ ಮಾಲೀಕ ಅದೇಗೋ ಹರಸಾಹಸ ಮಾಡಿ ಶ್ವಾನದ ಕೈಯಿಂದ ತಪ್ಪಿಸಿಕೊಂಡು ಹೋಗುವುದನ್ನು ನೋಡಬಹುದು. ಮೈ ಮೇಲೆ ಜಿಗಿಯುತ್ತ ಹಠ ಮಾಡುತ್ತಾ ಇದ್ದ ಈ ಶ್ವಾನದ ಕೈಯಿಂದ ತಪ್ಪಿಸಿಕೊಂಡು ಹೋಗಲು ಮಾಲೀಕನು ಮನೆಯ ಗೇಟ್ ಹಾರಿರುವುದನ್ನು ನೀವಿಲ್ಲಿ ನೋಡಬಹುದು. ಗೇಟ್ ಹಾರಿ ಬೈಕ್ ಏರಿ ಹೊರಟ ಮನೆ ಮಾಲೀಕನನ್ನು ನೋಡಿದ ಶ್ವಾನವು ಬೇರೆ ದಾರಿಯಲ್ಲಿ ಹಿಂಬಾಲಿಸಲು ಪ್ರಯತ್ನಿಸಿದೆ.
ಇದನ್ನು ಓದಿ : ವರ್ಕ್ ಫ್ರಮ್ ಹೋಮ್ ಪದ್ಧತಿ ಮೊದಲು ಜಾರಿಗೆ ತಂದವರು ಗಣೇಶ್ ಬೀಡಿ ಕಂಪನಿಯಂತೆ
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಬಳಕೆದಾರರ ಕಾಮೆಂಟ್ ಹೀಗಿವೆ
ಈ ವಿಡಿಯೋವೊಂದು 20 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರು ಈ ನಿಷ್ಕಲ್ಮಶ ಪ್ರೀತಿಗೆ ಕಳೆದುಹೋಗಿದ್ದಾರೆ. ಬಳಕೆದಾರರೊಬ್ಬರು, ಈ ಪ್ರೀತಿಯೂ ಶ್ವಾನ ಪ್ರೇಮಿಗಳಿಗೆ ಮಾತ್ರ ಅರ್ಥವಾಗುತ್ತದೆ ಎಂದಿದ್ದಾರೆ. ಮತ್ತೊಬ್ಬರು, ಬೆಕ್ಕು ಈ ರೀತಿ ನಿಮ್ಮನ್ನು ಪ್ರೀತಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಇನ್ನೊಬ್ಬ ಬಳಕೆದಾರರು, ನಮ್ಮ ಮನೆಯ ನಾಯಿದು ಇದೆ ಕಥೆ,ಅದರ ಕಣ್ಣು ತಪ್ಪಿಸಿ ಹೋಗಬೇಕೆಂದರೆ ಸಾಕಾಗಿ ಹೋಗುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








